ಟಿ ಲೋಕೇಶ್ ಸಾಗರ್ ಮತ್ತು ಕೇಶವಕಾಮತ್ ಕಣದಲ್ಲಿ ಟಿ ನ. ೨೧ ರಂದು ಮತದಾನ
(ಕಾಯಪಂಡ ಶಶಿ ಸೋಮಯ್ಯ)
ಮಡಿಕೇರಿ, ಅ. ೨೭: ಕನ್ನಡ ಸಾಹಿತ್ಯ ಪರಿಷತ್ ಚುನಾವಣೆ ಎದುರು ಗೊಳ್ಳುತ್ತಿದ್ದು, ಕೊಡಗಿನಲ್ಲೂ ಜಿಲ್ಲಾ ಅಧ್ಯಕ್ಷ ಸ್ಥಾನಕ್ಕೆ ಸಂಬAಧಿಸಿದAತೆ ಚುನಾವಣಾ ಕಾವು ಹೆಚ್ಚಾಗುತ್ತಿದೆ. ಈ ಹಿಂದೆ ಮೇ ೯ ರಂದು ರಾಜ್ಯದಲ್ಲಿ ರಾಜ್ಯ ಕಸಾಪ ಹಾಗೂ ಜಿಲ್ಲಾ ಕಸಾಪಕ್ಕೆ ಚುನಾವಣೆ ನಿಗದಿಪಡಿಸಲಾಗಿತ್ತು. ಇದಕ್ಕೆ ಸಂಬAಧಿಸಿದAತೆ ನಾಮಪತ್ರ ಸಲ್ಲಿಕೆಯಂತಹ ಪ್ರಕ್ರಿಯೆಗಳು ಪೂರ್ಣಗೊಂಡು ಚುನಾವಣೆ ಸನ್ನಿಹಿತವಾಗುವ ಸಮಯಕ್ಕೆ ಕೋವಿಡ್ -೧೯ ಪ್ರಕರಣದ ತೀವ್ರತೆ ಹೆಚ್ಚಳಗೊಂಡಿದ್ದರಿAದ ಚುನಾವಣೆ ಯನ್ನು ಮುಂದೂಡಲಾಗಿತ್ತು. ಇದೀಗ ಕೆಲದಿನಗಳ ಹಿಂದೆ ಈ ಚುನಾವಣೆಯನ್ನು ನಡೆಸಲು ಮತ್ತೆ ಅನುಮತಿ ನೀಡಲಾಗಿದೆ. ಚುನಾವಣೆ ಪ್ರಕ್ರಿಯೆಯನ್ನು ಮುಂದೂಡಿದ ಹಂತದಿAದ ಯಥಾವತ್ತಾಗಿ ಅದನ್ನು ಮುಂದುವರಿಸಲು ಅವಕಾಶ ಮಾಡಿಕೊಡಲಾಗಿದೆ. ಇದರಂತೆ ಮುಂದೂಲ್ಪಟ್ಟಿದ್ದ ಚುನಾವಣೆಗೆ ನವೆಂಬರ್ ೨೧ ರ ದಿನಾಂಕವನ್ನು ನಿಗದಿಪಡಿಸಲಾಗಿದ್ದು, ಮತ್ತೆ ಬಿರುಸಿನ ಪ್ರಕ್ರಿಯೆಗಳು ಆರಂಭಗೊAಡಿವೆ.
ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ನ ಜಿಲ್ಲಾ ಅಧ್ಯಕ್ಷ ಸ್ಥಾನಕ್ಕೆ ಹಾಲಿ ಅಧ್ಯಕ್ಷ ಲೋಕೇಶ್ ಸಾಗರ್ ಅವರು ಮರು ಆಯ್ಕೆ ಬಯಸಿದ್ದರೆ ಇವರ ಎದುರಾಳಿಯಾಗಿ ಈ ಹಿಂದೆ ವೀರಾಜಪೇಟೆ ತಾಲೂಕು ಕಸಾಪ ಅಧ್ಯಕ್ಷರಾಗಿದ್ದ ಕೇಶವಕಾಮತ್ ಅವರು ಸ್ಪರ್ಧಾಕಣದಲ್ಲಿದ್ದಾರೆ. ಇಬ್ಬರು ಅಭ್ಯರ್ಥಿಗಳ ನಡುವಿನ ಸ್ಪರ್ಧೆ ಬಿರುಸು ಕಾಣುತ್ತಿದ್ದು, ಜಿಲ್ಲಾದ್ಯಂತ ಕಸಾಪ ಮತದಾರ ಸದಸ್ಯರನ್ನು ಇಬ್ಬರು ಸ್ಪರ್ಧಿಗಳ ನೇತೃತ್ವದ ತಂಡ ಭೇಟಿ ಯಾಗುತ್ತಿದ್ದು, ಮತಯಾಚನೆ ಯಲ್ಲಿ ತೊಡಗಿಸಿಕೊಂಡಿದ್ದಾರೆ. ಇಬ್ಬರು ಅಭ್ಯರ್ಥಿಗಳ ನಡುವಿನ ಸ್ಪರ್ಧೆಯ ಬಿಸಿ ಇದೀಗ ದಿನೇ ದಿನೇ ಹೆಚ್ಚಾಗುತ್ತಿದೆ. ಈ ನಡುವೆ ರಾಜ್ಯ ಕಸಾಪ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿರುವ ಅಭ್ಯರ್ಥಿಗಳ ತಂಡವೂ ಜಿಲ್ಲೆಯಲ್ಲಿ ಓಡಾಟ ನಡೆಸುತ್ತಿದೆ.
೨೪೨೭ ಮತದಾರರು
ಜಿಲ್ಲೆಯಲ್ಲಿ ಕಸಾಪ ಚುನಾವಣೆಗೆ ಒಟ್ಟು ೨೪೨೭
(ಮೊದಲ ಪುಟದಿಂದ) ಸದಸ್ಯರು ಮತಚ ಲಾಯಿಸುವ ಹಕ್ಕು ಹೊಂದಿದ್ದಾರೆ. ಮಡಿಕೇರಿ ತಾಲೂಕಿನಲ್ಲಿ ೭೬೬ ಸೋಮವಾರಪೇಟೆ ೬೪೭, ವೀರಾಜಪೇಟೆ ೩೦೩ ಹಾಗೂ ಹೊಸ ತಾಲೂಕುಗಳಾದ ಪೊನ್ನಂಪೇಟೆಯಲ್ಲಿ ೨೮೭ ಹಾಗೂ ಕುಶಾಲನಗರದಲ್ಲಿ ೪೨೪ ಸದಸ್ಯರು ಮತದಾರರಾಗಿದ್ದಾರೆ.
ನವೆಂಬರ್ ೨೧ ರಂದು ಬೆಳಿಗ್ಗೆ ೮ ರಿಂದ ಸಂಜೆ ೪ ರತನಕ ಆಯಾ ತಾಲೂಕಿನ ತಾಲೂಕು ಕಚೇರಿಗಳಲ್ಲಿ ಮತದಾನ ಜರುಗಲಿದೆ. ಸೋಮವಾರಪೇಟೆ ತಾಲೂಕಿನಲ್ಲಿ ಮಾತ್ರ ಪ.ಪಂ. ಸಭಾಂಗಣ ಮತದಾನ ಕೇಂದ್ರವಾಗಿದೆ. ಅದೇ ದಿನ ಸಂಜೆ ೪ರ ಬಳಿಕ ಮತ ಎಣಿಕೆ ನಡೆಯಲಿದ್ದು, ಜಿಲ್ಲಾ ಅಧ್ಯಕ್ಷರ ಘೋಷಣೆಯಾಗಲಿದೆ. ರಾಜ್ಯದ ಮತ ಎಣಿಕೆ ಎರಡು ದಿನಗಳ ನಂತರ ನಡೆಯಲಿದೆ.