ಕೂಡಿಗೆ, ಅ. ೨೫: ರಾಮೇಶ್ವರ ಕೂಡುಮಂಗಳೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ೨೦೨೦-೨೧ನೇ ಸಾಲಿನ ವಾರ್ಷಿಕ ಮಹಾಸಭೆಯು ಸಂಘದ ಅಧ್ಯಕ್ಷ ಕೆ.ಕೆ. ಹೇಮಂತ್ ಕುಮಾರ್ ಅಧ್ಯಕ್ಷತೆ ಯಲ್ಲಿ ಸಂಘದ ಸಭಾಂಗಣದಲ್ಲಿ ನಡೆಯಿತು.
ಸಂಘವು ಈ ಸಾಲಿನಲ್ಲಿ ರೈತರ ಸಹಕಾರದಿಂದಾಗಿ ೩೪ ಲಕ್ಷದಷ್ಟು ಲಾಭಾಂಶಗಳಿಸಲು ಸಾಧ್ಯವಾಯಿತು. ಮುಂದಿನ ದಿನಗಳಲ್ಲಿ ಸಂಘದ ಕಾರ್ಯಕ್ಷೇತ್ರಕ್ಕೆ ಸೇರಿದ ಎಲ್ಲಾ ವರ್ಗದ ರೈತರಿಗೆ ಅನುಕೂಲ ವಾಗುವ ರೀತಿಯಲ್ಲಿ ಬೈಲಾ ತಿದ್ದುಪಡಿ ಮಾಡಿಕೊಂಡು ಸದಸ್ಯತ್ವ ಠೇವಣಿ, ಎಲ್ಲಾ ವಿಧವಾದ ಸಾಲ ಸೌಲಭ್ಯ ಗಳನ್ನು ನೀಡಲಾಗು ವುದು. ಅಲ್ಲದೆ ಸಂಘದ ಅಭಿವೃದ್ಧಿಯ ದೃಷ್ಟಿಯಿಂದ ಒಂದೂವರೆ ಕೋಟಿ ವೆಚ್ಚದಲ್ಲಿ ಕಲ್ಯಾಣ ಭವನ ಮತ್ತು ಅಂಗಡಿ ಮಳಿಗೆಗಳನ್ನು ಕಟ್ಟಲು ತೀರ್ಮಾನ ಕೈಗೊಳ್ಳಲಾಗುವುದು ಎಂದು ಹೇಮಂತ್ಕುಮಾರ್ ತಿಳಿಸಿದರು. ಕೃಷಿ ಉಪಕರಣಗಳನ್ನು ಸಂಘದ ಮೂಲಕ ಸರಕಾರದ ನಿಯಮಗಳಿ ಗೊಳಪಟ್ಟು ಕೃಷಿ ಇಲಾಖೆಯವರ ಸಹಕಾರದೊಂದಿಗೆ ಮಾರಾಟ ಯೋಜನೆಯನ್ನು ಹಮ್ಮಿಕೊಳ್ಳ ಲಾಗಿದೆ ಇದರ ಜೊತೆಯಲ್ಲಿ ಎಂ, ಎಸ್, ಸಿ, ಸಾಲದ ಮುಖಾಂತರ ಗೋದಾಮು ನಿರ್ಮಾಣ ಮಾಡಿ ರೈತರಿಗೆ ಅನುಕೂಲವಾಗುವ ರೀತಿಯಲ್ಲಿ ಕೀಟನಾಶಕ, ಔಷಧಿ ಮೊದಲಾದ ಸೌಲಭ್ಯ ಒದಗಿಸುವ ಯೋಜನೆಯನ್ನು ಈ ಸಾಲಿನಲ್ಲಿ ಹಮ್ಮಿಕೊಳ್ಳಲಾಗಿದೆ. ಇದಕ್ಕೆ ಎಲ್ಲಾ ರೈತರ ಸಹಕಾರ ಮುಖ್ಯ ಎಂದರು.
ಸಭೆಯಲ್ಲಿ ಹಾಜರಿದ್ದ ಸಂಘದ ರೈತ ಸದಸ್ಯರು ಸಂಘದ ಬೆಳವಣಿಗೆಗೆ ಪೂರಕವಾಗಿ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದರು. ಜೊತೆಗೆ ಸೀಗೆಹೊಸೂರು ಗ್ರಾಮದಲ್ಲಿ ರೈತರಿಗೆ ರೈತ ಕಣವನ್ನು ಮಾಡುವ ಬಗ್ಗೆ ಚರ್ಚೆಗಳು ನಡೆದವು.
ವಾರ್ಷಿಕ ಬಜೆಟ್ ಮತ್ತು ಬೈಲಾ ತಿದ್ದುಪಡಿಯ ಚರ್ಚೆ ನಡೆದು ಅನುಮೋದನೆಗೊಂಡವು.ವಾರ್ಷಿಕ ವರದಿಯನ್ನು ಸಂಘದ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಎಂ.ಪಿ. ಮೀನ ವಾಚಿಸಿದರು.
ಸಭೆಯಲ್ಲಿ ಸಂಘದ ಉಪಾಧ್ಯಕ್ಷ ಟಿ.ಪಿ. ಹಮೀದ್, ನಿರ್ದೇಶಕರಾದ ಕೆ.ಕೆ. ಭೋಗಪ್ಪ, ತಮ್ಮಣೆಗೌಡ, ಕೆ.ಟಿ. ಅರುಣ್ಕುಮಾರ್, ಎಸ್.ಎನ್. ರಾಜಾರಾವ್, ಟಿ.ಕೆ. ವಿಶ್ವನಾಥ್, ಹೆಚ್.ಆರ್. ಪಾರ್ವತಮ್ಮ, ಕೆ.ಎನ್. ಲಕ್ಷಣರಾಜೇಅರಸ್, ಕೃಷ್ಣ ಗೌಡ, ವಿ. ಬಸಪ್ಪ, ರಮೇಶ್, ಕೆ.ಕೆ. ಪವಿತ್ರ, ಕುಶಾಲನಗರದ ಜಿಲ್ಲಾ ಕೇಂದ್ರ ಬ್ಯಾಂಕ್ನ ವ್ಯವಸ್ಥಾಪಕ ತುಂಗರಾಜ್ ಸೇರಿದಂತೆ ಸಂಘದ ನೂರಾರು ರೈತ ಸದಸ್ಯರು ಭಾಗವಹಿಸಿದ್ದರು.