ಮಡಿಕೇರಿ, ಅ. ೨೯: ಅತಿಯಾದ ಮೊಬೈಲ್ ಫೋನ್ ಬಳಕೆಯಿಂದ ಮನುಷ್ಯನ ದೈಹಿಕ ಆರೋಗ್ಯ ದೊಂದಿಗೆ ಮಾನಸಿಕ ಆರೋಗ್ಯವೂ ಗಣನೀಯವಾಗಿ ಹದಗೆಡುತ್ತದೆ. ಮೊಬೈಲ್ ಹ್ಯಾಂಡ್‌ಸೆಟ್ ಸಂರಕ್ಷಣೆ ಬಗ್ಗೆ ಇರುವ ಕಾಳಜಿ ಮೊಬೈಲ್‌ನಿಂದ ಉಂಟಾಗುವ ಆರೋಗ್ಯ ದುಷ್ಪರಿಣಾಮಗಳ ಬಗ್ಗೆಯೂ ಅಗತ್ಯ ಎಂದು ಸೆಲ್‌ಫೋನ್‌ನಿಂದ ಉಂಟಾಗುವ ಹಾನಿಯ ಬಗ್ಗೆ ಮಡಿಕೇರಿ, ಅ. ೨೯: ಅತಿಯಾದ ಮೊಬೈಲ್ ಫೋನ್ ಬಳಕೆಯಿಂದ ಮನುಷ್ಯನ ದೈಹಿಕ ಆರೋಗ್ಯ ದೊಂದಿಗೆ ಮಾನಸಿಕ ಆರೋಗ್ಯವೂ ಗಣನೀಯವಾಗಿ ಹದಗೆಡುತ್ತದೆ. ಮೊಬೈಲ್ ಹ್ಯಾಂಡ್‌ಸೆಟ್ ಸಂರಕ್ಷಣೆ ಬಗ್ಗೆ ಇರುವ ಕಾಳಜಿ ಮೊಬೈಲ್‌ನಿಂದ ಉಂಟಾಗುವ ಆರೋಗ್ಯ ದುಷ್ಪರಿಣಾಮಗಳ ಬಗ್ಗೆಯೂ ಅಗತ್ಯ ಎಂದು ಸೆಲ್‌ಫೋನ್‌ನಿಂದ ಉಂಟಾಗುವ ಹಾನಿಯ ಬಗ್ಗೆ ಮಡಿಕೇರಿ ರೋಟರಿ ಮಿಸ್ಟಿ ಹಿಲ್ಸ್ನಲ್ಲಿ ಸೆಲ್‌ಫೋನ್ ದುಷ್ಪರಿ ಣಾಮಗಳ ಬಗ್ಗೆ ಮಾಹಿತಿ ನೀಡಿದ ಆದರ್ಶ್ ಗೌಡ, ಬಹುತೇಕರು ಮೊಬೈಲ್‌ನ್ನು ಶರ್ಟ್, ಪ್ಯಾಂಟ್ ಜೇಬಿನಲ್ಲಿ ಇಟ್ಟುಕೊಳ್ಳುವ ಮೂಲಕ ತಮ್ಮ ಆರೋಗ್ಯಕ್ಕೆ ತಾವೇ ಸಂಕಷ್ಟ ತಂದುಕೊಳ್ಳುತ್ತಿದ್ದಾರೆ. ಜೇಬಿನಲ್ಲಿ ವಿಕಿರಣ ಬೀರುವ ಮೊಬೈಲ್‌ಗಳನ್ನು ಹೆಚ್ಚು ಹೊತ್ತು ಖಂಡಿತವಾಗಿಯೂ ಇರಿಸಿಕೊಳ್ಳಬಾರದು. ಮೊಬೈಲ್‌ನ್ನು ಆಗಿಂದಾಗ್ಗೆ ಬೇರೆ ಬೇರೆ ಸ್ಥಳಗಳಲ್ಲಿ ಇರಿಸುವ ಮೂಲಕ ವಿಕಿರಣ ಒಂದೇ ಕಡೆಗೆ ನುಗ್ಗದಂತೆ ಜಾಗ್ರತೆ ವಹಿಸಬೇಕೆಂದು ಹೇಳಿದರು. ಸಮಾಜದಲ್ಲಿ ಜನರು ಅತಿಯಾಗಿ ಮೊಬೈಲ್ ಬಳಕೆ ಮಾಡುತ್ತಿರುವುದನ್ನು ಗಮನಿಸಿದರೆ ಮುಂದಿನ ೧೦ ವರ್ಷಗಳಲ್ಲಿ ಮೊಬೈಲ್‌ನಿಂದಲೇ ಜನರಿಗೆ ಬಹಳ ದೊಡ್ಡ ಆರೋಗ್ಯ ಕಂಟಕ ಖಂಡಿತಾ ಎದುರಾಗುವ ಸಾಧ್ಯತೆಯಿದ್ದು, ಈಗಲೇ ಎಚ್ಚೆತ್ತುಕೊಳ್ಳದೇ ಹೋದಲ್ಲಿ ಮೊಬೈಲ್ ಸೋಂಕು ಯಾರೂ ತಡೆಗಟ್ಟದಷ್ಟು ದೊಡ್ಡದಾದ ಸಮಸ್ಯೆ ತರಬಹುದು ಎಂದೂ ಆದರ್ಶ್ ಎಚ್ಚರಿಸಿದರು.

