ಮಡಿಕೇರಿ, ಅ. ೨೭: ರಾಷ್ಟಿçÃಯ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕು (ನಬಾರ್ಡ್) ವತಿಯಿಂದ ೨೦೨೨-೨೩ನೇ ಸಾಲಿಗೆ ರೂ. ೬೨೦೫.೮೪ ಕೋಟಿ ಸಾಮರ್ಥ್ಯ ಆಧಾರಿತ ಸಾಲ ಯೋಜನೆಯನ್ನು ಜಿಲ್ಲಾಧಿಕಾರಿ ಡಾ. ಬಿ.ಸಿ. ಸತೀಶ ಬಿಡುಗಡೆ ಮಾಡಿದರು.
ನಗರದ ಲೀಡ್ ಬ್ಯಾಂಕ್ ಸಭಾಂಗಣದಲ್ಲಿ ಬುಧವಾರ ಸಾಮರ್ಥ್ಯ ಆಧಾರಿತ ಸಾಲ ಯೋಜನೆ ಬಿಡುಗಡೆ, ಜೊತೆಗೆ ಬ್ಯಾಂಕ್ಗಳ ತ್ರೆöÊಮಾಸಿಕ ಪ್ರಗತಿ ಸಭೆಯನ್ನು ಅವರು ನಡೆಸಿದರು.
ಕೃಷಿಗೆ ರೂ. ೩,೭೯೪.೨೯ ಕೋಟಿ, ಕೃಷಿ ಸಂಬAಧಿಸಿದ ಮೂಲ ಸೌಲಭ್ಯಕ್ಕೆ ರೂ. ೧೫೪.೬೩ ಕೋಟಿ, ಇತರೆ ಚಟುವಟಿಕೆಗೆ ರೂ. ೨೧೧.೧೩ ಕೋಟಿ, ಮಧ್ಯಮ ಸಣ್ಣ ಕೈಗಾರಿಕಾ ಬೆಳವಣಿಗೆಗೆ ರೂ. ೮೦೧ ಕೋಟಿ, ರಫ್ತು ವಿನಿಮಯ ಕ್ಷೇತ್ರಕ್ಕೆ ರೂ. ೪೦೯.೬೦ ಕೋಟಿ, ಶಿಕ್ಷಣಕ್ಕೆ ರೂ. ೧೨೧.೫೦ ಕೋಟಿ, ವಸತಿಗೆ ರೂ. ೬೭೬.೮೦ ಕೋಟಿ, ಪರ್ಯಾಯ ಇಂಧನ ಬಳಕೆಗೆ ರೂ. ೯.೧೭ ಕೋಟಿ, ಹಾಗೆಯೇ ಮೂಲ ಸೌಕರ್ಯಕ್ಕೆ ರೂ. ೨೭.೭೦ ಕೋಟಿ ಒಟ್ಟು ರೂ. ೬೨೦೫.೮೪ ಕೋಟಿ ಸಾಮರ್ಥ್ಯ ಆಧಾರಿತ ಸಾಲ ಯೋಜನೆಯನ್ನು ಜಿಲ್ಲಾಧಿಕಾರಿ ಬಿಡುಗಡೆ ಮಾಡಿದರು.
