ಕುಶಾಲನಗರ, ಅ. ೨೩: ಶಿಕ್ಷಕರೊಂದಿಗೆ ಪೋಷಕರು ಕೈಜೋಡಿಸುವುದರ ಜೊತೆ ಸಮಾಜ ಕೂಡ ಪೂರಕ ವಾತಾವರಣ ನಿರ್ಮಿಸಿದರೆ ಮಾತ್ರ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವ ಪ್ರಜ್ಞಾವಂತ ನಾಗರಿಕ ಸಮಾಜ ನಿರ್ಮಾಣ ಸಾಧ್ಯ ಎಂದು ‘ಶಕ್ತಿ’ ಸಂಪಾದಕ ಜಿ. ಚಿದ್ವಿಲಾಸ್ ಅಭಿಪ್ರಾಯ ವ್ಯಕ್ತಪಡಿಸಿದರು.
ಕುಶಾಲನಗರದಲ್ಲಿ ಪ್ರಜ್ಞಾವಂತ ನಾಗರಿಕ ವೇದಿಕೆ ಉದ್ಘಾಟನಾ ಕಾರ್ಯಕ್ರಮ ನೆರವೇರಿಸಿ ಮಾತನಾಡಿದ ಅವರು, ಮಕ್ಕಳನ್ನು ಶಾಲೆಗೆ ಕಳಿಸುವ ಕೆಲಸದ ಜತೆಗೆ ತಮ್ಮ ಜವಾಬ್ದಾರಿಯನ್ನು ಪೋಷಕರು ನಿಭಾಯಿಸಬೇಕಾಗಿದೆ. ಗುರುಗಳು ಮಕ್ಕಳನ್ನು ಬುದ್ಧಿವಂತ ವಿದ್ಯಾರ್ಥಿ ಗಳನ್ನಾಗಿ ರೂಪಿಸುವುದರ ಜೊತೆ ಜವಾಬ್ದಾರಿಯುತ ಪ್ರಜೆಯನ್ನಾಗಿಯೂ ಮಾಡಬೇಕು. ಪೋಷಕರು ತಮ್ಮ ಮಕ್ಕಳೊಂದಿಗೆ ನಿರಂತರ ಓಡಾಟ, ಒಡನಾಟದ ಬಗ್ಗೆ ಚಿಂತನೆ ಹರಿಸಬೇಕು ಮಕ್ಕಳೊಂದಿಗೆ ಸಮಯ ಕಳೆಯಲು ಹವ್ಯಾಸ ಬೆಳೆಸಿಕೊಳ್ಳಬೇಕು ಎಂದರು. ಮನೆಯ ವಾತಾವರಣ ಉತ್ತಮವಾಗಿರುವಂತೆ ನೋಡಿಕೊಳ್ಳು ವುದು ಪ್ರಮುಖ ಜವಾಬ್ದಾರಿಯಾಗಿದೆ ಎಂದು ತಿಳಿಸಿದ ಅವರು, ಇಂದಿನ ಸಮಾಜ ಮಕ್ಕಳ ವಿಕಸನಕ್ಕೆ ಅವಕಾಶ ಕಲ್ಪಿಸುವ ಬದಲು ಕೀಳು ಅಭಿರುಚಿಯನ್ನು ಪ್ರತಿಬಿಂಬಿಸುತ್ತಿದೆ ಎಂದು ವಿಷಾದಿಸಿದರು. ಪ್ರಜ್ಞಾವಂತ ನಾಗರಿಕ ಸಮಾಜಕ್ಕೆ ಎಲ್ಲರೂ ಕೈಜೋಡಿಸಬೇಕು ಎಂದರು.
ಕಾರ್ಯಕ್ರಮದಲ್ಲಿ ರಾಜ್ಯ ಶಿಕ್ಷಕ ಪ್ರಶಸ್ತಿ ವಿಜೇತ ಡಾ. ಸದಾಶಿವಯ್ಯ ಎಸ್. ಪಲ್ಲೇದ್ ಮತ್ತು ಜಿಲ್ಲಾ ಪ್ರಶಸ್ತಿ ವಿಜೇತ ಶಿಕ್ಷಕ ಯು.ಆರ್. ನಾಗೇಶ್ ಅವರನ್ನು ಗೌರವಿಸಿ ಸನ್ಮಾನಿಸಲಾಯಿತು.
