ಮಡಿಕೇರಿ, ಅ. ೨೩: ಹಾರಂಗಿ ಹಿನ್ನೀರು ಪ್ರದೇಶದಲ್ಲಿ ಮುಳುಗಡೆ ಯಾಗಿರುವ ಅರಣ್ಯ ಪ್ರದೇಶಕ್ಕೆ ಬದಲಾಗಿ ಕಂದಾಯ ಇಲಾಖೆ ಮೂಲಕ ೧೧೭೨೨.೨೯ ಹೆಕ್ಟೇರ್ ಜಾಗ ನೀಡಬೇಕೆಂದು ರಾಜ್ಯ ಉಚ್ಚ ನ್ಯಾಯಾಲಯ ತೀರ್ಪು ನೀಡಿದ್ದು, ಈ ಪ್ರಕರಣಕ್ಕೆ ಸಂಬAಧಿಸಿದAತೆ ಜಿಲ್ಲಾಡಳಿತ, ಸರಕಾರ ನ್ಯಾಯಾಲಯಕ್ಕೆ ಯಾವದೇ ಪೂರಕ ಮಾಹಿತಿ ನೀಡುವಲ್ಲಿ ವಿಫಲವಾಗಿದೆ. ತೀರ್ಪನ್ನು ಪುನರ್ ಪರಿಶೀಲಿಸಲು ಕಾನೂನಿನಲ್ಲಿ ಅವಕಾಶವಿದ್ದು, ಈ ಹಿನ್ನೆಲೆಯಲ್ಲಿ ಸರಿಯಾದ ಮಾಹಿತಿಯೊಂದಿಗೆ ಜಿಲ್ಲಾಧಿಕಾರಿ, ಸರಕಾರ ಹಾಗೂ ಪ್ರತಿವಾದಿಗಳು ಮರು ಪರಿಶೀಲನೆಗೆ ಅರ್ಜಿ ಸಲ್ಲಿಸಬೇಕೆಂದು ಕೆಪಿಸಿಸಿ ಕಾನೂನು ಘಟಕದ ಅಧ್ಯಕ್ಷ ಎ.ಎಸ್ ಪೊನ್ನಣ್ಣ ಆಗ್ರಹಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿಂದು ಮಾತನಾಡಿದ ಅವರು; ಹಾರಂಗಿ ಹಿನ್ನೀರು ಪ್ರದೇಶದಲ್ಲಿ ಮುಳುಗಡೆ ಯಾಗಿರುವ ಅರಣ್ಯ ಜಾಗಕ್ಕೆ ಪರ್ಯಾಯವಾಗಿ ಕಂದಾಯ ಇಲಾಖೆಗೆ ಸೇರಿದ ಸಿ ಮತ್ತು ಡಿ ಜಾಗದಲ್ಲಿ ೧೧೭೨೨.೨೯ ಎಕರೆಯಷ್ಟು ಜಾಗವನ್ನು ನೀಡುವಂತೆ ಉಚ್ಚ ನ್ಯಾಯಾಲಯ ನಿರ್ದೇಶನ ನೀಡಿದೆ. ಅಂದಾಜು ಪ್ರಕಾರ ಇದು ಸುಮಾರು ೩೦ ಸಾವಿರ ಎಕರೆಯಷ್ಟು ಆಗಲಿದೆ. ಈ ತೀರ್ಪಿನ ಹಿನ್ನೆಲೆಯಲ್ಲಿ ಅಧ್ಯಯನ ಮಾಡಿದಾಗ ಜಿಲ್ಲಾಡಳಿತ, ಸರಕಾರ, ಸರಕಾರದ ಅಡ್ವಕೇಟ್ ಜನರಲ್, ಮತ್ತು ಸರಕಾರವನ್ನು ಪ್ರತಿನಿಧಿಸುವವರು ನ್ಯಾಯಾಲಯಕ್ಕೆ ವಾಸ್ತವಾಂಶದ ಬಗ್ಗೆ ಸರಿಯಾದ ಮಾಹಿತಿ ನೀಡಿರುವದಿಲ್ಲ ದಿರುವದು ಗೋಚರಿಸುತ್ತದೆ. ಮಾಹಿತಿ ನೀಡುವಲ್ಲಿ ಸರಕಾರ ವಿಫಲವಾಗಿದೆ. ಈ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆಗೆ ಜಾಗ ಒದಗಿಸುವಂತೆ ನ್ಯಾಯಾಲಯಕ್ಕೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದ ಕಾವೇರಿ ಸೇನೆಯ ರವಿಚಂಗಪ್ಪ ನೀಡಿರುವ ಮಾಹಿತಿಯಾ ನುಸಾರ ನ್ಯಾಯಾಲಯ ತೀರ್ಪು ನೀಡಿರುವದಾಗಿದೆ ಎಂದು ಪೊನ್ನಣ್ಣ ತಿಳಿಸಿದರು.
