*ಗೋಣಿಕೊಪ್ಪ, ಅ. ೨೨: ಧನುಗಾಲ ಗ್ರಾಮದಲ್ಲಿ ಕಾಡಾನೆಗಳ ಹಾವಳಿ ಮಿತಿಮೀರಿದ್ದು, ಭತ್ತದ ಫಸಲನ್ನು ನಾಶ ಮಾಡುತಿವೆ. ಕಳೆದ ಕೆಲ ದಿನಗಳಿಂದ ಧನುಗಾಲ ಗ್ರಾಮದಲ್ಲಿ ಕಾಡಾನೆಗಳ ಹಿಂಡು ಬೀಡುಬಿಟ್ಟಿದ್ದು, ಬೆಳೆ ಕುಯ್ಯುವ ಸಮಯದಲ್ಲಿ ಭತ್ತದ ಫಸಲನ್ನು ಸಂಪೂರ್ಣ ತಿಂದು ಹಾಕಿದೆ. ಅಲ್ಲದೇ ಆನೆಯ ಹೆಜ್ಜೆಗೆ ಗದ್ದೆಗಳಲ್ಲಿನ ಬೆಳೆಗಳು ನಾಶವಾಗುತ್ತಿದೆ. ಇದರಿಂದ ರೈತರಿಗೆ ಬಹುನಷ್ಟ ಸಂಭವಿಸುತ್ತಿದೆ. ಗುರುವಾರವು ಧನುಗಾಲದ ಗ್ರಾಮದ ಜೆ.ಎಂ. ವಿರೂಪಾಕ್ಷ ಅವರಿಗೆ ಸೇರಿದ ಮೂರು ಎಕರೆ ಭತ್ತದ ಗದ್ದೆಯ ಬೆಳೆದ ಭತ್ತದ ಫಸಲು ನಾಶವಾಗಿದೆ. ಅರಣ್ಯ ಅಧಿಕಾರಿಗಳು ಕಾಡಾನೆಗಳಿಂದ ರೈತರಿಗೆ ಉಂಟಾಗುತ್ತಿರುವ ಉಪಟಳವನ್ನು ತಡೆಯಲು ಆಸಕ್ತಿ ತೋರಬೇಕೆಂದು ಸ್ಥಳೀಯ ಗ್ರಾಮಸ್ಥರು ಒತ್ತಾಯಿಸಿದ್ದಾರೆ.