ಮಡಿಕೇರಿ, ಅ. ೨೪: ೬೬ನೇ ಕನ್ನಡ ರಾಜ್ಯೋತ್ಸವದ ಪ್ರಯುಕ್ತ ಕನ್ನಡಕ್ಕಾಗಿ ನಾವು ಅಭಿಯಾನದ ಅಂಗವಾಗಿ ಮಾತಾಡ್ ಮಾತಾಡ್ ಕನ್ನಡ ಎಂಬ ಶೀರ್ಷಿಕೆಯಡಿ ಶುದ್ಧ ಕನ್ನಡದಲ್ಲಿ ಮಾತನಾಡುವ ಸ್ಪರ್ಧೆಯನ್ನು ಆಯೋಜಿಸಲಾಗಿದೆ ಎಂದು ಕೊಡಗು ಜಿಲ್ಲಾ ಕನ್ನಡ ಜಾಗೃತಿ ಸಮಿತಿ ಸದಸ್ಯ ಎಸ್.ಮಹೇಶ್ ಹಾಗೂ ಸಮಿತಿ ಸದಸ್ಯರು ತಿಳಿಸಿದ್ದಾರೆ.

ಅನ್ಯ ಭಾಷೆಯ ಪದಗಳನ್ನು ಬಳಸದೆ ನಿರರ್ಗಳವಾಗಿ ಸರಿಗನ್ನಡದಲ್ಲಿ ೪ ನಿಮಿಷಗಳ ಕಾಲ ಕನ್ನಡ ನಾಡು ನುಡಿ ಪರಂಪರೆಗೆ ಸಂಬAಧಿಸಿದ ವಿಷಯಗಳ ಕುರಿತು ತಮ್ಮ ಚರವಾಣಿಯಲ್ಲಿ ದೃಶ್ಯ ಚಿತ್ರೀಕರಿಸಿ (ವೀಡಿಯೋ ಸೆಲ್ಫಿ) ಮಾಡಿ ಕಳುಹಿಸಬೇಕು. ವಿಜೇತರಾದ ಮೂವರಿಗೆ ಪುಸ್ತಕ ಬಹುಮಾನಗಳನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ವತಿಯಿಂದ ನೀಡಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಸಾರ್ವಜನಿಕರಿಗೆ ಮುಕ್ತ ಅವಕಾಶವಿದ್ದು, ಬರೆದು ಓದುವಂತಿಲ್ಲ, ಮೂಲ ವೀಡಿಯೋ ಸೆಲ್ಫಿಯನ್ನು ಮಾತ್ರ ಪರಿಗಣಿಸಲಾಗುವುದು. ತಿದ್ದುಪಡಿ ಮಾಡಿದ ವೀಡಿಯೊಗಳನ್ನು ಪರಿಗಣಿಸಲಾಗುವುದಿಲ್ಲ. ವೀಡಿಯೋ ಸೆಲ್ಫಿ ಕಳುಹಿಸಲು ಅಂತಿಮ ದಿನಾಂಕ ತಾ. ೨೮. ವೀಡಿಯೋ ಕಳುಹಿಸಿದ ನಂತರ ಹೆಸರು ಮತ್ತು ವಿಳಾಸವನ್ನು ಕಳುಹಿಸಬೇಕು. ವೀಡಿಯೋ ಸೆಲ್ಫಿಯನ್ನು ಮಡಿಕೇರಿ ತಾಲೂಕಿನವರು + ೯೧ ೯೪೪೮೫ ೮೭೯೧೫, ವೀರಾಜಪೇಟೆ, ಪೊನ್ನಂಪೇಟೆ ತಾಲೂಕಿನವರು + ೯೧೯೪೮೧೭ ೭೧೮೫೧, ಸೋಮವಾರಪೇಟೆ ತಾಲೂಕಿನವರು +೯೧ ೯೪೮೩೮೨೫೨೧೫, ಕುಶಾಲನಗರ ತಾಲೂಕಿನವರು + ೯೧ ೯೪೮೧೦ ೫೯೨೨೩ ದೂರವಾಣಿ ಸಂಖ್ಯೆಗಳಿಗೆ ಕಳುಹಿಸಬಹುದು.