ಬಡವರಿಗೆ ತೊಂದರೆ
ನ್ಯಾಯಾಲಯದ ತೀರ್ಪಿನಂತೆ ೩೦ ಸಾವಿರ ಎಕರೆಯಷ್ಟು ಜಾಗವನ್ನು ಅರಣ್ಯ ಇಲಾಖೆಗೆ ಹಸ್ತಾಂತರಿಸಿದರೆ ಸಾವಿರಾರು ಮಂದಿ ಬಡವರ ಜೀವನಕ್ಕೆ ತೊಂದರೆಯಾಗಲಿದೆ. ಬಹಳಷ್ಟು ಮಂದಿ ಅಲ್ಪ ಸ್ವಲ್ಪ ಪೈಸಾರಿ ಜಾಗದಲ್ಲಿ ವಾಸ, ಕೃಷಿ ಮಾಡಿ ಕೊಂಡಿದ್ದು, ಅಕ್ರಮ ಸಕ್ರಮದಡಿ ಜಾಗ ಮಂಜೂರಾತಿಗಾಗಿ ಕಾಯುತಲಿರು ವವರಿದ್ದಾರೆ. ಸರ್ವೆ ಸಂದರ್ಭದಲ್ಲಿ ಅಂತಹವರ ಜಾಗವೂ ಸೇರುತ್ತದೆ. ಹಲವಾರು ದಶಕಗಳಿಂದ ಇರುವವರಿಗೆ ತೊಂದರೆಯಾಗಲಿದೆ. ಅಲ್ಲದೆ, ಬಫರ್‌ಝೋನ್ ಬಂದರೆ ಕೃಷಿ, ವ್ಯವಸಾಯ ಮಾಡಲು ಒಂದಿAಚು ಜಾಗ ಕೂಡ ಸಿಗುವದಿಲ್ಲ. ಇವರು ಯಾರೂ ನ್ಯಾಯಾಲಯದ ಪ್ರಕರಣಕ್ಕೆ ಭಾಗಿಯಲ್ಲದವರಾದರೂ ಇವರಿಗೆ ಅನ್ಯಾಯವಾಗಲಿದೆ. ಇವರುಗಳನ್ನು ರಕ್ಷಣೆ ಮಾಡುವ ಜವಾಬ್ದಾರಿ ಸರಕಾರ ಹಾಗೂ ಜನಪ್ರತಿನಿಧಿ ಗಳಿಗಿದೆ ಎಂದು ಹೇಳಿದರು.
ಮರು ಪರಿಶೀಲನೆ ಮಾಡಬೇಕು
೧೯೭೧ರಲ್ಲಿ ಕಂದಾಯ ಇಲಾಖೆಯ ಜಾಗವನ್ನು ಅರಣ್ಯ ಇಲಾಖೆಗೆ ನೀಡಲಾಗಿದ್ದನ್ನು ಅರಣ್ಯ ಇಲಾಖೆ ಬಳಕೆ ಮಾಡಿಕೊಳ್ಳದ ಕಾರಣ ೯೪ರಲ್ಲಿ ಮರಳಿ ಕಂದಾಯ ಇಲಾಖೆಗೆ ಪಡೆದುಕೊಳ್ಳಲಾಗಿದೆ. ಈ ಬಗ್ಗೆಯೂ
(ಮೊದಲ ಪುಟದಿಂದ) ನ್ಯಾಯಾಲಯಕ್ಕೆ ಮಾಹಿತಿ ನೀಡಿಲ್ಲ. ಈ ಹಿನ್ನೆಲೆಯಲ್ಲಿ ತೀರ್ಪಿನ ಬಗ್ಗೆ ಮರು ಪರಿಶೀಲನೆ ಮಾಡುವಂತೆ ಸೂಕ್ತ ದಾಖಲೆಗಳೊಂದಿಗೆ ಜಿಲ್ಲಾಧಿಕಾರಿಗಳು, ಸರಕಾರ, ಪ್ರತಿವಾದಿಗಳು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಬೇಕು. ಸರಕಾರದ ಜವಾಬ್ದಾರಿ ನೆರವೇರಿಸಬೇಕೆಂದು ಆಗ್ರಹಿಸಿದ ಪೊನ್ನಣ್ಣ ಅವರು, ಈ ಸಂಬAಧ ಇಂದು ಜಿಲ್ಲಾಧಿಕಾರಿಗಳನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ್ದು, ಜಿಲ್ಲಾಧಿಕಾರಿಗಳು ಸಕಾರಾತ್ಮಕವಾಗಿ ಸ್ಪಂದಿಸಿರುವದಾಗಿ ಹೇಳಿದರು.
