ನಾಪೋಕ್ಲು, ಅ. ೨೬: ಕೋವಿಡ್ ೧೯ರ ಕಾರಣದಿಂದ ಮನೆಯಿಂದ ಹೊರಬಾರಲು ಸಾಧ್ಯವಾಗದೆ ಬೇಸತ್ತ ಜನರ ಮನಸ್ಸುಗಳಿಗೆ ನಾಪೋಕ್ಲು ಕರ್ನಾಟಕ ಪಭ್ಲಿಕ್ ಶಾಲೆಯಲ್ಲಿ ನಡೆದ ಜಿಲ್ಲಾ ಮಟ್ಟದ ಯುವ ಜನೋತ್ಸವ ಮುದ ನೀಡಿತು. ಗಾಯನ, ನೃತ್ಯ, ನಾಟಕ, ಭರತ ನಾಟ್ಯ, ಜಾನಪದ ಗೀತೆಗಳು ಎಲ್ಲರÀನ್ನು ರಂಜಿಸಿತು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಕೊಡಗು ಜಿಲ್ಲಾ ಯುವ ಒಕ್ಕೂಟ, ಮಡಿಕೇರಿ, ವೀರಾಜಪೇಟೆ, ಸೋಮವಾರಪೇಟೆ ತಾಲೂಕು ಒಕ್ಕೂಟ, ನಾಪೋಕ್ಲು ಗ್ರಾಮ ಪಂಚಾಯಿತಿ, ಕರ್ನಾಟಕ ಪಬ್ಲಿಕ್ ಶಾಲೆಯ ಸಂಯುಕ್ತಾಶ್ರಯದಲ್ಲಿ ಬೇತು ಪಿ.ಎ.ಜಿ. ಗೆಳೆಯರ ಬಳಗದಿಂದ ನಡೆದ ಯುವ ಜನೋತ್ಸವ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಯಿತು.
ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದ ಗೋಣಿಕೊಪ್ಪ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಕುಲ್ಲಚಂಡ ಪ್ರಮೋದ್ ಗಣಪತಿ ಸ್ವರ್ಧಿಗಳು ಸೋಲು ಗೆಲುವನ್ನು ಸಮಾನಾಗಿ ಸ್ವೀಕÀರಿಸಬೇಕು. ವಿಜೇತ ಸ್ವರ್ಧಿಗಳು ರಾಜ್ಯಮಟ್ಟದಲ್ಲಿ ಉತ್ತಮ ಪ್ರದರ್ಶನ ನೀಡಿ ಜಿಲ್ಲೆಗೆ ಕೀರ್ತಿ ತರಬೇಕು ಎಂದು ಸಲಹೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಿಲ್ಲಾ ಯುವ ಒಕ್ಕೂಟದ ಅಧ್ಯಕ್ಷ ಪಿ.ಪಿ. ಸುಕುಮಾರ್ ವಹಿಸಿದ್ದರು. ವೇದಿಕೆಯಲ್ಲಿ ನಾಪೋಕ್ಲು ಕರ್ನಾಟಕ ಪಬ್ಲಿಕ್ ಶಾಲೆಯ ಪ್ರಾಂಶುಪಾಲೆ ಡಾ. ಅವನಿಜಾ ಸೋಮಯ್ಯ, ಉಪಪ್ರಾಂಶುಪಾಲೆ ಸೌಭಾಗ್ಯ, ಮಡಿಕೇರಿ ತಾಲೂಕು ಯುವ ಒಕ್ಕೂಟದ ಅಧ್ಯಕ್ಷ ನವೀನ್ ದೇರಳ, ವೀರಾಜಪೇಟೆ ತಾಲೂಕಿನ ಅಧ್ಯಕ್ಷೆ ಮನೆಯಪಂಡ ಶೀಲಾ ಬೋಪಣ್ಣ, ಪಿ.ಎ.ಜಿ ಗೆಳೆಯರ ಬಳಗದ ಕಾರ್ಯದರ್ಶಿ ಮಿಟ್ಟು ಸೋಮಯ್ಯ ಮತ್ತಿತರರಿದ್ದರು.
