ಸುಂಟಿಕೊಪ್ಪ, ಅ. ೨೬ : ಮಲೆಯಾಳಿ ಹಿಂದೂ ಸಮಾಜದ ವಾರ್ಷಿಕ ಮಹಾಸಭೆಯು ಅಧ್ಯಕ್ಷ ವಿ.ಎ. ಸಂತೋಷ್ ಅವರ ಅಧ್ಯಕ್ಷತೆಯಲ್ಲಿ ನಡೆಸಲಾಯಿತು.
ಸುಂಟಿಕೊಪ್ಪದ ಗುಂಡುಕುಟ್ಟಿ ಮಂಜುನಾಥಯ್ಯ ಮೀನಾಕ್ಷಮ್ಮ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ೨೦೨೧-೨೦೨೨ನೇ ಸಾಲಿನ ನೂತನ ಪದಾಧಿಕಾರಿಗಳ ಆಯ್ಕೆ ನಡೆಸಲಾಯಿತು.
ಅಧ್ಯಕ್ಷರಾಗಿ ವಿ.ಎ.ಸಂತೋಷ್, ಉಪಾಧ್ಯಕ್ಷರಾಗಿ ರಾಮಕೃಷ್ಣ, ಖಜಾಂಚಿಯಾಗಿ ರಾಜು, ಕಾರ್ಯದರ್ಶಿಯಾಗಿ ವಿನೋದ್ ಕುಮಾರ್, ಸಹಕಾರ್ಯದರ್ಶಿಯಾಗಿ ಸುಬ್ರಮಣಿ, ಗೌರವ ಅಧ್ಯಕ್ಷರಾಗಿ ಬಾಸ್ಕರನ್, ಸಂಘಟನಾ ಕಾರ್ಯದರ್ಶಿಗಳಾಗಿ ಕಮಲಹಾಸನ್ ಹಾಗೂ ರಾಧಾಕೃಷ್ಣ, ಸಲಹಾ ಸಮಿತಿ ನಿರ್ದೇಶಕರಾಗಿ ಪಿ.ಸಿ.ಮೋಹನ್, ರಮೇಶ್ ಪಿಳ್ಳೆ, ರಂಜೀತ್ ಕುಮಾರ್, ಅನಿಲ್ ಕುಮಾರ್, ಅನೀಶ್, ಕನೀಶ್, ಪ್ರಶಾಂತ್, ರಾಜೇಶ್, ಶಶಿ, ಸುರೇಶ್, ಪಿ.ಸಿ. ಶಿವಮಣಿ ಅವರನ್ನು ನೇಮಕಗೊಳಿಸಲಾಯಿತು.
ಕಾರ್ಯಕ್ರಮದಲ್ಲಿ ನೂತನ ಅಧ್ಯಕ್ಷ ವಿ.ಎ. ಸಂತೋಷ್ ಮಾತನಾಡಿ ಕೊರೊನಾ ಸಂದರ್ಭ ಮೃತಪಟ್ಟವರಿಗೆ ನಮ್ಮ ಸಮಾಜದಿಂದ ಸಹಾಯ ಹಸ್ತ ಚಾಚಲಾಗಿದೆ. ಮುಂದೆಯೂ ಸಮಾಜದ ವತಿಯಿಂದ ಸಂಕಷ್ಟದಲ್ಲಿರುವವರಿಗೆ ನೆರವಾಗುವ ಕಾರ್ಯವನ್ನು ಮುಂದುವರಿಸಲಾಗುತ್ತದೆ.
ಕಳೆದ ಎರಡು ವರ್ಷಗಳಿಂದ ಓಣಂ ಹಬ್ಬ ಆಚರಣೆಗೆ ಕಷ್ಟ ಸಾಧ್ಯವಾಗಿತ್ತು. ಮುಂದಿನ ವರ್ಷ ವಿಜೃಂಭಣೆಯಿAದ ಆಚರಿಸಲಾಗುತ್ತದೆ. ಸಮಾಜ ಬಾಂಧವರು ಹೆಚ್ಚಿನ ಸಹಕಾರ ನೀಡುವಂತೆ ಮನವಿ ಮಾಡಿಕೊಂಡರು. ಈ ಸಂದರ್ಭ ಸದಸ್ಯರು ಹಾಜರಿದ್ದರು.