ಒತ್ತುವರಿದಾರರು ಕಳ್ಳರಲ್ಲ
ಜಿಲ್ಲೆಯಲ್ಲಿ ೨೦ರಿಂದ ೪೦ ವರ್ಷಗಳಿಂದ ಅಲ್ಪ ಸ್ವಲ್ಪ ಪೈಸಾರಿ ಜಾಗ ಒತ್ತುವರಿ ಮಾಡಿಕೊಂಡು ಹಲವಾರು ಮಂದಿ ಕೃಷಿ ಮಾಡಿಕೊಂಡು ಜೀವನ ಸಾಗಿಸುತ್ತಿದ್ದಾರೆ. ಇವರುಗಳು ಅಕ್ರಮ ಸಕ್ರಮದಡಿ ಸಲ್ಲಿಸಿರುವ ಅರ್ಜಿಗಳನ್ನು ಪರಿಶೀಲಿಸಿ ಪರಿಗಣಿಸದೆ ಬೆಂಗಳೂರಿನ ಭೂಕಬಳಿಕೆ ನ್ಯಾಯಾಲಯಕ್ಕೆ ತಹಶೀಲ್ದಾರರು ಕಳುಹಿಸಿಕೊಡುತ್ತಿದ್ದಾರೆ. ನ್ಯಾಯಾಲಯವು ಜನರಿಗೆ ಸಮನ್ಸ್ ನೀಡುತ್ತಿದೆ, ಇದರಿಂದ ಸಾಮಾನ್ಯ ಜನರಿಗೆ ಭಾರೀ ತೊಂದರೆಯಾಗುತ್ತಿದೆ. ವಾಸ್ತವವಾಗಿ ಅಧಿಕಾರಿಗಳು ಭೂಕಬಳಿಕೆ ಕಾಯ್ದೆ ಬಗ್ಗೆ ತಿಳಿದುಕೊಳ್ಳಬೇಕಿದೆ, ಕಾಯ್ದೆ ಇರುವದು ಭೂ ಕಬಳಿಕೆ ಮಾಡಿ ನಿವೇಶನÀ, ಕಟ್ಟಡ ಇತ್ಯಾದಿ ನಿರ್ಮಿಸಿ ಹಣ ಮಾಡುವವರ ವಿರುದ್ಧ ಕ್ರಮ ಕೈಗೊಳ್ಳುವ ಸಲುವಾಗಿಯೇ ಹೊರತು ಕೃಷಿ ಮಾಡುವವರ ಮೇಲೆ ಅಲ್ಲವೆಂದು ಪೊನ್ನಣ್ಣ ಹೇಳಿದರು.
ದಶಕಗಳಿಂದ ಹಕ್ಕು ಪತ್ರಕ್ಕಾಗಿ ಕಾಯುತ್ತಿರುವ ಅರ್ಹರಿಗೆ ಅವಕಾಶ ನೀಡಬೇಕೆಂದ ಅವರು, ವೀರಾಜಪೇಟೆಯಲ್ಲಿ ಇಂತಹ ಸಾಕಷ್ಟು ಪ್ರಕರಣÀಗಳಿವೆ. ಜಿಲ್ಲೆಯಲ್ಲಿ ಅಕ್ರಮ ಸಕ್ರಮ ಯೋಜನೆ ಸಂಪೂರ್ಣ ವಿಫಲವಾಗಿದೆ ಎಂದ ಅವರು, ಅಕ್ರಮ ಸಕ್ರಮದಲ್ಲಿ ಅರ್ಜಿ ಸಲ್ಲಿಸಿರುವವರು ಭೂಕಳ್ಳರಲ್ಲ, ಈ ಸಂಬAಧ ಜಾರಿಗೆ ತಂದಿರುವ ಎ.ಟಿ. ರಾಮಸ್ವಾಮಿ ವರದಿ ಜಾರಿಗೆ ತರಲು ಸರಕಾರಕ್ಕೆ ತಾಕತ್ತಿಲ್ಲವೆಂದು ಹೇಳಿದರು.
