ಮಡಿಕೇರಿ, ಅ. ೨೬: ತುಲಾ ಸಂಕ್ರಮಣ ಕಳೆದು ೧೦ನೇ ದಿವಸವಾದ ಇಂದು, ಪತ್ತಲೋದಿ ದಿನದ ಅಂಗವಾಗಿ ಮಡಿಕೇರಿ ಕೋಟೆ ಹಾಗೂ ಯವಕಪಾಡಿಯಲ್ಲಿರುವÀ ನಾಲ್ನಾಡ್ ಅರಮನೆಯಲ್ಲಿ ಕೊಡವ ನ್ಯಾಷನಲ್ ಕೌನ್ಸಿಲ್ ವತಿಯಿಂದ ಅಗಲಿದ ಹಿರಿಯರಿಗೆ ಮೀದಿ ಅರ್ಪಿಸಿ ಪುಷ್ಪ ನಮನ ಸಲ್ಲಿಸಲಾಯಿತು.

ನಂತರ ಮಾತನಾಡಿದ ಸಿ.ಎನ್.ಸಿ ಅಧ್ಯಕ್ಷ ನಂದಿನೆರವAಡ ಯು.ನಾಚಪ್ಪ ಪತ್ತಲೋದಿ ದಿನದಂದು ಪೂರ್ವಿಕರನ್ನು ಸ್ಮರಿಸುವ ಪರಂಪರೆ ಕೊಡವ ಬುಡಕಟ್ಟು ಸಂಸ್ಕೃತಿಯಲ್ಲಿ ಹಾಸುಹೊಕ್ಕಾಗಿದೆ. ೧೬೩೩ ರಿಂದ ೧೮೩೪ ರವರೆಗೆ ಕೊಡಗನ್ನಾಳಿದ ಹೊರ ಪ್ರದೇಶದ ಇಕ್ಕೇರಿ ಸಂಸ್ಥಾನದ ಕೆಳದಿ ರಾಜವಂಶಸ್ಥರಿAದ, ತಮ್ಮ ಆಳ್ವಿಕೆಯಡಿ ನಿರಂತರವಾಗಿ ಬುಡಕಟ್ಟು ಕೊಡವರನ್ನು ಹತ್ಯೆ ಮಾಡಲಾಯಿತು. ಆ ೨೦೧ ವರ್ಷಗಳ ಕರಾಳ ಆಡಳಿತದಲ್ಲಿ ಅಧಿಕಾರ ಗದ್ದುಗೆ ಏರಲು ವೀರ ಕೊಡವರನ್ನು ಬಳಸಿಕೊಂಡು ತದನಂತರ ಈ ಬಲಿಷ್ಠ ಕೊಡವ ಜನಾಂಗದವರು ತÀಮಗೆಲ್ಲಿ ಸವಾಲು ಎಸೆಯುತ್ತಾರೋ ಎಂಬ ಭಯದಿಂದ ಮೋಸದಿಂದ ಅದೆಷ್ಟೋ ವೀರ ಮತ್ತು ಅಮಾಯಕ ಕೊಡವರನ್ನು ಹತ್ಯೆ ಮಾಡಲಾಯಿತು. ನಾಲ್ನಾಡ್ ಅರಮನೆಯ ಕೆಳಗೆ ಇದಕ್ಕಾಗಿ ‘ನಗಾರೀಕುಂಡ್’ ಎನ್ನುವ ನರಕ ಸದೃಶ ಬಾವಿ ಇಂದಿಗೂ ಇದೆ. ಮಡಿಕೇರಿ ಕೋಟೆ ಮತ್ತು ನಾಲ್ನಾಡ್ ಅರಮನೆ ಕೊಡವರ ಮೇಲೆ ನಡೆಸಿದ ಕ್ರೌರ್ಯ, ರಾಜಕೀಯ ಕಗ್ಗೊಲೆ, ಪಿತೂರಿ, ವಿಶ್ವಾಸಗಾತಕತನಕ್ಕೆ ಹಿಡಿದ ದರ್ಪಣವಾಗಿದೆ ಎಂದರು. ಕೊಡವರ ಬದುಕಿಗೆ ಅಪ್ಪಳಿಸಿದ ಈ ದುರಂತವನ್ನು ಎಂದೆAದೂ ಮರೆಯಲು ಅಸಾಧ್ಯ ಎಂದು ಹೇಳಿದ ಅವರು ಈ ಹಿನ್ನೆಲೆ ಪತ್ತಲೋದಿ ದಿನದಂದು ಅಗಲಿದ ಹಿರಿಯರನ್ನು ಸ್ಮರಿಸಲಾಗುತ್ತಿದೆ ಎಂದರು.

ಮೀದಿ ಕಾರ್ಯಕ್ರಮದಲ್ಲಿ ಸಿ.ಎನ್.ಸಿ.ಯ ಕಲಿಯಂಡ ಪ್ರಕಾಶ್, ಅರೆಯಡ ಗಿರೀಶ್, ಪುಲ್ಲೇರ ಕಾಳಪ್ಪ, ಅಪ್ಪಚ್ಚೀರ ರಮ್ಮಿ ನಾಣಯ್ಯ, ಬಾಚಮಂಡ ರಾಜ ಪೂವಣ್ಣ, , ಅಪ್ಪಾರಂಡ ಶ್ರೀನಿವಾಸ್, ಕಾಟುಮಣಿಯಂಡ ಉಮೇಶ್, ಚಂಬAಡ ಜನತ್, ತೆನ್ನಿರ ಮೈನ ,ಪುದಿಯೊಕ್ಕಡ ಕಾಶಿ, ಪುಟ್ಟಿಚಂಡ ಡಾನ್, ಮಣುವಟ್ಟೀರ ಚಿಣ್ಣಪ್ಪ ,ಬೇಪಡಿಯಂಡ ದಿನು ಭಾಗವಹಿಸಿದ್ದರು.