ಮಡಿಕೇರಿ, ಅ. ೨೨: ಮಡಿಕೇರಿ ತಾಲೂಕು ಪ್ರಾಥಮಿಕ ಸಹಕಾರ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ ವತಿಯಿಂದ ರೈತರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಕೃಷಿ ಉತ್ಪನ್ನಗಳು ಹಾಗೂ ಸಲಕರಣೆಗಳ ಕೇಂದ್ರ ಸ್ಥಾಪನೆ ಮಾಡಲು ತೀರ್ಮಾನ ಕೈಗೊಳ್ಳಲಾಗಿದೆ.
ಬ್ಯಾಂಕ್‌ನ ನವೀಕೃತ ಕಟ್ಟಡದ ಉದ್ಘಾಟನೆ ಬಳಿಕ ಸಹಕಾರ ಯೂನಿಯನ್ ಕಚೇರಿಯಲ್ಲಿ ನಡೆದ ಬ್ಯಾಂಕ್‌ನ ವಾರ್ಷಿಕ ಮಹಾಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ. ಸಭೆಯ ಅಧ್ಯಕ್ಷತೆ ವಹಿಸಿದ್ದ ಬ್ಯಾಂಕ್ ಅಧ್ಯಕ್ಷ ಅಪ್ಪಚೆಟ್ಟೋಳಂಡ ಮನು ಮುತ್ತಪ್ಪ ಅವರು, ಈ ವಿಚಾರವನ್ನು ಪ್ರಸ್ತಾಪಿಸಿದರು. ಪ್ರಸ್ತುತ ಬ್ಯಾಂಕ್‌ನ ಕಟ್ಟಡದ ನೆಲ ಅಂತಸ್ತಿನಲ್ಲಿರುವ ವಿಶಾಲವಾದ ಮಳಿಗೆಯಲ್ಲಿರುವ ಖಾಸಗಿ ಸಂಸ್ಥೆಯು ಸ್ಥಳಾಂತರ ಗೊಳ್ಳಲಿದ್ದು, ಅದೇ ಮಳಿಗೆಯಲ್ಲಿ ಬ್ಯಾಂಕ್ ವತಿಯಿಂದ ರೈತರಿಗೆ ಬೇಕಾಗುವ ರಸಗೊಬ್ಬರ, ಕೃಷಿ ಸಲಕರಣೆಗಳ ಮಾರಾಟದ ಮಳಿಗೆ ತೆರೆಯಲು ನಿರ್ಧರಿಸಲಾಗಿದೆ. ಈ ಸಂಬAಧ ಕೃಷಿ ಹಾಗೂ ತೋಟಗಾರಿಕೆ ಇಲಾಖೆಯನ್ನು ಸಂಪರ್ಕಿಸಿ ರೈತರಿಗೆ ಸಹಾಯಧನ ಒದಗಿಸುವ ಬಗ್ಗೆ ಮಾತುಕತೆ ನಡೆಸಲಾಗುವದು. ಬ್ಯಾಂಕ್‌ನ ವತಿಯಿಂದ ಮಳಿಗೆ ಆರಂಭಿಸಿದಲ್ಲಿ ರೈತರಿಗೆ ಸಾಲದ ರೂಪದಲ್ಲಿಯೂ ಗೊಬ್ಬರ ನೀಡಬಹುದಾಗಿದೆ. ಇದಕ್ಕೆ ಮಹಾಸಭೆಯ ಒಪ್ಪಿಗೆ ಬೇಕಾಗಿದೆ ಎಂದು ಹೇಳಿದರು. ಈ ಪ್ರಸ್ತಾವನೆಗೆ ಸಭೆಯಲ್ಲಿ ಹಾಜರಿದ್ದ ಸರ್ವ ಸದಸ್ಯರು ಒಪ್ಪಿಗೆ ನೀಡಿದ ಬಳಿಕ ಕೇಂದ್ರ ತೆರೆಯಲು ತೀರ್ಮಾನಿಸಲಾಯಿತು.
