ಮಡಿಕೇರಿ, ಅ. ೩೦: ಕೊಡವ ಜನಾಂಗದ ಹಕ್ಕು ಬಾಧ್ಯತೆಗಳ ಕುರಿತಾಗಿ ಬೇಡಿಕೆ ಮುಂದಿರಿಸಿ ಹೋರಾಟ ನಡೆಸುತ್ತಿರುವ ಸಿಎನ್‌ಸಿ ಸಂಘಟನೆ ವತಿಯಿಂದ ನವೆಂಬರ್ ೧ ರಂದು (ನಾಳೆ) ಬೆಳಿಗ್ಗೆ ೧೦ ರಿಂದ ಈ ಬಗ್ಗೆ ಮಡಿಕೇರಿಯಲ್ಲಿರುವ ಕೊಡವ ಮಂದ್‌ನಲ್ಲಿ ಶಾಂತಿಯುತ ಸತ್ಯಾಗ್ರಹ ನಡೆಯಲಿದೆ. ಈ ಹಿಂದಿನ ವರ್ಷಗಳಲ್ಲಿ ರಾಜ್ಯೋತ್ಸವ ದಿನದಂದು ನವದೆಹಲಿಯಲ್ಲಿ ಧರಣಿಯೊಂದಿಗೆ ಸಂಬAಧಿಸಿದವರಿಗೆ ಸಂಘಟನೆಯಿAದ ಮನವಿ ಸಲ್ಲಿಸಲಾಗುತ್ತಿತ್ತು.

ಇದೀಗ ಕೋವಿಡ್ ಪರಿಸ್ಥಿತಿಯಿಂದಾಗಿ ಈ ವರ್ಷವೂ ಜಿಲ್ಲಾ ಕೇಂದ್ರದಲ್ಲಿ ಬೇಡಿಕೆಗಳನ್ನು ಮುಂದಿರಿಸಿ ಸತ್ಯಾಗ್ರಹ ನಡೆಸಲಾಗುತ್ತಿದೆ ಎಂದು ಸಂಘಟನೆ ಅಧ್ಯಕ್ಷ ಎನ್.ಯು. ನಾಚಪ್ಪ ತಿಳಿಸಿದ್ದಾರೆ.