ಸುಂಟಿಕೊಪ್ಪ, ಅ. ೨೨: ಕಲ್ಲು ತುಂಬಿದ ಟಿಪ್ಪರ್ ಮತ್ತು ಕಾರು ನಡುವೆ ಶುಕ್ರವಾರ ಸಂಜೆ ಮುಖಾಮುಖಿ ಡಿಕ್ಕಿಯಾಗಿದ್ದು ಟಿಪ್ಪರ್ ಲಾರಿಯು ರಸ್ತೆಯಲ್ಲಿಯೇ ಮಗುಚಿಕೊಂಡಿದೆ ಅದೃಷ್ಟವಶಾತ್ ಪ್ರಯಾಣಿಕರು ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾರೆ.

ಕೆದಕಲ್ ರಾಷ್ಟಿçÃಯ ಹೆದ್ದಾರಿ ೨೭೫ ರಲ್ಲಿ ಘಟನೆ ಸುಂಟಿಕೊಪ್ಪದಿAದ ಮಡಿಕೇರಿ ಕಡೆಗೆ ತೆರಳುತ್ತಿದ್ದ ಟಿಪ್ಪರ್ ಲಾರಿ ತಲಕಾವೇರಿಯಿಂದ ಕುಶಾಲನಗರ ಕಡೆಗೆ ಆಗಮಿಸುತ್ತಿದ್ದ ಕಾರಿನ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದೆ. ಡಿಕ್ಕಿಯ ರಭಸಕ್ಕೆ ಟಿಪ್ಪರ್ ಲಾರಿಯು ರಸ್ತೆಯ ಮಧ್ಯಭಾಗದಲ್ಲಿಯೇ ಮಗುಚಿಕೊಂಡಿದ್ದರಿAದ ಲಾರಿಯಲ್ಲಿ ತುಂಬಿದ ಕಲ್ಲುಗಳು ರಸ್ತೆಯಲ್ಲಿ ಬಿದ್ದಿದ್ದು ಹೆದ್ದಾರಿಯಲ್ಲಿ ವಾಹನಗಳ ಸಂಚಾರಕ್ಕೆ ಅಡಚಣೆ ಉಂಟಾಗಿತ್ತು. ಕಾರು ಲಾರಿ ಚಾಲಕರಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದು, ಸಹ ಪ್ರಯಾಣಿಕರಿಗೆ ಅದೃಷ್ಟವಶಾತ್ ಯಾವುದೇ ರೀತಿಯ ಗಂಭೀರ ಗಾಯಗಳಾಗಿಲ್ಲ. ಗಾಯಾಳುಗಳನ್ನು ಮಡಿಕೇರಿ ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ.