ಮಡಿಕೇರಿ, ಅ. ೨೬: ನಗರದ ಹೊರವಲಯದಲ್ಲಿರುವ ಜವಾಹರ್ ನವೋದಯ ವಿದ್ಯಾಲಯದ ೨೧ ವಿದ್ಯಾರ್ಥಿಗಳಲ್ಲಿ ಕೊರೊನಾ ಸೋಂಕು ಕಂಡು ಬಂದಿದೆ. ಜವಾಹರ್ ನವೋದಯ ವಿದ್ಯಾಲಯದ ಕೆಲ ಮಕ್ಕಳಲ್ಲಿ ಜ್ವರ ಕಂಡು ಬಂದ ಹಿನ್ನೆಲೆಯಲ್ಲಿ ಅಲ್ಲಿನ ಪ್ರಾಂಶುಪಾಲರ ಮನವಿಯಂತೆ ಕೋವಿಡ್ ಪರೀಕ್ಷಾ ತಂಡ ನಿನ್ನೆ ದಿನ ೧೩೯ ಮಕ್ಕಳನ್ನು, ಇಂದು ೧೪೦ ಮಕ್ಕಳನ್ನು ಪರೀಕ್ಷೆಗೊಳ ಪಡಿಸಿದ್ದು, ನಿನ್ನೆ ದಿನ ಪರೀಕ್ಷೆಗೊಳಪಟ್ಟ ೧೩೯ ವಿದ್ಯಾರ್ಥಿಗಳ ಪೈಕಿ ೨೧ ವಿದ್ಯಾರ್ಥಿಗಳಲ್ಲಿ ಕೊರೊನಾ ಸೋಂಕು ಕಂಡು ಬಂದಿದೆ. ೧೮ ವಿದ್ಯಾರ್ಥಿಗಳನ್ನು ಕೋವಿಡ್ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಉಳಿದ ಮೂವರು ವಿದ್ಯಾರ್ಥಿಗಳು ಮನೆಗೆ ತೆರಳಿದ್ದಾರೆ. ಇಂದು ಪರೀಕ್ಷೆಗೆ ಒಳಪಟ್ಟ ವಿದ್ಯಾರ್ಥಿಗಳ ವರದಿ ಇನ್ನಷ್ಟೇ ಬರಬೇಕಿದೆ. ತಾ. ೨೭ ರಂದು (ಇಂದು) ಅಲ್ಲಿನ ಸಿಬ್ಬಂದಿ ಗಳನ್ನೂ ಕೂಡ ಪರೀಕ್ಷೆಗೆ ಒಳಪಡಿಸಲಾಗುತ್ತದೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ. ವೆಂಕಟೇಶ್ ತಿಳಿಸಿದ್ದಾರೆ.