ಗೋಣಿಕೊಪ್ಪಲು, ಅ. ೨೯: ಕಾನೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಿಯಮಿತದ ಸ್ವಾಧೀನದಲ್ಲಿದ್ದ ೫೦ ಎಕರೆ ತೋಟದಲ್ಲಿ ಬೆಳೆದಿದ್ದ ಬಹು ಪಾಲು ಕಾಫಿಯನ್ನು ಸಹಕಾರ ಸಂಘದ ಗೋದಾಮಿಗೆ ತರದೆ ನೇರವಾಗಿ ತೋಟದಿಂದ ಕಾಫಿ ಮಿಲ್ಲಿಗೆ ಮಾರಾಟ ಮಾಡಿ ಸಂಘದ ಹಣವನ್ನು ದುರುಪಯೋಗಪಡಿಸಿಕೊಂಡಿದ್ದಾರೆ ಎಂಬ ಆರೋಪದಡಿಯಲ್ಲಿ ಸಂಸ್ಥೆಯ ಅಧ್ಯಕ್ಷರ ಮೇಲೆ ಪೊನ್ನಂಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ದೂರುದಾರ ಕಾನೂರಿನ ಎಸ್.ಎಂ. ಧನಂಜಯ್ ಅವರು ಈ ಪ್ರಕರಣಕ್ಕೆ ಸಂಬAಧಿಸಿದAತೆ ಉಚ್ಚ ನ್ಯಾಯಾಲಯದ ಮೊರೆ ಹೋಗಿದ್ದರು. ಇದೀಗ ಉಚ್ಚ ನ್ಯಾಯಾಲಯದ ಆದೇಶದಂತೆ ಕೊಡಗು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಸೂಚನೆ ಅನ್ವಯ ಸಂಸ್ಥೆಯ ಅಧ್ಯಕ್ಷರ ಮೇಲೆ ಸೆಕ್ಷನ್ ೪೦೬, ೪೦೮ರಡಿ ಮೋಸ, ವಂಚನೆ, ಕಳ್ಳತನ ಆರೋಪದಂತೆ ಪ್ರಕರಣ ದಾಖಲಾಗಿದೆ.

೨೦೧೯-೨೦ನೇ ಸಾಲಿನಲ್ಲಿ ಸಂಸ್ಥೆಯ ಸ್ವಾಧೀನದಲ್ಲಿರುವ ೫೦ ಎಕರೆ ಕಾಫಿ ತೋಟದಲ್ಲಿ ಬೆಳೆದಿದ್ದ ಕಾಫಿಯನ್ನು ತೋಟದಿಂದಲೇ ನೇರವಾಗಿ ಮಾರಾಟ ಮಾಡಿದ್ದಾರೆ ಎಂದು ದೂರುದಾರ ಧನಂಜಯ್ ಗಂಭೀರವಾಗಿ ಆರೋಪಿಸಿ ಕ್ರಮ ಕೈಗೊಳ್ಳಬೇಕೆಂದು ನ್ಯಾಯಾಲಯದ ಮೆಟ್ಟಿಲೇರಿದ್ದರು. ಪೊಲೀಸ್ ವರಿಷ್ಠಾಧಿಕಾರಿಗಳ ಸಮ್ಮುಖದಲ್ಲಿಯೇ ತನಿಖೆ ನಡೆಸಿ ಸಂಸ್ಥೆಗಾದ ನಷ್ಟವನ್ನು ಇವರಿಂದ ಭರಿಸುವಂತೆ ತಮ್ಮ ಲಿಖಿತ ದೂರಿನಲ್ಲಿ ತಿಳಿಸಿದ್ದರು.