ಮಡಿಕೇರಿ, ಅ. ೨೧: ಕೊಡಗು ಲಯನ್ಸ್ ಕ್ಲಬ್, ಅಮ್ಮತ್ತಿಯ ಆರ್.ಐ.ಹೆಚ್.ಪಿ. ಆಸ್ಪತ್ರೆ ಸಂಯುಕ್ತ ಆಶ್ರಯದಲ್ಲಿ ತಾ. ೨೪ ರಂದು ಉಚಿತ ನೇತ್ರ ತಪಾಸಣೆ ಮತ್ತು ಶಸ್ತçಚಿಕಿತ್ಸಾ ಶಿಬಿರ, ಕಿವಿ, ಮೂಗು, ಗಂಟಲು ತಪಾಸಣಾ ಶಿಬಿರ ಏರ್ಪಡಿಸಲಾಗಿದೆ.
ಪತ್ರಿಕಾಭವನದಲ್ಲಿ ಕರೆಯ ಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಲಯನ್ಸ್ ಪ್ರಾಂತೀಯ ಅಧ್ಯಕ್ಷ ಧನು ಉತ್ತಯ್ಯ, ಆರ್‌ಐಹೆಚ್‌ಪಿ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಡಾ. ಚಂದ್ರು, ನೇತ್ರತಜ್ಞ ಡಾ. ಚಿನ್ನಪ್ಪ ಈ ಬಗ್ಗೆ ಮಾಹಿತಿಯಿತ್ತರು. ಶಿಬಿರದಲ್ಲಿ ನೇತ್ರ ತಜ್ಞ ಡಾ. ಸುಧಾಕರ್, ಇಎನ್‌ಟಿ ತಜ್ಞ ಡಾ. ಮೋಹನ್ ಅಪ್ಪಾಜಿ ಪಾಲ್ಗೊಳ್ಳಲಿದ್ದಾರೆ.
ಪ್ರಥಮ ಹಂತದಲ್ಲಿ ದೃಷ್ಟಿ ಸಮಸ್ಯೆ ಇರುವವರಿಗೆ ಮತ್ತು ಕಣ್ಣಿಂದ ನೀರು ಬರುವ ತೊಂದರೆಯುಳ್ಳವರಿಗೆ ತಪಾಸಣಾ ಶಿಬಿರಗಳು ಸಂಬAಧಪಟ್ಟ ನುರಿತ ವೈದ್ಯರಿಂದ ಜಿಲ್ಲೆಯ ಬೇರೆ ಬೇರೆ ಭಾಗಗಳಲ್ಲಿ ನಡೆಯಲಿದೆ. ಇದರೊಂದಿಗೆ ಉಚಿತ ಮಧುಮೇಹ ಮತ್ತು ರಕ್ತದೊತ್ತಡ ತಪಾಸಣೆಯೂ ಆರ್.ಐ.ಹೆಚ್.ಪಿ. ಆಸ್ಪತ್ರೆಯ ವತಿಯಿಂದ ನಡೆಯಲಿದೆ. ಪ್ರಥಮ ತಪಾಸಣಾ ಶಿಬಿರ ತಾ. ೨೪ ರಂದು ಪಾಲಿಬೆಟ್ಟದ ಲಯನ್ಸ್ ಸೇವಾಭವನ (ಅನುಗ್ರಹ)ದಲ್ಲಿ ಬೆಳಿಗ್ಗೆ ೧೦ ರಿಂದ ಮಧ್ಯಾಹ್ನ ೧ ಗಂಟೆಯವರೆಗೆ ನಡೆಯಲಿದೆ.
ಹಾಗೆಯೇ, ಜಿಲ್ಲೆಯ ಬೇರೆ ಬೇರೆ ಭಾಗಗಳಲ್ಲಿ ಕಣ್ಣಿನ ಪೊರೆ ಸಮಸ್ಯೆ ಇರುವವರನ್ನು ತಪಾಸಣೆ ನಡೆಸಿ, ಶಸ್ತçಚಿಕಿತ್ಸೆ ಅವಶ್ಯಕತೆ ಇರುವ ದಕ್ಷಿಣ ಕೊಡಗಿನ ಜನರಿಗೆ ಆರ್‌ಐಎಚ್‌ಪಿ ಆಸ್ಪತ್ರೆ, ಅಮ್ಮತ್ತಿಯಲ್ಲಿ ಹಾಗೂ ಉತ್ತರ ಕೊಡಗಿನ ಜನರಿಗೆ ಮಡಿಕೇರಿಯ ಇಕ್ಷಾ ಆಸ್ಪತ್ರೆಯಲ್ಲಿ ಡಿಸೆಂಬರ್ ೧೫ ರೊಳಗೆ ಶಸ್ತç ಚಿಕಿತ್ಸೆ ನಡೆಸಲಾಗುವುದು.
ಶಿಬಿರಕ್ಕೆ ಬರುವ ಪ್ರತಿಯೊಬ್ಬರೂ ಕೋವಿಡ್ ಲಸಿಕೆ ೨ ಡೋಸ್‌ಗಳನ್ನು ಪಡೆದಿರಬೇಕು. ತಮ್ಮ ಆಧಾರ್, ಮೊಬೈಲ್ ಸಂಖ್ಯೆ ಮತ್ತು ಹಳೆಯ ವೈದ್ಯಕೀಯ ದಾಖಲಾತಿಗಳನ್ನು ತಪ್ಪದೇ ತರಬೇಕು. ಹೆಚ್ಚಿನ ಮಾಹಿತಿಗಾಗಿ ೯೪೮೦೦೮೪೭೪೦, ೮೧೯೭೫೦೨೯೪೨ ದೂರವಾಣಿಯನ್ನು ಸಂಪರ್ಕಿಸಬಹುದೆAದು ಅವರುಗಳು ತಿಳಿಸಿದರು.
ಗೋಷ್ಠಿಯಲ್ಲಿ ಲಯನ್ಸ್ ಕಾರ್ಯದರ್ಶಿ ಸೋಮಣ್ಣ, ಮಾಜಿ ಅಧ್ಯಕ್ಷ ಸ್ವರೂಪ್ ಅಯ್ಯಪ್ಪ, ಆರ್‌ಐಹೆಚ್‌ಪಿ ಆಸ್ಪತ್ರೆಯ ಆಡಳಿತಾಧಿಕಾರಿ ಕುಶಾಲಪ್ಪ ಉಪಸ್ಥಿತರಿದ್ದರು.