ಕಣಿವೆ, ಅ. ೨೮: ನಂಜರಾಯಪಟ್ಟಣ ಗ್ರಾಮ ಪಂಚಾಯಿತಿ ಜಮಾಬಂದಿ ಸಭೆ ಪಂಚಾಯಿತಿ ಅಧ್ಯಕ್ಷ ಚೆಟ್ಟಡ್ಕ ವಿಶ್ವ ಅಧ್ಯಕ್ಷತೆಯಲ್ಲಿ ಬುಧವಾರ ನಡೆಯಿತು. ಪಂಚಾಯಿತಿಯ ಸಮಗ್ರ ಅಭಿವೃದ್ಧಿಯ ದೃಷ್ಟಿಯಲ್ಲಿ ಆದಾಯ ಹಾಗೂ ವೆಚ್ಚಗಳನ್ನು ಸರಿದೂಗಿಸುವ ಮೂಲಕ ಆಡಳಿತ ಮಂಡಳಿ ಕಾರ್ಯನಿರ್ವಹಿಸಬೇಕೆಂದು ಗ್ರಾಮಸ್ಥರು ಸಲಹೆ ನೀಡಿದರು.
ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳ ಅಭಿವೃದ್ಧಿಗೆ ಇರುವ ಸಂಪನ್ಮೂಲಗಳನ್ನು ಸದುಪಯೋಗಪಡಿಸಿಕೊಳ್ಳಲಾಗುವುದು ಎಂದು ವಿಶ್ವ ಹೇಳಿದರು. ನೋಡಲ್ ಅಧಿಕಾರಿಯಾಗಿ ಕುಶಾಲನಗರ ತಾಲೂಕು ಸಮಾಜ ಕಲ್ಯಾಣಾಧಿಕಾರಿ ಬಾಲಕೃಷ್ಣ ರೈ ಕಾರ್ಯನಿರ್ವಹಿಸಿದರು.
ಪಂಚಾಯಿತಿ ಉಪಾಧ್ಯಕ್ಷೆ ಸಮೀರಾ, ಅಭಿವೃದ್ಧಿ ಅಧಿಕಾರಿ ಕಲ್ಪನಾ, ಸದಸ್ಯರಾದ ಜಾಜಿ ತಮ್ಮಯ್ಯ, ಕುಸುಮ, ರಕ್ಷಿತ್ ಮಾವಾಜಿ, ಅಯ್ಯಂಡ್ರ ಲೋಕನಾಥ್, ಇಂಜಿನಿಯರ್ ಫಯಾಜ್ ಇದ್ದರು.