ಶನಿವಾರಸಂತೆ, ಅ. ೨೫: ಸಮೀಪದ ಬೆಸೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೂಡ್ಲೂರು ಗ್ರಾಮದಲ್ಲಿ ಹಿಟ್ಟಿನ ಗಿರಣಿ ಬೆಲ್ಟ್ಗೆ ಸಿಲುಕಿದ ತಾಯಿಯನ್ನು ಸಮಯ ಪ್ರಜ್ಞೆಯಿಂದ ಬಾಲಕ ದೀಕ್ಷಿತ್ (೮) ರಕ್ಷಿಸಿ ಗ್ರಾಮಸ್ಥರ ಮೆಚ್ಚುಗೆಗೆ ಪಾತ್ರನಾಗಿದ್ದಾನೆ.

ಚಾಲನೆಯಲ್ಲಿದ್ದ ಗಿರಣಿಯ ಬೆಲ್ಟ್ಗೆ ಆಕಸ್ಮಿಕವಾಗಿ ತಾಯಿ ಅರ್ಪಿತಾ ಅವರ ತಲೆ ಸಿಲುಕಿಕೊಂಡು ಜೋರಾಗಿ ಕೂಗಿಕೊಂಡರು. ತಾಯಿಯ ಕೂಗು ಕೇಳಿ ದೂರದಲ್ಲಿ ಆಟವಾಡುತ್ತಿದ್ದ ಪುತ್ರ ದೀಕ್ಷಿತ್ ಓಡಿಬಂದು ಸಮಯಪ್ರಜ್ಞೆ ತೋರಿ ಸ್ವಿಚ್ ಆಫ್ ಮಾಡುವ ಮೂಲಕ ಪ್ರಾಣಾಪಾಯದಿಂದ ತನ್ನ ತಾಯಿಯನ್ನು ಕಾಪಾಡಿದ್ದಾನೆ.