ಮಡಿಕೇರಿ, ಅ. ೨೯: ತ್ರಿಪುರಾದಲ್ಲಿ ಮುಸ್ಲಿಮರ ಮೇಲಿನ ಸರಕಾರಿ ಪ್ರೇರಿತ ದಾಳಿಯನ್ನು ಖಂಡಿಸಿ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ, ಕೊಡಗು ಜಿಲ್ಲಾ ಸಮಿತಿ ವತಿಯಿಂದ ಮಡಿಕೇರಿಯ ಚೌಕಿ ವೃತ್ತದಲ್ಲಿ ಪ್ರತಿಭಟನೆ ನಡೆಯಿತು.

ಪಿ.ಎಫ್.ಐ. ಕೊಡಗು ಜಿಲ್ಲಾಕಾರ್ಯದರ್ಶಿ ತುಫೈಲ್ ಮಾತನಾಡಿ ತ್ರಿಪುರಾದ ಘಟನೆಗಳು ಇಂದು ದೇಶದ ವಿವಿಧ ಭಾಗಗಳಲ್ಲಿ ಮರುಕಳಿಸುತಿದ್ದು, ಇದು ಖಂಡನೀಯ ಎಂದರು.

ಎಸ್‌ಡಿಪಿಐ ಕೊಡಗು ಜಿಲ್ಲಾ ಮಾಜಿ ಅಧ್ಯಕ್ಷ ನಗರ ಸಭಾ ಸದಸ್ಯ ಅಮಿನ್ ಮೊಹ್ಸಿನ್ ಮಾತನಾಡಿ, ಈ ಹತ್ಯೆ ಭಯೋತ್ಪಾದನೆಯನ್ನು ನಿಲ್ಲಿಸಲು ದೇಶದ ಕಾನೂನು ಸರಿಯಾಗಿ ಪಾಲನೆಯಾದರೆ ಮಾತ್ರ ಸಾಧ್ಯ. ಹಿಂಸಾಚಾರದ ಮೂಲಕ ನಮ್ಮ ದೇಶದಲ್ಲಿ ಮುಸಲ್ಮಾನರನ್ನು ಗುರಿಯಾಗಿಸಿದರೆ ನಾವು ಪ್ರತಿರೋಧವನ್ನು ಒಡ್ಡಲು ತಯಾರಾಗಿದ್ದೇವೆ ಎಂದು ಗುಡುಗಿದರು.

ಈ ಸಂದರ್ಭ ಪಿ.ಎಫ್.ಐ ಮುಖಂಡ ರಿಯಾಝ್ ಮಡಿಕೇರಿ ಸೇರಿದಂತೆ ಪದಾಧಿಕಾರಿಗಳು, ಹಲವಾರು ಕಾರ್ಯಕರ್ತರು ಹಾಜರಿದ್ದರು.