ದೊಡ್ಡವರಿಗೆ ಮೊಬೈಲ್ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಉಂಟು ಮಾಡುತ್ತಿರು ವುದು ಕೆಲವು ವರ್ಷಗಳಿಂದ ಸಂಶೋಧನೆಗಳಿAದ ಖಚಿತವಾಗಿದೆ. ಹೀಗಿರುವಾಗ ಮಕ್ಕಳ ಕೈಯಲ್ಲಿ ಮೊಬೈಲ್ ನೀಡಿದಾಗ ಪುಟ್ಟ ಮಕ್ಕಳಲ್ಲಿ ಅದರಿಂದ ಉಂಟಾಗುವ ಆರೋಗ್ಯದ ಪರಿಣಾಮ ಎಷ್ಟು ಎಂದು ಊಹಿಸಲೂ ಅಸಾಧ್ಯವಾಗಿದೆ. ಮಕ್ಕಳ ಭವಿಷ್ಯದ ಹಿತದೃಷ್ಟಿಯಿಂದಲಾದರೂ ಹಿರಿಯರು ಮಕ್ಕಳನ್ನು ಮೊಬೈಲ್ ವ್ಯಸನಿಗಳಾಗಿ ಮಾಡದಿರಿ ಎಂದೂ ಆದರ್ಶ್ ಗೌಡ ಸಲಹೆ ನೀಡಿದರು.

ಮಕ್ಕಳಲ್ಲಿ ಅತೀಯಾದ ಮೊಬೈಲ್ ಬಳಕೆಯಿಂದ ಉಂಟಾಗುತ್ತಿರುವ ಮಾನಸಿಕ ಸಮಸ್ಯೆಯಿಂದಾಗಿ ನಗರ ಪ್ರದೇಶಗಳಲ್ಲಿ ಮಕ್ಕಳಿಗೆ ಮೊಬೈಲ್ ಚಟ ಬಿಡಿಸುವ ಕೇಂದ್ರಗಳೂ ಪ್ರಾರಂಭ ವಾಗುತ್ತಿದೆ. ಮೈಸೂರಿನಲ್ಲಿಯೇ ಇಂತಹ ಕೇಂದ್ರದಲ್ಲಿ ಈಗಾಗಲೇ ೬೨ ಮಕ್ಕಳಿಗೆ ಚಿಕಿತ್ಸೆ ನೀಡಲಾಗುತ್ತಿದೆ ಎಂದೂ ಆದರ್ಶ್ ಗೌಡ ವಿವರಿಸಿ ದರು. ರೋಟರಿ ಉಪರಾಜ್ಯಪಾಲ ಅನಿಲ್ ಎಚ್.ಟಿ., ಮಿಸ್ಟಿ ಹಿಲ್ಸ್ ಅಧ್ಯಕ್ಷೆ ಅನಿತಾ ಪೂವಯ್ಯ, ಕಾರ್ಯದರ್ಶಿ ಪಿ.ಆರ್. ರಾಜೇಶ್, ವಲಯ ಸೇನಾನಿ ಜಗದೀಶ್ ಪ್ರಶಾಂತ್, ಸಿಮ್ಯಾನ್ ಫೌಂಡೇಶನ್‌ನ ರಾಜೇಶ್ ನಾಯಕ್ ಹಾಜರಿದ್ದರು.