ಸಿದ್ದಾಪುರ, ಅ. ೨೫ : ದಲಿತರಿಗೆ ನಿರ್ಮಿಸುತ್ತಿರುವ ಮನೆಗಳು ಕಳಪೆ ಯಾಗಿವೆ ಎಂದು ಆರೋಪಿಸಿ ಭಾರತ ಕಮ್ಯುನಿಸ್ಟ್ ಪಕ್ಷದ ವತಿಯಿಂದ ಜಿಲ್ಲಾಧಿಕಾರಿಯವರಿಗೆ ದೂರು ನೀಡಲಾಯಿತು. ಮಾತನಾಡಿದ ಸಿಪಿಐ ಮುಖಂಡ ರಮೇಶ್, ಮಾಯಮುಡಿ ಕೆದಮುಳ್ಳೂರು ಗ್ರಾ.ಪಂ. ವ್ಯಾಪ್ತಿಯ ಬಾರಿಕಾಡು ಎಂಬಲ್ಲಿ ಪರಿಶಿಷ್ಟ ಜಾತಿಗೆ ಸೇರಿದ ೫೯ ಕುಟುಂಬಗಳು ಹಲವು ವರ್ಷಗಳಿಂದ ಶೆಡ್ ಮನೆಗಳಲ್ಲಿ ವಾಸವಾಗಿದ್ದು ಇವರಿಗೆ ಸರಕಾರದ ವತಿಯಿಂದ ೫೦ ಮನೆಗಳನ್ನು ನಿರ್ಮಿಸಲಾಗುತ್ತಿದ್ದು, ಈ ಕಾಮಗಾರಿ ಸಂಪೂರ್ಣ ಕಳಪೆಯಾಗಿದೆ. ಈ ಬಗ್ಗೆ ಸೂಕ್ತ ತನಿಖೆ ನಡೆಸಬೇಕೆಂದು ಆಗ್ರಹಿಸಿದರು. ಪಿ.ಕೆ ರಘು, ಪಿ.ಪಿ. ಬೋಜ ಹಾಜರಿದ್ದರು.