ಸೋಮವಾರಪೇಟೆ, ಅ. ೨೫: ತಾಲೂಕು ಆಡಳಿತ ಹಾಗೂ ರಾಷ್ಟಿçÃಯ ಹಬ್ಬಗಳ ಆಚರಣಾ ಸಮಿತಿಯ ಆಶ್ರಯದಲ್ಲಿ ನವೆಂಬರ್ ೧ರಂದು ಸರಳ ಹಾಗೂ ಅರ್ಥಪೂರ್ಣವಾಗಿ ಕನ್ನಡ ರಾಜ್ಯೋತ್ಸವ ಆಚರಿಸಲು ತೀರ್ಮಾನಿಸ ಲಾಯಿತು.

ಇಲ್ಲಿನ ತಾಲೂಕು ಕಚೇರಿಯಲ್ಲಿ ಸಮಿತಿ ಅಧ್ಯಕ್ಷರಾದ ತಹಶೀಲ್ದಾರ್ ಗೋವಿಂದರಾಜು ಅವರ ಅಧ್ಯಕ್ಷತೆ ಯಲ್ಲಿ ನಡೆದ ಸಭೆಯಲ್ಲಿ ಕಾರ್ಯ ಕ್ರಮದ ಬಗ್ಗೆ ಚರ್ಚಿಸಲಾಯಿತು.

ನ.೧ ರಂದು ಸ್ಥಳೀಯ ಸರ್ಕಾರಿ ಪದವಿಪೂರ್ವ ಕಾಲೇಜು ಆವರಣ ದಲ್ಲಿ ರಾಜ್ಯೋತ್ಸವ ಸಮಾರಂಭ ನಡೆಸಲು ನಿರ್ಧರಿಸಲಾಯಿತು. ಕೋವಿಡ್‌ನಿಂದಾಗಿ ಕಳೆದ ಎರಡು ವರ್ಷ ಎಲ್ಲಾ ರಾಷ್ಟಿçÃಯ ಹಬ್ಬಗಳನ್ನು ಸಾಂಕೇತಿಕವಾಗಿ ಆಚರಿಸಲಾಗಿದೆ. ಆದರೆ ಈ ಬಾರಿ ಪರಿಸ್ಥಿತಿ ಸುಧಾರಿಸಿದೆ. ಅಲ್ಲದೆ ಇತರ ಜಿಲ್ಲೆ ಗಳಲ್ಲಿ ಅದ್ಧೂರಿಯಾಗಿ ಆಚರಿಸಲು ಸಿದ್ಧತೆ ನಡೆಸಲಾಗುತ್ತಿದೆ. ಈ ಹಿನ್ನೆಲೆ ನಮ್ಮಲ್ಲೂ ಕೋವಿಡ್ ಮಾರ್ಗಸೂಚಿ ಯೊಂದಿಗೆ ಸಂಭ್ರಮದಿAದ ಆಚರಿಸ ಬಹುದು ಎಂದು ಸಮಿತಿಯ ಉಪಾಧ್ಯಕ್ಷ ಎಂ.ಬಿ. ಅಭಿಮನ್ಯು ಕುಮಾರ್ ಸೇರಿದಂತೆ ಇತರ ಸದಸ್ಯರು ಅಭಿಪ್ರಾಯಿಸಿದರು.

ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಮೆರವಣಿಗೆ, ಸಾಂಸ್ಕೃತಿಕ ಕಾರ್ಯಕ್ರಮ ಹೊರತು ಪಡಿಸಿ ಸರಳವಾಗಿ ಆಚರಿಸುವಂತೆ ತೀರ್ಮಾನಿಸಲಾಗಿದೆ.

