ಮಡಿಕೇರಿ, ಅ. ೨೧: ಮಹದೇವಪೇಟೆ ಮಹಿಳಾ ಸಹಕಾರ ಸಂಘದ ೨೦೨೦-೨೧ನೇ ಸಾಲಿನ ವಾರ್ಷಿಕ ಮಹಾಸಭೆ ಸಂಘದ ಅಧ್ಯಕ್ಷೆ ಯನ್. ಸವಿತಾ ಭಟ್ ಅಧ್ಯಕ್ಷತೆಯಲ್ಲಿ ತಾ. ೧೯ ರಂದು ನಡೆಯಿತು. ಪಿ.ಯು.ಸಿ.ಯಲ್ಲಿ ಹೆಚ್ಚಿನ ಅಂಕಗಳನ್ನು ಪಡೆದ ಸದಸ್ಯರ ಮಕ್ಕಳಿಗೆ ಸನ್ಮಾನ ಮಾಡಲಾಯಿತು. ನಗರಸಭಾ ಸದಸ್ಯರಾಗಿ ಆಯ್ಕೆಯಾದ ಸಂಘದ ಸದಸ್ಯೆಯರಾದ ಸವಿತಾ ರಾಕೇಶ್ ಮತ್ತು ಉಷಾ ಕುಮಾರಿ ಅವರನ್ನು ಸನ್ಮಾನಿಸಲಾಯಿತು. ೭೦ ವರ್ಷಕ್ಕಿಂತ ಮೇಲ್ಪಟ್ಟ ಹಿರಿಯ ಸದಸ್ಯೆಯರನ್ನು ಗೌರವಿಸಲಾಯಿತು.
ಸಭೆಯಲ್ಲಿ ಆಡಳಿತ ಮಂಡಳಿಯ ಪದಾಧಿಕಾರಿಗಳಾದ ಶೈಲಾ ಮಂಜುನಾಥ್, ವಸುಂಧರಾ ಪ್ರಸನ್ನ, ಕಮಲಾ ಸುಬ್ಬಯ್ಯ, ಉಮಾ ಈಶ್ವರ್, ಕವಿತಾ ಬೊಳ್ಳಪ್ಪ, ಆಯಿಷಾ ಹಮೀದ್, ರೂಪಾ ಸುಮಂತ್, ಸಂಧ್ಯಾ ಅಶೋಕ್, ಸುಶೀಲಾ ವಾಸುದೇವ್, ಶುಭಾ ವಿಶ್ವನಾಥ್ ಹಾಜರಿದ್ದರು. ಸಂಧ್ಯಾ ಅಶೋಕ್ ಪ್ರಾರ್ಥಿಸಿ, ಸಂಘದ ಅಧ್ಯಕ್ಷೆ ಸವಿತಾ ಭಟ್ ಸ್ವಾಗತಿಸಿದರು. ಸಂಘದ ಉಪಾಧ್ಯಕ್ಷೆ ಶೈಲಾ ಮಂಜುನಾಥ್ ವಂದಿಸಿದರು.