ತೀರ್ಪುಗಾರರಾಗಿ ಶಂಕರಯ್ಯ, ಚಂದ್ರಶೇಖರ್, ತೇಜಸ್ವಿನಿ ಶೆಟ್ಟಿ ಕಾರ್ಯನಿರ್ವಹಿಸಿದರು. ಶೀಲಾ ಬೋಪಣ್ಣ ಕಾರ್ಯಕ್ರಮ ನಿರ್ವಹಿಸಿದರೆ, ಕೂಡಂಡ ಸಾಬಾ ಸುಬ್ರಮಣಿ ಸ್ವಾಗತಿಸಿ, ನಿರೂಪಿಸಿ, ವಂದಿಸಿದರು.
ವಿಜೇತರು: ಶಾಸ್ತಿçÃಯ ಗಾಯನ: ಪ್ರಥಮ ಶ್ರೀರಕ್ಷಾ ಪಿ.ಪಿ ನಾಪೋಕ್ಲು. ದ್ವಿತೀಯ ಬಿ.ವಿ.ಬಿಂದು. ತೃತೀಯ ಪ್ರಗತಿ. ಆಶು ಭಾಷಣ: ಪ್ರಥಮ ಜೀವಿತ. ದ್ವಿತೀಯ ಕಾವ್ಯಶ್ರೀ. ತೃತೀಯ ಪ್ರಗತಿ. ಏಕಾಂಕ ನಾಟಕ: ಉದಯ ಸಂತ ಅನ್ನಮ್ಮ ಶಾಲೆ ಬೆಟ್ಟಗೇರಿ. ಶಾಸ್ತಿçÃಯ ವಾದನ: ಪ್ರಗತಿ. ಕೂಚುಪುಡಿ ಪ್ರಥಮ ನಮಿತ ಶೆಣೈ. ದ್ವಿತೀಯ ಶ್ರೀ ಲಕ್ಷಿö್ಮ ಬಿ.ಎಸ್. ತೃತೀಯ ಪ್ರೇಕ್ಷಾ ಬಿ.ಎ. ಒಡಿಸಿ ನೃತ್ಯ: ಪ್ರಥಮ ಪ್ರಗತಿ. ದ್ವಿತೀಯ ನಮಿತ ಶೆಣೈ. ಕಥಕ್ ನೃತ್ಯ: ಪ್ರಥಮ ಲಿಥಿನಾ. ದ್ವಿತೀಯ ವರ್ಷ. ತೃತೀಯ ಮೇಘ ಎನ್. ಭರತ ನಾಟ್ಯ: ಪ್ರಥಮ ಸಮೀಕ್ಷಾ. ದ್ವಿತೀಯ ಪ್ರಗತಿ. ತೃತೀಯ ಕಾವ್ಯಶ್ರೀ. ಜಾನಪದ ಗೀತೆ: ಪ್ರಥಮ ಗಂದರ್ವ ತಂಡ. ದ್ವಿತೀಯ ನಿಸರ್ಗ ತಂಡ. ತೃತೀಯ ಕರ್ನಾಟಕ ಪಭ್ಲಿಕ್ ಸ್ಕೂಲ್ ನಾಪೋಕ್ಲು. ಜಾನಪದ ನೃತ್ಯ: ಪ್ರಥಮ ಉದಯ ಸಂತ ಅನ್ನಮ್ಮ ಶಾಲೆ ಬೆಟ್ಟಗೇರಿ. ದ್ವಿತೀಯ ಸರ್ವದೈವತ ಆಂಗ್ಲಮಾಧ್ಯಮ ಶಾಲೆ. ತೃತೀಯ ಶ್ರೀ ರಾಮ ಟ್ರಸ್ಟ್ ನಾಪೋಕ್ಲು.
ಪ್ರಥಮ ಸ್ಥಾನಗಳಿಸಿದ ಸ್ಪರ್ಧಿಗಳು ರಾಜ್ಯ ಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸಲಿದ್ದಾರೆ. -ಪಿ.ವಿ. ಪ್ರಭಾಕರ್