ಪೊನ್ನಂಪೇಟೆ, ಅ.೨೭: ಪೊನ್ನಂಪೇಟೆ ತಾಲೂಕಿನ ಬಿ.ಶೆಟ್ಟಿಗೇರಿ ಗ್ರಾಮದ ಅಪ್ಪಂಡೇರAಡ ಉತ್ತಪ್ಪ ಅವರಿಗೆ ಅರಣ್ಯ ಮತ್ತು ಪರಿಸರ ವಿಜ್ಞಾನ ವಿಷಯದಲ್ಲಿನ ಸಂಶೋಧನೆ ಗಾಗಿ ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ಡಾಕ್ಟರೇಟ್ ಪದವಿ ಲಭಿಸಿದೆ. ಇವರು ಬಿ.ಶೆಟ್ಟಿಗೇರಿ ಗ್ರಾಮದ ಮಾಜಿ ಯೋಧ ಅಪ್ಪಂಡೇರAಡ ದಿ. ರಾಮಣಿ ಹಾಗೂ ಶಾರದ (ತಾಮನೆ ಮೂಕಳೇರ) ದಂಪತಿಗಳ ಪುತ್ರ.
ಡಾ. ಎ.ಆರ್.ಉತ್ತಪ್ಪ ಪೊನ್ನಂಪೇಟೆಯ ಸಂತ ಅಂತೋಣಿ ಶಾಲೆ ಹಾಗೂ ಮಡಿಕೇರಿ ಗಾಳಿಬೀಡಿನ ಜವಾಹರ್ ನವೋದಯ ವಿದ್ಯಾಲಯದಲ್ಲಿ ಪ್ರಾಥಮಿಕ, ಪ್ರೌಢ ಹಾಗೂ ಪಿಯುಸಿ ವಿದ್ಯಾಭ್ಯಾಸ ಪೂರೈಸಿದ್ದು, ೨೦೦೯ರಲ್ಲಿ ಪೊನ್ನಂಪೇಟೆ ಅರಣ್ಯ ಮಹಾವಿದ್ಯಾಲಯದಲ್ಲಿ ೬ ಚಿನ್ನದ ಪದಕಗಳೊಂದಿಗೆ ಬಿ.ಎಸ್ಸಿ. ಪದವಿ ಪಡೆದುಕೊಂಡಿದ್ದರು. ೨೦೧೧ರಲ್ಲಿ ಉತ್ತರಾಖಂಡದ ಪಟ್ನಾಗರ್'ನ ಜಿ.ಬಿ.ಪಿ.ಯು.ಎ.ಅಯಿಂಡ್ ಟಿ. ನಲ್ಲಿ ಆಗ್ರೋ ಫಾರೆಸ್ಟಿç ವಿಷಯದಲ್ಲಿ ಐ.ಸಿ.ಎ.ಆರ್. ಫೆಲೋಶಿಪ್ ಮೂಲಕ ಎಂ.ಎಸ್ಸಿ.ಪದವಿ ಪಡೆದಿದ್ದರು. ಸಂಶೋಧನಾ ಕ್ಷೇತ್ರದಲ್ಲಿ ಅತ್ಯುತ್ತಮ ಸಾಧನೆ ಮಾಡಿದ ಇವರು ೨೦೧೩ರಲ್ಲಿ ಉತ್ತರಪ್ರದೇಶದ ಝಾನ್ಸಿಯ ಸೆಂಟ್ರಲ್ ಆಗ್ರೋ ಫಾರೆಸ್ಟಿç ರಿಸರ್ಚ್ ಇನ್ಸಿ÷್ಟಟ್ಯೂಟ್'ನಲ್ಲಿ ಆಗ್ರೋ ಫಾರೆಸ್ಟಿç ವಿಜ್ಞಾನಿಯಾಗಿ ಸೇರ್ಪಡೆ ಗೊಂಡರು. ೨೦೨೧ರಲ್ಲಿ ಇವರು ಸಲ್ಲಿಸಿದ "ಎಸೆಸ್ಮೆಂಟ್ ಆಫ್ ಇಕೋಸಿಸ್ಟಮ್ ಸರ್ವಿಸಸ್ ಅಂಡರ್ ಡಿಫರೆಂಟ್ ಲ್ಯಾಂಡ್ ಯೂಸ್ ಸಿಸ್ಟಮ್ಸ್ ಇನ್ ಸೆಮಿ ಆರಿಡ್ ಕಂಡಿಷನ್ಸ್" ಮಹಾಪ್ರಬಂಧಕ್ಕೆ ಡಾಕ್ಟರೇಟ್ ಪದವಿ ಸಂದಿದೆ. ಪ್ರಸ್ತುತ ಇವರು ಗೋವಾದ ಸೆಂಟ್ರಲ್ ಕೋಸ್ಟಲ್ ಅಗ್ರಿಕಲ್ಚರಲ್ ರೀಸರ್ಚ್ ಇನ್ಸಿ÷್ಟಟ್ಯೂಟ್'ನಲ್ಲಿ ವಿಜ್ಞಾನಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.
-ಚನ್ನನಾಯಕ