ಬಾಣೆ ಜಮೀನು ಗೊಂದಲ
ಜಮ್ಮಾ ಬಾಣೆ ಜಮೀನು ದಾಖಲೆ ಬದಲಾವಣೆಗೆ ಸಂಬAಧಿಸಿದAತೆ ಈ ಹಿಂದಿನAತೆ ಇದ್ದ ಕೌಟುಂಬಿಕ ಮಾತುಕತೆಯ ಕರಾರಿನ ಬದಲಿಗೆ ಇದೀಗ ಹಿಂದಿನ ಜಿಲ್ಲಾಧಿಕಾರಿಗಳು ನೋಂದಾಯಿತ ದಾಖಲೆ ಒದಗಿಸುವಂತೆ ಮೌಖಿಕ ಆದೇಶ ನೀಡಿದ್ದು, ಇದರಿಂದ ಸಮಸ್ಯೆಯಾಗುತ್ತಿರುವದಾಗಿ ಪೊನ್ನಣ್ಣ ಹೇಳಿದರು. ಕುಟುಂಬದ ಪಟ್ಟೆದಾರರ ಸಮ್ಮುಖದಲ್ಲಿನ ಮಾತುಕತೆಯ ಕರಾರು ಸಿಂಧುವಾಗಲಿದೆ. ಆದರೆ ಇದೀಗ ನೋಂದಾಯಿತ ದಾಖಲೆ ಕೇಳುತ್ತಿರುವದು ಕಾನೂನು ಬಾಹಿರವಾಗಿದೆ. ಅನೇಕ ವರ್ಷಳಿಂದ ಇದ್ದ ನಿಯಮವನ್ನು ಜಿಲ್ಲಾಧಿಕಾರಿಗಳು ಬದಲಾಯಿಸಿದ್ದು, ತೊಂದರೆ ಯಾಗುತ್ತಿದೆ. ಆಸ್ತಿಯಲ್ಲಿನ ವಿವರಗಳು ಗ್ರಾಮ ಲೆಕ್ಕಿಗರು, ಕಂದಾಯಾಧಿಕಾರಿ ಗಳಲ್ಲಿ ಇರುತ್ತದೆ, ನೋಂದಾಯಿತ ದಾಖಲೆ ಕೇಳುವ ಅವಶ್ಯಕತೆಯಿಲ್ಲ, ಈಗ ವ್ಯವಸ್ಥೆ ಬದಲಿಸುವದು ಸರಿಯಲ್ಲ, ಈ ಬಗ್ಗೆಯೂ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿರುವದಾಗಿ ಪೊನ್ನಣ್ಣ ಹೇಳಿದರು.
ಗೋಷ್ಠಿಯಲ್ಲಿ ಜಿಲ್ಲಾ ಕಾಂಗ್ರೆಸ್ ಕಾರ್ಯಾಧ್ಯಕ್ಷ ತೀತಿರ ಧರ್ಮಜ ಉತ್ತಪ್ಪ, ಜಿಲ್ಲಾ ಕಾನೂನು ಘಟಕದ ಅಧ್ಯಕ್ಷ ಶ್ರೀಧರನ್ ನಾಯರ್, ಕಿಸಾನ್ ಘಟಕದ ಅಧ್ಯಕ್ಷ ನೆರವಂಡ ಉಮೇಶ್, ಪೊನ್ನಂಪೇಟೆ ಬ್ಲಾಕ್ ಅಧ್ಯಕ್ಷ ಮೀದೇರಿರ ನವೀನ್, ಜಿ.ಪಂ. ಮಾಜಿ ಸದಸ್ಯ ಬಾನಂಡ ಪ್ರಥ್ಯು ಇದ್ದರು.