ಕುಶಾಲನಗರ, ಅ. ೨೭: ಬೈಕ್‌ನಲ್ಲಿ ತೆರಳುತ್ತಿದ್ದ ಸಂದರ್ಭ ಮಹಿಳೆಯೊಬ್ಬರು ಆಯತಪ್ಪಿ ರಸ್ತೆಗೆ ಬಿದ್ದು ಲಾರಿ ಅಡಿಗೆ ಸಿಲುಕಿ ಮೃತಪಟ್ಟ ದುರ್ಘಟನೆ ಕುಶಾಲನಗರದಲ್ಲಿ ನಡೆದಿದೆ.
ಕುಶಾಲನಗರ ಸಮೀಪದ ಕೊಪ್ಪ ಗ್ರಾಮದ ಚಿಕ್ಕಹೊಸೂರು ವ್ಯಾಪ್ತಿಯ ಸರ್ವಮಂಗಳ (೪೬) ಮೃತಪಟ್ಟ ದುರ್ದೈವಿ.
ತನ್ನ ನೆರೆಮನೆಯ ವ್ಯಕ್ತಿ ವಾಸು ಎಂಬವರ ಬೈಕ್‌ನಲ್ಲಿ (ಕೆಎ೪೫-ಆರ್ ೮೪೭೭) ಹಿಂಬದಿ ಕುಳಿತು ಕೊಪ್ಪ ಕಡೆಯಿಂದ ಕುಶಾಲನಗರ ಕಡೆಗೆ ಬರುತ್ತಿದ್ದ ಸಂದರ್ಭ ಘಟನೆ ಸಂಭವಿಸಿದೆ.
ಕುಶಾಲನಗರ ಕೊಪ್ಪ ಗಡಿಭಾಗದ ಅರಣ್ಯ ತಪಾಸಣಾ ಗೇಟ್ ಬಳಿ ಲಾರಿಯೊಂದು (ಟಿಎನ್೫೨-ಕೆ೦೬೮೨) ಚಲಿಸುತ್ತಿದ್ದ ಸಂದರ್ಭ ಬೈಕ್‌ನಿಂದ ಆಯತಪ್ಪಿ ಮಹಿಳೆ ರಸ್ತೆಗೆ ಬಿದ್ದಿದ್ದಾರೆ.
ರಸ್ತೆಗೆ ಬಿದ್ದ ಮಹಿಳೆ ಲಾರಿಯ ಟೈಯರ್ ಅಡಿಗೆ ಸಿಲುಕಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಮೃತ ಮಹಿಳೆ ಕುಶಾಲನಗರ ಸಮೀಪದ ಕೊಪ್ಪ ಗ್ರಾಮದ ಚಿಕ್ಕಹೊಸೂರು ನಿವಾಸಿಯಾಗಿದ್ದು, ಕುಶಾಲನಗರದಲ್ಲಿ ಹೊಟೇಲ್ ಒಂದರಲ್ಲಿ ಕ್ಲೀನರ್ ಆಗಿ ಕೆಲಸ ನಿರ್ವಹಿಸುತ್ತಿದ್ದರು. ಬೆಳಿಗ್ಗೆ ಕೆಲಸಕ್ಕೆಂದು ಬರುತ್ತಿದ್ದ ಸಂದರ್ಭ ಈ ಘಟನೆ ಸಂಭವಿಸಿದೆ. ಮೃತ ಮಹಿಳೆ ಪತಿ, ಓರ್ವ ಪುತ್ರಿಯನ್ನು ಅಗಲಿದ್ದಾರೆ.
ಕುಶಾಲನಗರ ಸಂಚಾರಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಮಹಜರು ನಡೆಸಿ ಘಟನೆಗೆ ಸಂಬAಧಿಸಿದAತೆ ಮೊಕದ್ದಮೆ ದಾಖಲಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ. ಲಾರಿಯನ್ನು ವಶಕ್ಕೆ ತೆಗೆದುಕೊಂಡ ಪೊಲೀಸರು ಚಾಲಕನ ವಿಚಾರಣೆ ಕೈಗೊಂಡಿದ್ದಾರೆ.