ಗೋಣಿಕೊಪ್ಪಲು, ಅ. ೨೬: ಬೈಕ್‌ನಲ್ಲಿ ಶಾಲೆಗೆ ತೆರಳುತ್ತಿದ್ದ ವೇಳೆ ಶಾಲಾ ಬಸ್‌ಗೆ ಡಿಕ್ಕಿಯಾದ ಪರಿಣಾಮ ವಿದ್ಯಾರ್ಥಿ ಮೃತಪಟ್ಟ ಘಟನೆ ಕೋತೂರು ಬಳಿ ನಡೆದಿದೆ.
ಪೊನ್ನಂಪೇಟೆ ಕರ್ನಾಟಕ ಪಬ್ಲಿಕ್ ಶಾಲೆಯ ೧೦ನೇ ತರಗತಿ ವಿದ್ಯಾರ್ಥಿ ಆದಿತ್ಯ (೧೭) ಮೃತ ದುರ್ದೈವಿ.
ಮೃತ ವಿದ್ಯಾರ್ಥಿ ತನ್ನ ಶಾಲೆಯ ಶುಲ್ಕ ಪಾವತಿಸಲು ಕೋತೂರಿನ ತನ್ನ ಮನೆಯಿಂದ ಬೆಳಿಗ್ಗೆ ಬೈಕ್‌ನಲ್ಲಿ ಜಿಟಿಜಿಟಿ ಮಳೆಯ ನಡುವೆ ಪೊನ್ನಂಪೇಟೆಯತ್ತ ಹೋಗುತ್ತಿದ್ದ ಎನ್ನಲಾಗಿದೆ. ಈ ವೇಳೆ ಪೊನ್ನಂಪೇಟೆ ಕಡೆಯಿಂದ ಖಾಸಗಿ ಶಾಲಾ ವಾಹನವೊಂದು ಕೋತೂರು ಬಳಿ ತೆರಳುತ್ತಿದ್ದ ಸಂದರ್ಭ ಬೈಕ್‌ನಲ್ಲಿದ್ದ ವಿದ್ಯಾರ್ಥಿ ತನ್ನ ನಿಯಂತ್ರಣ ಕಳೆದುಕೊಂಡು ಶಾಲಾ ವಾಹನಕ್ಕೆ ಡಿಕ್ಕಿಪಡಿಸಿದ್ದಾನೆ.
ಈ ವೇಳೆ ವಿದ್ಯಾರ್ಥಿ ಆದಿತ್ಯನ ಬೈಕ್ ರಸ್ತೆಯಲ್ಲಿಯೇ ಮಗುಚಿಕೊಂಡಿದೆ. ಪರಿಣಾಮ ತಲೆ ಹಾಗೂ ಕೈಕಾಲುಗಳಿಗೆ ಗಂಭೀರ ಗಾಯವಾಗಿದೆ. ಕೂಡಲೇ ಗಾಯಾಳುವನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ಸಾಗಿಸುವಾಗ ಮಾರ್ಗ ಮಧ್ಯೆ ಮೃತಪಟ್ಟಿದ್ದಾನೆ. ಮೃತಪಟ್ಟ ಯುವಕ ಕೋತೂರು ನಿವಾಸಿ ದಿ.ಶಿವರಾಜ್ ಹಾಗೂ ಸೌಭಾಗ್ಯ ದಂಪತಿ ಪುತ್ರ. ಸುದ್ದಿ ತಿಳಿದ ಕುಟ್ಟ ವೃತ್ತ ನಿರೀಕ್ಷಕ ಮಂಜಪ್ಪ ಹಾಗೂ ಸಿಬ್ಬಂದಿಗಳು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿ ಅಪಘಾತಕ್ಕೆ ಸಂಬAಧಿಸಿದ ಶಾಲಾ ವಾಹನವನ್ನು ವಶಕ್ಕೆ ಪಡೆದಿದ್ದಾರೆ.