ಆದ್ದರಿಂದ ಇಲ್ಲಿಯೂ ಸರಳವಾಗಿಯೇ ಆಚರಿಸೋಣ ಎಂದು ತಹಶೀಲ್ದಾರ್ ಹೇಳಿದರು. ಇದಕ್ಕೆ ಸಮಿತಿ ಸದಸ್ಯರು ಸಹಮತ ವ್ಯಕ್ತಪಡಿಸದೇ, ರಾಜ್ಯೋತ್ಸವದ ಬಗ್ಗೆ ಸರ್ಕಾರ ಹೊರಡಿಸುವ ಮಾರ್ಗಸೂಚಿಯನ್ನು ನೋಡಿಕೊಂಡು ನಂತರ ಮತ್ತೊಮ್ಮೆ ಸಭೆ ಸೇರಿ ನಿರ್ಧರಿಸುವಂತೆ ತೀರ್ಮಾನಿಸಲಾಯಿತು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕನ್ನಡ ಅಭಿವೃದ್ಧಿ ಪ್ರಾಧಿಕಾರ, ಕನ್ನಡ ಜಾಗೃತಿ ಸಮಿತಿ ಆಶ್ರಯದಲ್ಲಿ ಆ.೨೪ ರಿಂದ ೩೦ರವರೆಗೆ ‘ಕನ್ನಡಕ್ಕಾಗಿ ನಾನು’ ಎಂಬ ಘೋಷದೊಂದಿಗೆ ಒಂದು ವಾರಗಳ ಕಾಲ ಆಂದೋಲನ ಆಯೋಜಿಸಲು ಸರ್ಕಾರ ಆದೇಶ ಹೊರಡಿಸಿದೆ ಎಂದು ಕೊಡಗು ಜಿಲ್ಲಾ ಕನ್ನಡ ಜಾಗೃತಿ ಸಮಿತಿ ಸದಸ್ಯ ಎಸ್. ಮಹೇಶ್ ತಿಳಿಸಿದರು.

ಸರ್ಕಾರದ ಆದೇಶದಂತೆ ಇಲ್ಲಿಯೂ ಎಲ್ಲಾ ಶಾಲಾ ಕಾಲೇಜು ಗಳು, ಸಂಘಸAಸ್ಥೆಗಳ ಸಹಯೋಗ ದೊಂದಿಗೆ ಕಾರ್ಯಕ್ರಮ ಆಯೋಜಿಸಬೇಕಿದೆ. ತಾ. ೨೮ರಂದು ಬೆಳಗ್ಗೆ ೧೧ ಗಂಟೆಗೆ ಸರ್ಕಾರ ಸೂಚಿಸಿರುವ ನಾಡಗೀತೆಯಾದ "ಜಯ ಭಾರತ ಜನನಿಯ ತನು ಜಾತೆ" ಡಾ.ಕುವೆಂಪುರವರ "ಭಾರಿಸು ಕನ್ನಡ ಡಿಂಡಿಮವ", ಡಾ. ಕೆ.ಎಸ್. ನಿಸಾರ್ ಅಹಮದ್‌ರವರ "ಜೋಗದ ಸಿರಿ ಬೆಳಕಿನಲ್ಲಿ" ಹಾಗೂ ಹಂಸಲೇಖ ರವರ "ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು" ಈ ನಾಲ್ಕು ಗೀತೆ ಗಳನ್ನು ಸಾಮೂಹಿಕವಾಗಿ ಏಕಕಾಲ ದಲ್ಲಿ ಹಾಡುವಂತೆ ಹಾಗೂ ಸುಮಾರು ನಾಲ್ಕೆöÊದು ನಿಮಿಷಗಳ ಕಾಲ ನಿರರ್ಗಳವಾಗಿ ಅನ್ಯ ಭಾಷೆಯ ಪದಗಳನ್ನು ಬಳಸದೇ ಕನ್ನಡ ದಲ್ಲಿಯೇ ಮಾತನಾಡುವ ಸ್ಪರ್ಧೆ ಆಯೋಜಿಸಬೇಕು ಎಂದರು.

ಈ ಬಗ್ಗೆ ಚರ್ಚೆ ನಡೆದು ತಾ. ೨೮ ರಂದು ಬೆ.೧೦.೩೦ ಕ್ಕೆ ಪಟ್ಟಣದ ಜೆ.ಸಿ. ವೇದಿಕೆಯ ಬಳಿ ಸೇರಿ ಸಮೂಹ ಗಾಯನ ನಡೆಸುವಂತೆ ತೀರ್ಮಾನ ಕೈಗೊಳ್ಳಲಾಯಿತು.

ಸಭೆಯಲ್ಲಿ ಪಟ್ಟಣ ಪಂಚಾಯ್ತಿ ಅಧ್ಯಕ್ಷ ಪಿ.ಕೆ. ಚಂದ್ರು, ರಾಷ್ಟಿçÃಯ ಹಬ್ಬಗಳ ಸಮಿತಿ ಸದಸ್ಯರಾದ ಜೆ.ಸಿ.ಶೇಖರ್, ವಿಜೇತ, ಪ.ಪಂ. ಸದಸ್ಯ ಬಿ.ಆರ್. ಮಹೇಶ್, ಮುಖ್ಯಾಧಿಕಾರಿ ನಾಚಪ್ಪ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.