ಮಡಿಕೇರಿ, ಅ. ೨೭: ಮೈಸೂರು ಕಥೋಲಿಕ ಧರ್ಮಕ್ಷೇತ್ರ, ಬೆಂಗಳೂರು ಮಹಾಧರ್ಮಕ್ಷೇತ್ರ ಹಾಗೂ ಕಾರಿತಾಸ್ ಇಂಡಿಯಾ ಸಹಯೋಗದೊಂದಿಗೆ ೨೦೧೮-೧೯ರ ನೆರೆ ಪ್ರವಾಹ ಪುನರ್ವಸತಿ ಯೋಜನೆಯಡಿ ನಿರ್ಮಿಸಲಾದ ನೂತನ ಮನೆಗಳ ಉದ್ಘಾಟನೆ ಹಾಗೂ ಹಸ್ತಾಂತರ ಕಾರ್ಯಕ್ರಮ ತಾ.೨೯ರಂದು ಹಟ್ಟಿಹೊಳೆಯ ನಿರ್ಮಲಭವನ ಶಾಲಾ ಆವರಣದಲ್ಲಿ ನಡೆಯಲಿದೆ ಎಂದು ಮಡಿಕೇರಿ ವಲಯ ಗುರುಶ್ರೇಷ್ಠರಾದ ರೆ.ಫಾ. ದೀಪಕ್ ತಿಳಿಸಿದ್ದಾರೆ.
ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ನೀಡಿರುವ ಅವರು, ತಲಾ ಸುಮಾರು ೧೧,೫೦,೦೦೦ ರೂ. ವೆಚ್ಚದಲ್ಲಿ ಹಟ್ಟಿಹೊಳೆಯಲ್ಲಿ ೧೦, ಸಿದ್ದಾಪುರದಲ್ಲಿ ೯ ಹಾಗೂ ಕುಶಾಲನಗರದಲ್ಲಿ ೧ ಮನೆಗಳನ್ನು ನಿರ್ಮಿಸಲಾಗಿದೆ. ಜೊತೆಗೆ ಹಟ್ಟಿಹೊಳೆಯಲ್ಲಿ ೧೨ ಮನೆಗಳಿಗೆ ತಡೆಗೋಡೆ ಕಾಮಗಾರಿ ನಡೆಸಲಾಗಿದೆ. ಈ ಕಾರ್ಯದ ಉದ್ಘಾಟನಾ ಕಾರ್ಯಕ್ರಮ ಇದೇ ಶುಕ್ರವಾರದಂದು ನಡೆಯಲಿದೆ.
ಮೈಸೂರು ಧರ್ಮಕ್ಷೇತ್ರದ ಧರ್ಮಾಧ್ಯಕ್ಷ ಡಾ. ಕೆ.ಎ. ವಿಲಿಯಂ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದು, ಬೆಂಗಳೂರು ಮಹಾಧರ್ಮಕ್ಷೇತ್ರ ಮಹಾಧರ್ಮಾಧ್ಯಕ್ಷ ಡಾ. ಪೀಟರ್ ಮಚಾಡೋ ನೂತನ ಮನೆಗಳ ಉದ್ಘಾಟನೆ ಹಾಗೂ ಆಶೀರ್ವಚನ ನೀಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ಮೈಸೂರು ಧರ್ಮಕ್ಷೇತ್ರ ವಿಶ್ರಾಂತ ಧರ್ಮಾಧ್ಯಕ್ಷ ಥಾಮಸ್ ಆಂಟನಿ ವಾಜûಪಿಳ್ಳಿ, ಅರಮೇರಿ ಕಳಂಚೇರಿ ಮಠದ ಶಾಂತಮಲ್ಲಿಕಾರ್ಜುನ ಸ್ವಾಮೀಜಿ, ವಿಧಾನ ಪರಿಷತ್ ಸದಸ್ಯೆ ವೀಣಾ ಅಚ್ಚಯ್ಯ, ಶಾಸಕರುಗಳಾದ ಎಂ.ಪಿ. ಅಪ್ಪಚ್ಚುರಂಜನ್, ಕೆ.ಜಿ. ಬೋಪಯ್ಯ, ಜಿಲ್ಲಾಧಿಕಾರಿ ಡಾ. ಬಿ.ಸಿ. ಸತೀಶ್, ಸೋಮವಾರಪೇಟೆ ತಹಶೀಲ್ದಾರ್ ಆರ್. ಗೋವಿಂದ ರಾಜು ಮತ್ತಿತರರು ಪಾಲ್ಗೊಳ್ಳಲಿದ್ದಾರೆ.
ಅತಿಥಿಗಳಾಗಿ ಮಾದಾಪುರ ಗ್ರಾ.ಪಂ. ಅಧ್ಯಕ್ಷೆ ಕೆ.ಸಿ. ಶೀಲ, ವೀರಾಜ ಪೇಟೆ ವಲಯ ಶ್ರೇಷ್ಠ ಗುರು ರೆ.ಫಾ. ಮದಲೈಮುತ್ತು, ಮಡಿಕೇರಿ ವಲಯ ಶ್ರೇಷ್ಠ ಗುರು
(ಮೊದಲ ಪುಟದಿಂದ) ರೆ.ಫಾ. ದೀಪಕ್, ಮೈಸೂರು ಒಡಿಪಿ ನಿರ್ದೇಶಕ ರೆ.ಫಾ. ಅಲೆಕ್ಸ್ ಪ್ರಶಾಂತ್ ಸಿಕ್ವೇರಾ, ಬೆಂಗಳೂರು ಬಿಎಂಎಸ್ಎಸ್ ರೆ.ಫಾ. ಸಂತೋಷ್, ಹಟ್ಟಿಹೊಳೆ ಜಪಮಾಲೆ ಮಾತೆ ದೇವಾಲಯ ಧರ್ಮಗುರು ರೆ.ಫಾ. ಆಲ್ಪರ್ಡ್ ಜಾನ್ ಮೆಂಡೋನ್ಸಾ, ಸಿದ್ದಾಪುರ ಸಂತ ಜೋಸೆಫರ ದೇವಾಲಯ ಧರ್ಮಗುರು ರೆ.ಫಾ. ಮೈಕಲ್ ಮರಿ ಪಾಲ್ಗೊಳ್ಳಲಿದ್ದಾರೆ ಎಂದು ಅವರು ಮಾಹಿತಿ ನೀಡಿದ್ದಾರೆ.