ನ. ೪ ರಿಂದ ಕುಟುಂಬ - ೨೦೨೧ ಕ್ರಿಕೆಟ್
ಮುಂದೂಡಲ್ಪಟ್ಟಿದ ಪಂದ್ಯಾವಳಿಗೆ ಚಾಲನೆ
ಮಡಿಕೇರಿ, ಅ. ೨೨: ಕೊಡಗು ಗೌಡ ಯುವ ವೇದಿಕೆಯ ವತಿಯಿಂದ ಗೌಡ ಕುಟುಂಬಗಳ ನಡುವಿನ ಕುಟುಂಬ - ೨೦೨೧ ಕ್ರಿಕೆಟ್ ಪಂದ್ಯಾಟ ನವೆಂಬರ್ ೪ ರಿಂದ ೧೨ರವರೆಗೆ ಮಡಿಕೇರಿಯ ಜನರಲ್ ತಿಮ್ಮಯ್ಯ ಕ್ರೀಡಾಂಗಣದಲ್ಲಿ ಜರುಗಲಿದೆ.
ಈ ಹಿಂದೆ ಕೋವಿಡ್ ಲಾಕ್ಡೌನ್ ಕಾರಣದಿಂದಾಗಿ ಮುಂದೂಲ್ಪಟ್ಟಿದ್ದ ಪಂದ್ಯಾವಳಿಗೆ ಮರು ಚಾಲನೆ ನೀಡಲಾಗುತ್ತಿದೆ. ಕಳೆದ ಏಪ್ರಿಲ್ ೨೧ ರಂದು ಪಂದ್ಯಾಟ ಆರಂಭಗೊAಡಿತ್ತಾದರೂ ಮರು ದಿನದಿಂದಲೇ ಕೋವಿಡ್ - ಲಾಕ್ಡೌನ್ ಜಾರಿಯಾದ್ದರಿಂದ ಪಂದ್ಯಾವಳಿಯನ್ನು ತಾತ್ಕಾಲಿಕವಾಗಿ ಮುಂದೂಡಲಾಗಿತ್ತು. ಇದಕ್ಕೆ ಸಂಬAಧಿಸಿದAತೆ ಪಂದ್ಯಾಟಗಳು ಹಿಂದಿನ ವೇಳಾಪಟ್ಟಿಯ (ಟೈಸ್) ಪ್ರಕಾರವೇ ನಡೆಯಲಿದೆ ಎಂದು ಸಂಘಟಕರು ತಿಳಿಸಿದ್ದಾರೆ.
ಈಗಾಗಲೇ ಪಂದ್ಯಾಟದ ದಿನಾಂಕ ಮತ್ತು ಸಮಯವನ್ನು ನಿಗದಿಪಡಿಸಲಾಗಿದೆ ಎಂದೂ ಅವರು ತಿಳಿಸಿದ್ದಾರೆ. ಒಟ್ಟು ೯೮ ಕುಟುಂಬಗಳು ಪಂದ್ಯಾವಳಿಯಲ್ಲಿ ಹೆಸರು ನೋಂದಾಯಿಸಿಕೊAಡಿವೆ. ಏಪ್ರಿಲ್ ೨೧ ರಂದು ನಡೆದ ಆರಂಭದ ದಿನದ ಪಂದ್ಯಾಟದಲ್ಲಿ ಜಯಗಳಿಸಿರುವ ಪರ್ಲಕೋಟಿ ಹಾಗೂ ಮೂಲೆಮಜಲು ತಂಡಗಳು ಈಗಾಗಲೇ ಪ್ರಿ-ಕ್ವಾರ್ಟರ್ ಹಂತ ತಲುಪಿದ್ದು, ಇತರ ಪಂದ್ಯಾವಳಿಗಳು ಯಥಾ ಪ್ರಕಾರ ಮುಂದುವರಿಯಲಿದೆ. ಹೆಚ್ಚಿನ ಮಾಹಿತಿಗೆ ಪುದಿಯನೆರವನ ರಿಶಿತ್ ಮಾದಯ್ಯ (೯೯೭೨೩೭೬೧೫೧) ಹಾಗೂ ಕಟ್ಟೆಮನೆ ರೋಷನ್ (೯೪೪೯೩೬೧೯೩೩) ಅವರನ್ನು ಸಂಪರ್ಕಿಸಬಹುದಾಗಿದೆ.