ನಾಪೋಕ್ಲು, ಅ. ೨೯: ಇತ್ತೀಚೆಗೆ ಮೈಸೂರಿನಲ್ಲಿ ನಡೆದ ೧೪ನೇ ರಾಜ್ಯ ಮಟ್ಟದ ಮೈಸೂರು ನಾಡಹಬ್ಬ ಕರಾಟೆ ಚಾಂಪಿಯನ್‌ಶಿಪ್‌ನ ಕಟಾ ವಿಭಾಗದ ಸ್ಪರ್ಧೆಯಲ್ಲಿ ಮೂರ್ನಾಡು ಪ್ರೌಢಶಾಲೆಯ ೮ನೇ ತರÀಗತಿ ವಿದ್ಯಾರ್ಥಿ ಚೆಟ್ಟಿಯಾರಂಡ ದೀರಜ್ ಕಾರ್ಯಪ್ಪ ಪ್ರಥಮ ಹಾಗೂ ಮೂರ್ನಾಡು ಪದವಿಪೂರ್ವ ಕಾಲೇಜಿನ ಪ್ರಥಮ ಪಿ.ಯು.ಸಿ. ವಿದ್ಯಾರ್ಥಿ ಚೆಟ್ಟಿಯಾರಂಡ ದಿಲನ್ ತಿಮ್ಮಯ್ಯ ದ್ವಿತೀಯ ಸ್ಥಾನ ಪಡೆದು ಸಾಧನೆ ಮಾಡಿದ್ದಾರೆ. ಅಂರ‍್ರಾಷ್ಟಿçÃಯ ತೀರ್ಪುಗಾರ ಸೆನ್ಸಾಯಿ ನಾಗೇಂದ್ರಪ್ಪ ಅವರು ವಿದ್ಯಾರ್ಥಿಗಳಿಗೆ ತರಬೇತಿ ನೀಡಿದ್ದಾರೆ. ನೆಲಜಿ ಗ್ರಾಮದ ಚೆಟ್ಟಿಯಾರಂಡ ಮನು ಮತ್ತು ಸವಿ ದಂಪತಿ ಪುತ್ರರಾಗಿದ್ದಾರೆ.