ಶನಿವಾರಸಂತೆ: ಸಮೀಪದ ಕೊಡ್ಲಿಪೇಟೆಯಲ್ಲಿ ಈದ್ ಮಿಲಾದ್ ಹಬ್ಬದ ಪ್ರಯುಕ್ತ ಹನಫಿ ಜಾಮೀಯ ಮಸ್ಜಿದ್ ಮುಂಭಾಗ ಮುಸ್ಲಿಂ ಸಮುದಾಯದ ಯುವಕರು ಸಾರ್ವಜನಿಕರಿಗೆ ಹಾಗೂ ಬಸ್, ಇತರ ವಾಹನಗಳ ಪ್ರಯಾಣಿಕರಿಗೆ ಬೆಳಿಗ್ಗೆಯಿಂದ ಸಂಜೆಯವರೆಗೆ ತಂಪು ಪಾನೀಯ ಹಾಗೂ ಸಿಹಿ ವಿತರಿಸಿ ಪ್ರವಾದಿ ಮಹಮ್ಮದ್ ಅವರ ಜನ್ಮದಿನವನ್ನು ಆಚರಿಸಿ ಪ್ರವಾದಿ ಮಹಮ್ಮದ್ ಅವರ ಪ್ರೀತಿ ಸಂದೇಶ ಸಾರಿದರು.

ಪ್ರತಿವರ್ಷ ಜಾಮೀಯಾ ಮಸ್ಜಿದ್‌ನಲ್ಲಿ ವೇದಿಕೆ ಕಾರ್ಯಕ್ರಮ ಹಾಗೂ ಮೀಲಾದ್ ಸಂದೇಶ ಜಾಥಾದೊಂದಿಗೆ ವಿಜೃಂಭಣೆಯೊAದಿಗೆ ಆಚರಿಸಲ್ಪಡುತ್ತಿತ್ತು. ಆದರೆ ಕೋವಿಡ್-೧೯ ಹಿನ್ನೆಲೆ ಸರಕಾರದ ಮಾರ್ಗಸೂಚಿ ಪಾಲಿಸಿ ಸರಳವಾಗಿ ಆಚರಿಸಲು ತೀರ್ಮಾನಿಸಿರುವುದಾಗಿ ಮಸ್ಜಿದ್ ಆಡಳಿತ ಮಂಡಳಿ ತಿಳಿಸಿತು.ನಾಪೋಕ್ಲು: ಚೆರಿಯಪರಂಬು ಮುಹಿಯದ್ದೀನ್ ಜುಮಾ ಮಸೀದಿಯಲ್ಲಿ ಈದ್-ಮಿಲಾದ್ ಆಚರಿಸಲಾಯಿತು. ಬೆಳಿಗ್ಗೆ ಮಖಾಂ ಝಿಯಾರತ್ ಸಾಮೂಹಿಕ ಪ್ರಾರ್ಥನೆಯೊಂದಿಗೆ ಆಚರಣೆ ಆರಂಭಗೊAಡಿತು. ಉದ್ಘಾಟನಾ ಭಾಷಣವನ್ನು ಚೆರಿಯಪರಂಬು ಜಮಾಅತ್ ಖತೀಬ ಅಶ್ರಫ್ ಸಖಾಫಿ ಉಸ್ತಾದ್ ನೆರವೇರಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮುಹಿಯದ್ದೀನ್ ಜುಮಾ ಮಸೀದಿ ಆಡಳಿತ ಮಂಡಳಿ ಅಧ್ಯಕ್ಷ ಜನಾಬ್ ಅಬ್ದುಲ್ ರೆಹಮಾನ್ ಹಾಜಿ ವಹಿಸಿದ್ದರು.

ವೇದಿಕೆಯಲ್ಲಿ ಜಮಾಅತ್ ಆಡಳಿತ ಮಂಡಳಿ ಪ್ರಧಾನ ಕಾರ್ಯದರ್ಶಿ ಪರವಂಡ ಸಿರಾಜ್, ಕೋಶಾಧಿಕಾರಿ ಬಶೀರ್, ಉಪಾಧ್ಯಕ್ಷ ಇಬ್ರಾಹಿಂ, ಸಮಿತಿ ಸದಸ್ಯರಾದ ಮೊಯಿದು ಕುಂಞÂ, ಹನೀಫ್ ಬಿ.ಎ., ಆಸಿಮ್, ಕಾದರ್ ಮುಸ್ಲಿಯಾರ್, ಹ್ಯಾರಿಸ್, ಹನೀಫ್ ಪಿ.ಎಂ., ಹಸೈನಾರ್ ಹಾಜಿ, ಹಂಝ, ಮತ್ತಿತರರು ಇದ್ದರು.

ಧರ್ಮ ಗುರುಗಳಾದ ಹಮೀದ್ ಹಂಜದಿ ಉಸ್ತಾದ್ ಸ್ವಾಗತಿಸಿ, ವಂದಿಸಿದರು.