ಸಿದ್ದಾಪುರ, ಅ. ೨೨: ಸಿದ್ದಾಪುರ ಮಾಲ್ದಾರೆ ಮುಖ್ಯ ರಸ್ತೆಯ ಘಟ್ಟದಳ್ಳ ಎಂಬಲ್ಲಿ ಕಳೆದ ಹಲವಾರು ತಿಂಗಳಿAದ ಸೇತುವೆ ನಿರ್ಮಾಣ ಕಾಮಗಾರಿ ನಡೆಯುತ್ತಿದ್ದು, ಕೋವಿಡ್ ಮತ್ತು ಮಳೆಯ ಕಾರಣ ಕಾಮಗಾರಿ ಅರ್ಧದಲ್ಲಿ ಸ್ಥಗಿತಗೊಂಡಿತ್ತು.
ಕಳೆದೆರಡು ದಿನಗಳಿಂದ ಈ ಕಾಮಗಾರಿ ಮರು ಪ್ರಾರಂಭವಾಗಿದ್ದು, ಬದಲಿ ರಸ್ತೆ ಮಾಡದಿರುವುದರಿಂದ ಈ ಭಾಗದಲ್ಲಿ ಸಂಚರಿಸುವ ವಾಹನಗಳು ಸಿಲುಕಿಕೊಂಡು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಕೂಡಲೇ ಸಂಬAಧಪಟ್ಟವರು ಈ ಬಗ್ಗೆ ಗಮಹರಿಸಿ ಪರ್ಯಾಯ ಬದಲಿ ರಸ್ತೆಯಲ್ಲಿ ಕಲ್ಲು ಹಾಕಿ ವಾಹನಗಳ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡದಿದ್ದಲ್ಲಿ ಗ್ರಾಮಸ್ಥರೊಂದಿಗೆ ಬೃಹತ್ ಪ್ರತಿಭಟನೆ ನಡೆಸುವುದಾಗಿ ಮಾಲ್ದಾರೆ ಭಾಗದ ಜನಪ್ರತಿನಿಧಿಗಳು ಸಂಬAಧಪಟ್ಟ ಇಲಾಖೆಗೆ ಎಚ್ಚರಿಕೆ ನೀಡಿದ್ದಾರೆ.