ಮಡಿಕೇರಿ,ಅ.೨೫: ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘ, ದಾವಣಗೆರೆ ಜಿಲ್ಲಾ ಶಾಖೆ ವತಿಯಿಂದ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಇವರ ಸಹಯೋಗದಲ್ಲಿ ದಾವಣಗೆರೆಯಲ್ಲಿ ನಡೆದ ರಾಜ್ಯ ಸರಕಾರಿ ನೌಕರರ ಕ್ರೀಡಾ ಮತ್ತು ಸಾಂಸ್ಕೃತಿಕ ಸ್ಪರ್ಧೆಯಲ್ಲಿ ಜಿಲ್ಲೆಯ ಮಹಿಳೆಯರ ತಂಡ ೪x೪೦೦ಮೀ. ರಿಲೇಯಲ್ಲಿ ದ್ವಿತೀಯ ಹಾಗೂ ೪x೧೦೦ಮೀ ರಿಲೇಯಲ್ಲಿ ೩ನೇ ಸ್ಥಾನ ಪಡೆದುಕೊಂಡಿದೆ.
ತಂಡದಲ್ಲಿ ಮೂರ್ನಾಡು ಗ್ರಾಮ ಲೆಕ್ಕಿಗೆ ಅಕ್ಷತಾ ಶೆಟ್ಟಿ, ನಾಪೋಕ್ಲು ಗ್ರಾಮ ಲೆಕ್ಕಿಗೆ ಆರ್.ಅಮೃತ, ಶಿಕ್ಷಕಿ ಲಲಿತ, ಸಮಾಜ ಕಲ್ಯಾಣ ಇಲಾಖೆಯ ಎಂ.ಕೆ.ಸುಶೀಲ ಭಾಗವಹಿಸಿದ್ದರು.