ಮಡಿಕೇರಿ, ಅ. ೨೫: ತಾ.೨೯ರಿಂದ ೩೧ರವರೆಗೆ ಹರಿಯಾಣದ ಎ.ಡಿ.ವಿ.ವಿ.ಯಲ್ಲಿ ನಡೆಯಲಿರುವ ರಾಷ್ಟಿçÃಯ ಮಟ್ಟದ ಥ್ರೋಬಾಲ್ ಪಂದ್ಯಾವಳಿಗೆ ಕರ್ನಾಟಕ ತಂಡಕ್ಕೆ ಕೊಡಗಿನ ತಷ್ಮ ವಿ.ಎಮ್ ಆಯ್ಕೆಯಾಗಿದ್ದಾರೆ. ಜಿಲ್ಲಾ ವೈದ್ಯಕೀಯ ಕಾಲೇಜಿನಲ್ಲಿ ಅರೆಕಾಲಿಕ ಉದ್ಯೋಗಿಯಾಗಿರುವ ತಷ್ಮ ಮಡಿಕೇರಿ ತಾಲೂಕಿನ ಬೆಟ್ಟಗೇರಿ ನಿವಾಸಿ ಮಂಜೇಶ್ ಅವರ ಪತ್ನಿ ಹಾಗೂ ಮದೆನಾಡು ಗ್ರಾಮದ ಮುತ್ತಪ್ಪ ಹಾಗೂ ಗಿರಿಜಾ ದಂಪತಿಯ ಪುತ್ರಿ.