ಅಭಿನಂದನಾ ಭಾಷಣ ಮಾಡಿದ ಪ್ರಾಧ್ಯಾಪಕ ಪುಟ್ಟರಾಜುರವರು, ವಿದ್ಯಾರ್ಥಿಗಳಲ್ಲಿ ಮಾನವೀಯ ಮೌಲ್ಯಗಳನ್ನು ಸಾಮಾಜಿಕವಾಗಿ ರೂಪಿಸಬೇಕಾದ ಜವಾಬ್ದಾರಿ ಶಿಕ್ಷಕರದ್ದು ಎಂದರು. ಶಾಲಾ ತರಗತಿಗಳು ಕೇವಲ ಪಠ್ಯಕ್ಕೆ ಸೀಮಿತ ವಾಗದೆ, ಚರ್ಚಾಕೂಟ ಆಗಬೇಕು. ಅಲ್ಲಿ ಮಕ್ಕಳ ಚಿಂತನೆಗೆ ಅವಕಾಶವಿರ ಬೇಕು, ವಿದ್ಯಾರ್ಥಿಗಳ ಆಸಕ್ತಿ ವಲಯವನ್ನು ಕೇಳಿಸಿಕೊಳ್ಳಬೇಕೆಂದರು. ಕೌಟುಂಬಿಕವಾಗಿ ಆರ್ಥಿಕ ಹಿನ್ನಡೆಯಿರುವವರು ತಮ್ಮ ಮಕ್ಕಳ ಬಗ್ಗೆ ಗಮನ ಹರಿಸುವುದು ಕಷ್ಟವಾದಾಗ ಅಂತಹ ಮಕ್ಕಳನ್ನು ಶೈಕ್ಷಣಿಕವಾಗಿ ಮುಂದೆ ತರಬೇಕಾದ ಸಮಾಜ ಮಕ್ಕಳ ವಿಕಸನಕ್ಕೆ ಅವಕಾಶ ಕಲ್ಪಿಸುವ ಬದಲು ಕೀಳು ಅಭಿರುಚಿಯನ್ನು ಪ್ರತಿಬಿಂಬಿಸುತ್ತಿದೆ ಎಂದು ವಿಷಾದಿಸಿದರು. ಪ್ರಜ್ಞಾವಂತ ನಾಗರಿಕ ಸಮಾಜಕ್ಕೆ ಎಲ್ಲರೂ ಕೈಜೋಡಿಸಬೇಕು ಎಂದರು.
ಕಾರ್ಯಕ್ರಮದಲ್ಲಿ ರಾಜ್ಯ ಶಿಕ್ಷಕ ಪ್ರಶಸ್ತಿ ವಿಜೇತ ಡಾ. ಸದಾಶಿವಯ್ಯ ಎಸ್. ಪಲ್ಲೇದ್ ಮತ್ತು ಜಿಲ್ಲಾ ಪ್ರಶಸ್ತಿ ವಿಜೇತ ಶಿಕ್ಷಕ ಯು.ಆರ್. ನಾಗೇಶ್ ಅವರನ್ನು ಗೌರವಿಸಿ ಸನ್ಮಾನಿಸಲಾಯಿತು.
ಅಭಿನಂದನಾ ಭಾಷಣ ಮಾಡಿದ ಪ್ರಾಧ್ಯಾಪಕ ಪುಟ್ಟರಾಜುರವರು, ವಿದ್ಯಾರ್ಥಿಗಳಲ್ಲಿ ಮಾನವೀಯ ಮೌಲ್ಯಗಳನ್ನು ಸಾಮಾಜಿಕವಾಗಿ ರೂಪಿಸಬೇಕಾದ ಜವಾಬ್ದಾರಿ ಶಿಕ್ಷಕರದ್ದು ಎಂದರು. ಶಾಲಾ ತರಗತಿಗಳು ಕೇವಲ ಪಠ್ಯಕ್ಕೆ ಸೀಮಿತ ವಾಗದೆ, ಚರ್ಚಾಕೂಟ ಆಗಬೇಕು. ಅಲ್ಲಿ ಮಕ್ಕಳ ಚಿಂತನೆಗೆ ಅವಕಾಶವಿರ ಬೇಕು, ವಿದ್ಯಾರ್ಥಿಗಳ ಆಸಕ್ತಿ ವಲಯವನ್ನು ಕೇಳಿಸಿಕೊಳ್ಳಬೇಕೆಂದರು. ಕೌಟುಂಬಿಕವಾಗಿ ಆರ್ಥಿಕ ಹಿನ್ನಡೆಯಿರುವವರು ತಮ್ಮ ಮಕ್ಕಳ ಬಗ್ಗೆ ಗಮನ ಹರಿಸುವುದು ಕಷ್ಟವಾದಾಗ ಅಂತಹ ಮಕ್ಕಳನ್ನು