ಮಡಿಕೇರಿ, ಅ. ೨೬: ಮೂರ್ನಾಡು ಲಯನ್ಸ್ ಕ್ಲಬ್ ಹಾಗೂ ಜಿಲ್ಲಾ ರಕ್ತ ನಿಧಿ ಕೇಂದ್ರದ ವತಿಯಿಂದ ಸ್ವಯಂ ಪ್ರೇರಿತ ರಕ್ತದಾನ ಶಿಬಿರ ಆಯೋಜಿಸಲಾಗಿದೆ. ತಾ.೨೮ ರಂದು (ನಾಳೆ) ಮೂರ್ನಾಡು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಬೆಳಿಗ್ಗೆ ೧೦ ಗಂಟೆಗೆ ರಕ್ತದಾನ ಶಿಬಿರ ಕಾರ್ಯಕ್ರಮ ಉದ್ಘಾಟನೆಗೊಳ್ಳಲಿದೆ. ಸಾರ್ವಜನಿಕರು ರಕ್ತದಾನ ಶಿಬಿರದಲ್ಲಿ ಪಾಲ್ಗೊಂಡು ರಕ್ತದಾನ ಮಾಡಿ ಸಹಕರಿಸಬೇಕಾಗಿ ಮೂರ್ನಾಡು ಲಯನ್ಸ್ ಅಧ್ಯಕ್ಷ ಅರುಣ್ ಅಪ್ಪಚ್ಚು ಅವರು ತಿಳಿಸಿದ್ದಾರೆ.