ಸುAಟಿಕೊಪ್ಪ, ಅ.೨೭: ಸುಂಟಿಕೊಪ್ಪ ಗ್ರಾಮ ಪಂಚಾಯಿತಿ ವತಿಯಿಂದ ಆಯೋಜಿಸಲಾದ ಜಮಾಬಂದಿ ಸಭೆಗೆ ಕೇವಲ ಇಬ್ಬರು ಗ್ರಾಮಸ್ಥರು ಮಾತ್ರ ಪಾಲ್ಗೊಂಡಿದ್ದರು.
ಸುAಟಿಕೊಪ್ಪ ಗ್ರೇಡ್೧ ಗ್ರಾಮ ಪಂಚಾಯಿತಿ ಜಮಾಬಂದಿ ಸಭೆಯು ಅಧ್ಯಕ್ಷೆ ಶಿವಮ್ಮ ಅಧ್ಯಕ್ಷತೆಯಲ್ಲಿ ಅಂಬೇಡ್ಕರ್ ಭವನದಲ್ಲಿ ಬೆಳಿಗ್ಗೆ ೧೧ ಗಂಟೆಗೆ ಆಯೋಜಿಸಲಾಗಿತ್ತು. ಗ್ರಾಮಸ್ಥರಿಗೆ ಜಮಾ ಬಂದಿ ನಡೆಯುವ ಬಗ್ಗೆ ಸರಿಯಾದ ಮಾಹಿತಿ ನೀಡದ ಪಂಚಾಯಿತಿ ಬೇಕಾಬಿಟ್ಟಿ ಸಭೆ ನಡೆಸಲು ತಯಾರಿ ನಡೆಸಿದಂತಿತ್ತು. ಮಾಧ್ಯಮದವರನ್ನು ಸಹ ಸಭೆಗೆ ಆಹ್ವಾನಿಸಿರಲಿಲ್ಲ. ೨೦ ಮಂದಿ ಆಡಳಿತ ಮಂಡಳಿ ಸದಸ್ಯರಲ್ಲಿ ೧೨ ಮಂದಿ ಸದಸ್ಯರು ಸಭೆಗೆ ಹಾಜರಾಗಿದ್ದರು. ಪಿಡಿಓ ಹಾಗೂ ಸಿಬ್ಬಂದಿ ಸಭೆಗೆ ಬಂದಿದ್ದರು. ಆದರೆ ಗ್ರಾಮಸ್ಥರು ಮಾತ್ರ ಕೇವಲ ಇಬ್ಬರೇ ಸಭೆಗೆ ಹಾಜರಾಗಿದ್ದು ಪಂಚಾಯಿತಿಯ ಕಾರ್ಯವೈಖರಿಯನ್ನು ಅಣಕಿಸುವಂತಿತ್ತು.