ಶೈಕ್ಷಣಿಕವಾಗಿ ಮುಂದೆ ತರಬೇಕಾದ ರಾಜ್ಯಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತ ಶಿಕ್ಷಕ ಡಾ. ಸದಾಶಿವಯ್ಯ ಎಸ್. ಪಲ್ಲೇದ್ ಅವರು ಸನ್ಮಾನ ಸ್ವೀಕರಿಸಿ ಮಾತನಾಡಿ, ಸಮಾಜದಲ್ಲಿ ಶಿಕ್ಷಕರ ಗೌರವ ಕಡಿಮೆಯಾಗದಿದ್ದರೂ ಸವಾಲುಗಳು ಜಾಸ್ತಿ ಆಗಿದೆ ಎಂದರು. ಪೋಷಕರು, ಸಾಮಾಜಿಕ ಸ್ಥಿತಿ, ಅಧಿಕಾರಿಗಳ ವ್ಯವಸ್ಥೆ, ಇವೆಲ್ಲವುಗಳ ಮನಃಸ್ಥಿತಿ ಗೆಲ್ಲುವ ಅನಿವಾರ್ಯತೆ ಶಿಕ್ಷಕರಿಗಿದೆ ಎಂದರು.
ಮತ್ತೊಬ್ಬ ಜಿಲ್ಲಾಮಟ್ಟದ ಪ್ರಶಸ್ತಿ ಪುರಸ್ಕೃತ ಉ.ರಾ. ನಾಗೇಶ್ ಅವರು ಅಭಿಪ್ರಾಯ ವ್ಯಕ್ತಪಡಿಸಿ, ಪ್ರಶಸ್ತಿ ಹಾಗೂ ಸನ್ಮಾನಗಳು ಬರುವ ಮುನ್ನ ಅನುಮಾನ, ಅವಮಾನ, ಅಪಮಾನ ಗಳ ಮೆಟ್ಟಿಲು ಹತ್ತಬೇಕೆಂದರು. ಕೊಡಗನ್ನು ಕಲಾ ಕ್ಷೇತ್ರದಲ್ಲಿ ಕಡೆಗಣಿಸಬಾರದ ರೀತಿಯಲ್ಲಿ ಎಲ್ಲರ ಸಹಕಾರ ಅಗತ್ಯ ಎಂದರು.
ಅಧ್ಯಕ್ಷತೆ ವಹಿಸಿದ್ದ ಪ್ರಜ್ಞಾವಂತ ನಾಗರಿಕ ವೇದಿಕೆಯ ಅಧ್ಯಕ್ಷ ವಿ.ಪಿ. ಶಶಿಧರ್ ಅವರು ಮಾತನಾಡಿ, ನೂತನ ವೇದಿಕೆ ಯಾವುದೇ ಜಾತಿ, ಧರ್ಮ ಹಾಗೂ ರಾಜಕೀಯ ಪಕ್ಷಗಳ ಹಿಡಿತದಲ್ಲಿ ಇರುವುದಿಲ್ಲ. ಬದಲು ಸಮಾಜಮುಖಿ ಕಾರ್ಯಕ್ರಮಗಳಿಗೆ ಸೀಮಿತವಾಗಿರಲಿದೆ ಎಂದು ಸ್ಪಷ್ಟಪಡಿಸಿದರು. ಕುಶಾಲನಗರವನ್ನು ಬೌದ್ಧಿಕ ನಗರವನ್ನಾಗಿ ಮಾಡಬೇಕೆಂಬ ಆಶಯ ನೂತನವಾಗಿ ಆರಂಭಗೊAಡ ಪ್ರಜ್ಞಾವಂತ ನಾಗರಿಕ ವೇದಿಕೆಯದ್ದು ಎಂದರು.
ವೇದಿಕೆಯ ಸದಸ್ಯ ಟಿ.ಜಿ. ಪ್ರೇಮಕುಮಾರ್ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಶಿಕ್ಷಕಿ ಭಾರತಿ ಪ್ರಾರ್ಥಿಸಿದರು. ಎಸ್. ಆದಂ ವಂದಿಸಿದರು. ಶಿಕ್ಷಕಿಯರಾದ ಬಿ.ಪಿ. ಹೇಮಲತಾ, ಎಂ ತುಳಸಿ ಕಾರ್ಯಕ್ರಮ ನಿರೂಪಿಸಿದರು.