ಮುಂದಿನ (೨೦೨೨-೨೩) ಸಾಲಿಗೆ ಆದ್ಯತಾ ಕ್ಷೇತ್ರಗಳಾದ ಕೃಷಿ, ಸಣ್ಣ ಉದ್ಯಮ, ಶಿಕ್ಷಣ, ವಸತಿ ಮತ್ತಿತರ ಮೂಲ ಸೌಲಭ್ಯ ಸೇರಿದಂತೆ ಹಲವು ಕ್ಷೇತ್ರಕ್ಕೆ ಸಾಮರ್ಥ್ಯ ಆಧಾರಿತ ಸಾಲ ಯೋಜನೆಯನ್ನು ನೀಡಲಾಗಿದ್ದು, ಇವುಗಳನ್ನು ಅರ್ಹರಿಗೆ ತಲುಪಿಸಲಾಗುತ್ತದೆ ಎಂದು ರಾಷ್ಟಿçÃಯ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕಿನ ಜಿಲ್ಲಾ ವ್ಯವಸ್ಥಾಪಕ ವಿ.ರಮೇಶ್ ಬಾಬು ತಿಳಿಸಿದರು. ಕೃಷಿ, ಪಶುಪಾಲನೆ, ಮೀನುಗಾರಿಕೆ, ತೋಟಗಾರಿಕೆ, ಸಣ್ಣ ಕೈಗಾರಿಕೆ ಮತ್ತು ಉದ್ಯಮಕ್ಕೆ ಹೆಚ್ಚಿನ ಅವಕಾಶವನ್ನು ನೀಡಲಾಗಿದೆ. ಕೃಷಿ ಮೂಲ ಸೌಕರ್ಯಕ್ಕೆ ಹೆಚ್ಚಿನ ಆದ್ಯತೆ ನೀಡ ಲಾಗಿದೆ. ಕೃಷಿ ಮಾರುಕಟ್ಟೆ ಮೂಲ ಸೌಕರ್ಯಕ್ಕೆ ಒತ್ತು ನೀಡಲಾಗಿದೆ.
ಪ್ರಧಾನಮಂತ್ರಿ ಆಹಾರ ಸಂಸ್ಕರಣಾ ಉದ್ದಿಮೆ ಯೋಜನೆಯಡಿ ಸ್ವಸಹಾಯ ಗುಂಪುಗಳಿಗೆ ಹೆಚ್ಚಿನ ಸಾಲ ಸೌಲಭ್ಯ ದೊರೆಯಲಿದೆ. ಆತ್ಮ ನಿರ್ಭರ ಭಾರತ ಯೋಜನೆಯನ್ನು ಅನುಷ್ಠಾನಗೊಳಿಸಲಾಗುತ್ತದೆ. ಪ್ರಧಾನಮಂತ್ರಿ ಕೌಶಲ್ಯ ಅಭಿವೃದ್ಧಿ ಕಾರ್ಯಕ್ರಮಕ್ಕೆ ಹೆಚ್ಚಿನ ಆದ್ಯತೆ ನೀಡಲಾಗಿದೆ ರಮೇಶ್ ಬಾಬು ತಿಳಿಸಿದರು. ಭಾರತೀಯ ರಿಸರ್ವ್ ಬ್ಯಾಂಕಿನ ವೆಂಕಟೇಶ್ ಗೋಪಾಲ್ ಮಾತನಾಡಿ ಬ್ಯಾಂಕುಗಳು ಕೃಷಿಕರಿಗೆ ಒಳಿತು ಮಾಡುವಲ್ಲಿ ಶ್ರಮಿಸಬೇಕು ಎಂದರು. ಯೂನಿಯನ್ ಬ್ಯಾಂಕ್ನ ಪ್ರಾದೇಶಿಕ ವ್ಯವಸ್ಥಾಪಕರಾದ ಜ್ಯೋತಿ ಕೃಷ್ಣನ್ ಅವರು ಮಾತನಾಡಿ, ಸರ್ಕಾರ ರೈತರಿಗೆ ಹಲವು ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಿದೆ ಎಂದರು.
ಜಿಲ್ಲಾ ಅಗ್ರಣಿ ಬ್ಯಾಂಕ್ನ ವ್ಯವಸ್ಥಾಪಕರಾದ ಆರ್.ಕೆ.ಬಾಲಚಂದ್ರ ಸಾಮರ್ಥ್ಯ ಆಧಾರಿತ ಸಾಲ ಯೋಜನೆಯು ಜಿಲ್ಲಾ ಆರ್ಥಿಕ ಬೆಳವಣಿಗೆಯ ಮುನ್ನೋಟವಾಗಿದೆ ಎಂದರು. ಜಿ.ಪಂ. ಯೋಜನಾ ನಿರ್ದೇಶಕ ಶ್ರೀಕಂಠ ಮೂರ್ತಿ, ವಿಚಕ್ಷಣಾ ಅಧಿಕಾರಿ ಬಸವರಾಜು, ವಿವಿಧ ಇಲಾಖೆ ಅಧಿಕಾರಿಗಳು ಇದ್ದರು.