ಶನಿವಾರಸಂತೆ, ಅ. ೨೭: ಶನಿವಾರಸಂತೆ ಸಮೀಪದ ಕೊಡ್ಲಿಪೇಟೆ ವ್ಯಾಪ್ತಿಯ ದೊಡ್ಡಕೊಡ್ಲಿ ಗ್ರಾಮ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಗೆ ಹಾಜರಾದ ಮಕ್ಕಳನ್ನು ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಹಾಗೂ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಗಳ ಸಮನ್ವಯ ವೇದಿಕೆ ಜಿಲ್ಲಾ ಅಧ್ಯಕ್ಷ ನಾಗೇಶ್ ಸಿಹಿ ಹಂಚಿ ಸ್ವಾಗತಿಸಿದರು.

ಸದಸ್ಯರು, ಮುಖ್ಯ ಶಿಕ್ಷಕ ಫಯಾಜ್, ಶಿಕ್ಷಕರಾದ ನವಮಿ, ಕೃಪಾ, ಲತಾ, ಅಂಗನವಾಡಿ ಶಿಕ್ಷಕಿ ಪಂಕಜಾ, ಸಿಬ್ಬಂದಿ ಇದ್ದರು.