ಪೊನ್ನಂಪೇಟೆ, ಅ. ೩೧: ಪೋಷಕರೊಂದಿಗೆ ನಡೆದ ಕಲಹದಿಂದ ಮನನೊಂದು ಅಕ್ಕ ತಂಗಿ ಇಬ್ಬರೂ ಕೆರೆಗೆ ಹಾರಿ ಆತ್ಮಹತ್ಯೆಗೆ ಶರಣಾದÀ ಘಟನೆ ಪೊನ್ನಂಪೇಟೆ ತಾಲೂಕಿನ ಬಿ.ಶೆಟ್ಟಿಗೇರಿ ಗ್ರಾಮದಲ್ಲಿ ನಡೆದಿದೆ. ಬಿ.ಶೆಟ್ಟಿಗೇರಿ ಗ್ರಾಮದ ನಾಮೆರ ಉದಯ ಉತ್ತಪ್ಪ ಎಂಬವರ ಹಿರಿಯ ಪುತ್ರಿ ನಿಖಿತ ದಮಯಂತಿ (೨೦) ಹಾಗೂ ಕಿರಿಯ ಪುತ್ರಿ ಹರ್ಷಿತ ಭಾವನ (೧೮) ಮೃತ ದುರ್ದೈವಿಗಳು. ತಮ್ಮ ಅಜ್ಜಿಯ ಮನೆಯಲ್ಲಿ ಇಂದು ನಡೆಯುತಿದ್ದ ಗುರುಕಾರೋಣರ ಸ್ಮರಣೆ ಕಾರ್ಯಕ್ರಮಕ್ಕೆ ಸಹೋದರಿಯರು ಹೋಗುತ್ತೇವೆ ಎಂದಾಗ, ತಂದೆ ಅವರನ್ನು ಕಳುಹಿಸಲಿಲ್ಲ ಎಂಬ ಕಾರಣದಿಂದ ಮನನೊಂದು ಸಹೋದರಿಯರು ಇಂದು ಬೆಳಗ್ಗೆ ಸುಮಾರು ೯ ಗಂಟೆ ಸಮಯದಲ್ಲಿ ಮನೆಯ ಸಮೀಪದ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದು, ಬೆಳಗ್ಗೆ ೧೦ ಗಂಟೆ ವೇಳೆಗೆ ವಿಷಯ ಬೆಳಕಿಗೆ ಬಂದಿದೆ.
ಮೃತೆ ನಿಖಿತ ದಮಯಂತಿ ಪೊನ್ನಂಪೇಟೆಯ ಸಿಐಟಿ ಕಾಲೇಜಿನ ಇಂಜಿನಿಯರಿAಗ್ ವಿದ್ಯಾರ್ಥಿನಿ ಹಾಗೂ ಹರ್ಷಿತ ಭಾವನ ವೀರಾಜಪೇಟೆ ಕಾವೇರಿ ಪದವಿ ಕಾಲೇಜಿನ ವಿದ್ಯಾರ್ಥಿನಿಯಾಗಿದ್ದಾರೆ. ಗೋಣಿಕೊಪ್ಪ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಠಾಣಾಧಿಕಾರಿ ಸುಬ್ಬಯ್ಯ, ಉಪ ಠಾಣಾಧಿಕಾರಿ ಸುಬ್ರಮಣಿ ಹಾಗೂ ಸಿಬ್ಬಂದಿ ಘಟನೆ ನಡೆದ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದರು. ಗೋಣಿಕೊಪ್ಪ ಆರೋಗ್ಯ ಕೇಂದ್ರದಲ್ಲಿ ಮರಣೋತ್ತರ ಪರೀಕ್ಷೆ ನಡೆಸಿದ ನಂತರ ಮೃತ ದೇಹಗಳನ್ನು ಪೋಷಕರಿಗೆ ಒಪ್ಪಿಸಲಾಯಿತು.