ಮಡಿಕೇರಿ, ಅ. ೩೧: ಕೊಡಗು ಜಿಲ್ಲಾ ಬಿಜೆಪಿ ಸಮಿತಿಯು ಯಥಾವತ್ತಾಗಿ ಮುಂದುವರಿಯಲಿದೆ. ರಾಬಿನ್ ದೇವಯ್ಯ ಅಧ್ಯಕ್ಷತೆಯಲ್ಲಿ ಸಮಿತಿಯು ಕಾರ್ಯ ನಿರ್ವಹಿಸಲಿದೆ. ಯಾವದೇ ಬದಲಾವಣೆಯಿಲ್ಲ ಎಂದು ರಾಜ್ಯ ಬಿಜೆಪಿ ಅಧ್ಯಕ್ಷ ನಳೀನ್ ಕುಮಾರ್ ಕಟೀಲ್ ಖಚಿತಪಡಿಸಿದರು.

ಇಂದು ಮಡಿಕೇರಿಯಲ್ಲಿ “ಶಕ್ತಿ”ಯೊಂದಿಗೆ ಅವರು ಮಾತನಾಡುತ್ತಿದ್ದರು. ಕೊಡಗು ಜಿಲ್ಲೆ ಸಚಿವ ಸ್ಥಾನದಿಂದ ವಂಚಿತವಾಗಿದ್ದು ಈ ಬಗ್ಗೆ ಪಕ್ಷದ ನಿಲುವೇನು? ಎಂದು ಪ್ರಶ್ನಿಸಲಾಯಿತು. ಮುಂದಿನ ಸಂದರ್ಭ ಸಚಿವ ಸಂಪುಟದಲ್ಲಿ ಸ್ಥಾನ ಕಲ್ಪಿಸುವಾಗ ಸಾಮಾಜಿಕ ಹಾಗೂ ಭೌಗೋಳಿಕವಾಗಿ ಆದ್ಯತೆ ನೀಡಲು ಪಕ್ಷ ಚಿಂತನೆ ಹರಿಸಿದೆ ಎಂದರು.

ಮುAದಿನ ಚುನಾವಣೆಗಳನ್ನು ಯಾರ ನೇತೃತ್ವದಲ್ಲಿ ನಡೆಸಲಾಗುತ್ತದೆ ಎಂದಾಗ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮಾರ್ಗದರ್ಶನದಲ್ಲಿ ಚುನಾವಣೆ ಎದುರಿಸಲಾಗುತ್ತದೆ. ಸಾಮೂಹಿಕವಾಗಿ ಪಕ್ಷದ ಇತರ ಪ್ರಮುಖರೂ ಪಾಲ್ಗೊಳ್ಳುವಿಕೆ ಮೂಲಕ ರಾಜ್ಯದಲ್ಲಿ ೧೫೦ ಕ್ಕಿಂತಲೂ ಅಧಿಕ ಸ್ಥಾನಗಳ ಗಳಿಕೆಯೊಂದಿಗೆ ಮತ್ತೊಮ್ಮೆ ಬಿಜೆಪಿ ಅಧಿಕಾರಕ್ಕೆ ಬರುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಕೊಡಗಿನಲ್ಲಿ ಆನೆ ಧಾಳಿ, ವನ್ಯಮೃಗ ಹಾವಳಿ ಮುಂದುವರಿದಿದ್ದು ಈ ಬಗ್ಗೆ ಪಕ್ಷ ಏನು ಮಾಡುತ್ತದೆ ಎಂದು ಕೇಳಿದಾಗ ಸಂಬAಧಿಸಿದ ಸಚಿವರುಗಳೊಂದಿಗೆ ಚರ್ಚಿಸಿ ಸಮಸ್ಯೆ ಪರಿಹರಿಸಲು ಪ್ರಯತ್ನಿಸುವುದಾಗಿ ಆಶ್ವಾಸನೆಯಿತ್ತರು. ಕೆಲವೆಡೆ ನೈತಿಕ ಪೊಲೀಸ್ ಗಿರಿ ಜಾಸ್ತಿಯಾಗುತ್ತಿದೆ ಎನ್ನುವ ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು ಅಂತಹ ಘಟನೆಗಳಿಲ್ಲ. ಕಾನೂನು ಸುವ್ಯವಸ್ಥಿತವಾಗಿದೆ. ಯಾರೇ ಆದರೂ ಕಾನೂನಾತ್ಮಕ ವಿಚಾರಗಳಿಗೆ ಸಂಬAಧಿಸಿದAತೆ ತಾವೇ ಕಾನೂನನ್ನು ಕೈಗೆ ತೆಗೆದುಕೊಳ್ಳದೆ ಕಾನೂನಾತ್ಮಕವಾಗಿಯೇ ಹೋರಾಟ ನಡೆಸುವಂತೆ ಕಟೀಲ್ ಸಲಹೆಯಿತ್ತರು.

ಜಗದೀಶ್ ಶೆಟ್ಟರ್ ಸಹಮತ

ಈ ನಡುವೆ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರು ‘ಶಕ್ತಿ’ಯೊಂದಿಗೆ ಇಂದು ಮಡಿಕೇರಿಯಲ್ಲಿ ಮಾತನಾಡುತ್ತ ಕೊಡಗು ಜಿಲ್ಲೆಗೆ ಸಚಿವ ಸ್ಥಾನ ನೀಡುವ ವಿಚಾರದಲ್ಲಿ ತನ್ನ ಸಹಮತವಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.