ಮಡಿಕೇರಿ, ಅ. ೩೦: ಬ್ರಾಹ್ಮಣ ವಿದ್ಯಾಭಿವೃದ್ಧಿ ನಿಧಿ ಕೊಡಗು ಕೇಂದ್ರದ ಶತಮಾನೋತ್ಸವ ಕಾರ್ಯಕ್ರಮದ ಅಂಗವಾಗಿ ವೀರಾಜಪೇಟೆ ತಾಲೂಕು ಘಟಕದ ಆಶ್ರಯದಲ್ಲಿ ವಿಪ್ರ ಸಮುದಾಯದವರಿಗಾಗಿ ವಿವಿಧ ಸ್ಪರ್ಧೆ ಆಯೋಜಿಸಲಾಗಿದೆ.
ನವೆÀಂಬರ್ ೧ ರಂದು ಸೋಮವಾರ ಸಂಜೆ ೪ ಗಂಟೆಗೆ ವೀರಾಜಪೇಟೆಯ ದೊಡ್ಡಟ್ಟಿ ಚೌಕ್ ಬಳಿಯಿರುವ ಶಾನ್ ಭಾಗ್ ಸೆಂಟರ್‌ನಲ್ಲಿ ಸ್ಪರ್ಧೆಗಳು ಆಯೋಜಿತವಾಗಿದೆ. ವೀರಾಜಪೇಟೆ ತಾಲೂಕಿನ ಹಾಗೂ ಈ ವ್ಯಾಪ್ತಿಯ ವಿಪ್ರ ಜನಾಂಗದವರಿಗೆ ದೇವರನಾಮ, ಭಾವಗೀತೆ, ರಂಗೋಲಿ ಬಿಡಿಸುವುದು, ಹಗ್ಗ ಜಿಗಿತ, ಚದುರಂಗ, ಕಗ್ಗ, ಚನ್ನಮಣೆ, ಚೌಕಬಾರ ಆಟದ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ. ಸ್ಪರ್ಧೆಗಳಿಗೆ ನೋಂದಾಯಿಸಲು ಕೊನೇ ದಿನಾಂಕ - ೩೧.೧೦.೨೦೨೧.
ಸ್ಪರ್ಧೆಗೆ ನೋಂದಾಯಿಸಲು ಮತ್ತು ಹೆಚ್ಚಿನ ಮಾಹಿತಿಗೆ ಕರೆ ಮಾಡಬೇಕಾದ ಸಂಖ್ಯೆ -೯೪೮೨೦೨೧೧೧೨, ೯೭೪೦೬೩೮೦೧೮.