ಮಡಿಕೇರಿ,ಅ.೨೩; ಸಾರಿಗೆ ಇಲಾಖೆಯಲ್ಲಿ ಉದ್ಯೋಗ ಕೊಡಿಸುವದಾಗಿ ವಂಚಿಸಿದ ಸಂದರ್ಭ ಪೊಲೀಸ್ ಅತಿಥಿಯಾಗಿದ್ದಾಗ ತಾನು ಪ್ರಭಾವಿ, ತನಗೆ ಪಾಂಡವಪುರದಲ್ಲಿ ಸಕ್ಕರೆ ಕಾರ್ಖಾನೆ ಇರುವದಾಗಿ ಪುನಿತ್ ಪೊಲೀಸರಿಗೆ ಮಾಹಿತಿ ಕೊಟ್ಟಿದ್ದ..!

ಪುತ್ತೂರಿನ ಅಶ್ವಿನ್ ಎಂಬವರಿಗೆ ಸಾರಿಗೆ ಇಲಾಖೆಯಲ್ಲಿ ಸಹಾಯಕ ಆಡಳಿತಾಧಿಕಾರಿ ಹುದ್ದೆ ಕೊಡಿಸುವದಾಗಿ ನಂಬಿಸಿ ನಕಲಿ ನೇಮಕಾತಿ ಪತ್ರ ನೀಡಿ, ರೂ.೮.೫೦ಲಕ್ಷ ಹಣ ಪಡೆದು ವಂಚಿಸಿದ ಬಳಿಕ ಬೆಂಗಳೂರು ಪೊಲೀಸರ ಸೂಚನೆಯಂತೆ ಅಶ್ವಿನ್ ಪುತ್ತೂರಿನಲ್ಲಿ ಪುನಿತ್ ಹಾಗೂ ಸಿರಿಲ್ ವಿರುದ್ಧ ದೂರು ದಾಖಲಿಸಿದ್ದರು. ದೂರಿನ ಆಧಾರದಲ್ಲಿ ಪೊಲೀಸರು ಈರ್ವರನ್ನು ಠಾಣೆಗೆ ಕರೆಸಿ ವಿಚಾರಿಸಿದ ಸಂದರ್ಭ ಪುನಿತ್ ಹಣ ಹಿಂತಿರುಗಿಸುವದಾಗಿ ಹೇಳಿದನಲ್ಲದೆ, ತಾನು ಪ್ರಭಾವಿ ವ್ಯಕ್ತಿಯೆಂದು ಪರಿಚಯಿಸಿಕೊಂಡಿದ್ದ. ತಾನು ಪಾಂಡವಪುರದಲ್ಲಿದ್ದು, ತನಗೆ ಅಲ್ಲಿ ಸಕ್ಕರೆ ಕಾರ್ಖಾನೆ ಇರುವದಾಗಿಯೂ, ಇದಕ್ಕೆ ಪೂರಕವೆಂಬAತೆ ಅಲ್ಲಿಯ ಆಧಾರ್ ಕಾರ್ಡ್, ಇನ್ನಿತರ ದಾಖಲೆಗಳನ್ನೂ ನೀಡಿದ್ದ. ಆತನ ಮಾತುಗಳನ್ನು ನಂಬಿದ ಪೊಲೀಸರು ಅಶ್ವಿನ್‌ಗೆ ಹಣ ಹಿಂದಿರುಗಿಸುವAತೆ ಹಿಂಬರಹ ಬರೆಸಿಕೊಂಡು ಬಿಟ್ಟು ಕಳುಹಿಸಿದ್ದರು.

ಹಿಡಿತದಲ್ಲಿ ಸಿರಿಲ್..!

ಇತ್ತ ಸಿರಿಲ್‌ನನ್ನು ಬಳಸಿಕೊಂಡು ಡೀಲ್ ಮಾಡಿದ್ದ ಪುನಿತ್‌ನ ಹಗರಣ ಬಯಲಾಗಿ ಪೊಲೀಸ್ ಮೆಟ್ಟಿಲೇರುತ್ತಿದ್ದಂತೆ ಪುನಿತ್ ಸಿರಿಲ್‌ನನ್ನು ತನ್ನ ಹಿಡಿತದಲ್ಲಿಟ್ಟುಕೊಂಡಿದ್ದಾನೆ. ಹಣ ಪಡೆದುದರಲ್ಲಿ ಸಿರಿಲ್‌ನನ್ನು ಮುಂದಾಗಿರಿಸಿ ಪೊಲೀಸರು ನಿನ್ನನ್ನೇ ಒಳಗೆ ಹಾಕುತ್ತಾರೆಂದು ಬೆದರಿಸಿಟ್ಟಿದ್ದ. ಇದರಿಂದಾಗಿ ದಿಕ್ಕು ತೋಚದೆ ಸಿರಿಲ್ ಕೆಲವು ಸಮಯ ಆತನೊಂದಿಗೆ ಇದ್ದು, ಆತ ಹೇಳಿದಂತೆ ಕೇಳುತ್ತಿದ್ದ.

ನಂತರದಲ್ಲಿ ಪೊಲೀಸರು ಹುಡುಕಾಟ ಆರಂಭಿಸಿದಾಗ ವಿಧಿಯಿಲ್ಲದೆ ತಲೆಮರೆಸಿಕೊಂಡಿದ್ದಾನೆ. ಅಶ್ವಿನ್‌ಗೆ ಹಣ ಹಿಂತಿರುಗಿಸದೇ ಇದ್ದುದರಿಂದ ಈ ಸಂಬAಧ ಮತ್ತೆ ಅಶ್ವಿನ್ ಪೊಲೀಸರ ಗಮನಕ್ಕೆ ತಂದಾಗ ಪೊಲೀಸರು ಸಿರಿಲ್ ಮನೆಗೆ ತೆರಳಿ ನೋಡಿದಾಗ ಮನೆ ಖಾಲಿಯಾಗಿತ್ತು..! ಇದೀಗ ಸಿರಿಲ್‌ಗಾಗಿಯೂ ಸಿಐಡಿ ಪೊಲೀಸರ ಹುಡುಕಾಟ ನಡೆಯುತ್ತಿದೆ..!

@ ಕುಡೆಕಲ್ ಸಂತೋಷ್