ಗೋಣಿಕೊಪ್ಪ ವರದಿ, ಅ. ೨೨ : ಹಾಕಿ ಇಂಡಿಯಾ ವತಿಯಿಂದ ಜಾರ್ಖಂಡ್‌ನ ಸಿಮುದಹು ಮೈದಾನದಲ್ಲಿ ನಡೆಯುತ್ತಿರುವ ರಾಷ್ಟçಮಟ್ಟದ ಬಾಲಕಿಯರ ಹಾಕಿಟೂರ್ನಿಯಲ್ಲಿ ಹಾಕಿ ಕರ್ನಾಟಕ ತಂಡ ತನ್ನ ಎರಡನೇ ಪಂದ್ಯದಲ್ಲಿ ಸೋಲನುಭವಿಸಿದ್ದು, ಕ್ರೀಡಾಭಿಮಾನಿಗಳಿಗೆ ನಿರಾಸೆ ಮೂಡಿಸಿದೆ.

ಶುಕ್ರವಾರ ನಡೆದ ಪಂದ್ಯದಲ್ಲಿ ಪಂಜಾಬ್ ವಿರುದ್ಧ ೧-೨ ಗೋಲುಗಳಿಂದ ಹಾಕಿ ಕರ್ನಾಟಕ ವಿರೋಚಿತ ಸೋಲು ಅನುಭವಿಸಿತು. ಜಾಹ್ನವಿ ಒಂದು ಗೋಲು ಹೊಡೆದು ಪಂದ್ಯಕ್ಕೆ ರೋಚಕತೆ ತಂದರು. ಆದರೂ ಪಂದ್ಯ ಗೆಲ್ಲುವಲ್ಲಿ ಎಡವಿತು.

ಬುಧವಾರ ನಡೆದ ಮೊದಲ ಪಂದ್ಯದಲ್ಲಿ ಬಂಗಾಳ ವಿರುದ್ಧ ೧೬-೦ ಗೋಲುಗಳಿಂದ ಭರ್ಜರಿ ಗೆಲುವಿನ ಆರಂಭ ಪಡೆದಿತ್ತು. ತಾ. ೨೪ ರಂದು ಪಾಂಡಿಚೇರಿ ತಂಡವನ್ನು ಎದುರಿಸಲಿದೆ.