ಮಡಿಕೇರಿ, ಅ. ೩೦: ಮಡಿಕೇರಿ ತಾಲೂಕಿನ ತಾಳತ್ತಮನೆ, ಮೇಕೇರಿ ಬೈಪಾಸ್ ರಸ್ತೆ ಕಾಮಗಾರಿಗೆ ಶಾಸಕ ಕೆ.ಜಿ. ಬೋಪಯ್ಯ ಭೂಮಿಪೂಜೆ ನೆರವೇರಿಸಿದರು.

ರೂ. ೨೨೫ ಲಕ್ಷಗಳಲ್ಲಿ ಕಾಟಕೇರಿ-ಉಡೋತ್‌ಮೊಟ್ಟೆ ರಸ್ತೆ ಸರಪಳಿ ೨.೫೦ ರಿಂದ ೩.೫೦ ರವರೆಗೆ ರಸ್ತೆ ಸುರಕ್ಷತಾ ಕಾಮಗಾರಿ, ಕಗ್ಗೋಡ್ಲು-ಕಾಟಕೇರಿ ರಸ್ತೆ ಸರಪಳಿ ೧.೫೦ ರಿಂದ ೨.೫೦ ರವರೆಗೆ ರಸ್ತೆ ಅಭಿವೃದ್ಧಿ ಕಾಮಗಾರಿ, ರೂ. ೧೦ ಲಕ್ಷದಲ್ಲಿ ಕಗ್ಗೋಡ್ಲು, ಕಾಟಕೇರಿ ರಸ್ತೆ ಸರಪಳಿ ೦.೭೦ ರಿಂದ ೧.೫೦ ರವರೆಗೆ ಭಾರೀ ಮಳೆಯಿಂದ ಕೊರೆದಿರುವ ಭಾಗದ ದುರಸ್ತಿ ಮತ್ತು ಅಭಿವೃದ್ಧಿ, ರೂ. ೧೬೭ ಲಕ್ಷದಲ್ಲಿ ಕಗ್ಗೋಡ್ಲು-ಕಾಟಕೇರಿ ರಸ್ತೆ ಸರಪಳಿ ೦.೦೦ ರಿಂದ ೨.೦೦ ರವರೆಗೆ ಮಳೆಯಿಂದ ಹಾನಿಯಾಗಿರುವ ರಸ್ತೆ ಅಭಿವೃದ್ಧಿ ಸೇರಿದಂತೆ ಒಟ್ಟು ರೂ. ೪೦೨ ಲಕ್ಷಗಳಲ್ಲಿ ಕಾಮಗಾರಿ ನಡೆಯಲಿದೆ.

ಗುಣಮಟ್ಟದ ಕಾಮಗಾರಿಗೆ ಒತ್ತು ನೀಡುವಂತೆ ಶಾಸಕ ಬೋಪಯ್ಯ ಇದೇ ಸಂದರ್ಭ ತಿಳಿಸಿದರು. ಮದೆ ಗ್ರಾ.ಪಂ. ಸದಸ್ಯ ಜೀವನ್ ಕುಮಾರ್, ನವೀನ, ಮೇಕೇರಿ ಗ್ರಾ.ಪಂ. ಅಧ್ಯಕ್ಷ ಬಿ.ಬಿ. ದಿನೇಶ್, ಸದಸ್ಯ ಎಂ.ಯು. ಹನೀಫ್ ಗುತ್ತಿಗೆದಾರರ ಎಸ್.ಎಸ್. ರಾಜೇಂದ್ರ, ಬಿ.ಪಿ. ರಾಜೀವ ಲೋಚನ, ಯತೀಶ್, ಕವನ್, ಸಾಕಿಬ್ ಹಾಗೂ ಗ್ರಾಮಸ್ಥರು ಈ ಸಂದರ್ಭ ಹಾಜರಿದ್ದರು.