ಸರಕಾರದ ನಿಯಮಗಳಿಂದ ತೊಂದರೆ
ಮೂರು ಸಾವಿರ ರೂಪಾಯಿ ಪಾಲು ಬಂಡವಾಳದಿAದ ಆರಂಭಗೊAಡ ಬ್ಯಾಂಕ್ ಪ್ರಸ್ತುತ ರೂ. ೧೦೫.೩೯ ಲಕ್ಷ ಪಾಲು ಬಂಡವಾಳ ಹೊಂದಿದೆ. ಕಳೆದ ೧೬ ವರ್ಷಗಳಿಂದ ನಿರಂತರ ಲಾಭದಿಂದ ಮುನ್ನಡೆಯುತ್ತಿದೆ, ಕಳೆದ ಎರಡು ವರ್ಷಗಳಿಂದ ರಾಜ್ಯ ಮಟ್ಟದಲ್ಲಿ ಪ್ರಥಮ ಸ್ಥಾನಗಳಿಸುತ್ತಾ ಬಂದಿದೆ. ಈ ಬಾರಿ ಕೊರೊನಾ ಹಿನ್ನೆಲೆಯಲ್ಲಿ ಪ್ರಶಸ್ತಿ ಘೋಷಣೆ ಮಾಡಿಲ್ಲವೆಂದು ಹೇಳಿದರು. ಬ್ಯಾಂಕ್ ರೂ. ೬೨.೨೪ ಲಕ್ಷದಷ್ಟು ಲಾಭದಲ್ಲಿದ್ದು, ಸರಕಾರದ ನಿಯಮಗಳಾದ ಜಿಎಸ್‌ಟಿ, ಆದಾಯ ತೆರಿಗೆ ಮುಂತಾದುವುಗಳಿAದ ತೊಂದರೆಯಾಗುತ್ತಿದೆ. ಲಾಭಾಂಶದ ಬಹುತೇಕ ಪಾಲು ಸರಕಾರಕ್ಕೆ ಹೋಗುತ್ತದೆ, ಆದರೂ ಸರಕಾರದ ನಿಯಮಗಳನ್ನು ಪಾಲಿಸಲೇಬೇಕಿದೆ ಎಂದು ಹೇಳಿದರು.
ಪ್ರಾಮಾಣಿಕರಿಗೆ ಬಡ್ಡಿ ರಿಯಾಯಿತಿ
ಪ್ರತಿ ವರ್ಷ ಬ್ಯಾಂಕ್‌ನ ಲಾಭಾಂಶದಲ್ಲಿ ಹತ್ತನೇ ಹಾಗೂ ಪಿಯುಸಿಯಲ್ಲಿ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳನ್ನು ಪ್ರೋತ್ಸಾಹ ಧನ ನೀಡಿ ಗೌರವಿಸಲಾಗುತ್ತಿತ್ತು. ಆದರೆ, ಈ ಬಾರಿ ಎಲ್ಲಾ ವಿದ್ಯಾರ್ಥಿಗಳು ಉತ್ತೀರ್ಣರಾಗಿರುವ
(ಮೊದಲ ಪುಟದಿಂದ) ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳ ಬದಲಿಗೆ ಸಕಾಲಕ್ಕೆ ಪ್ರಾಮಾಣಿಕವಾಗಿ ಸಾಲ ಮರು ಪಾವತಿ ಮಾಡುವ ಸದಸ್ಯರಿಗೆ ಬಡ್ಡಿ ರಿಯಾಯಿತಿ ನೀಡುವಂತೆ ತೀರ್ಮಾನಿಸಿರುವದಾಗಿ ತಿಳಿಸಿದರು.
ಬ್ಯಾಂಕ್ ಉದ್ಘಾಟನೆ
ಇದೇ ಸಂದರ್ಭ ಕೊಹಿನೂರು ರಸ್ತೆಯಲ್ಲಿರುವ ಬ್ಯಾಂಕ್‌ನ ನವೀಕೃತ ಕಟ್ಟಡವನ್ನು ಅಧ್ಯಕ್ಷ ಮನು ಮುತ್ತಪ್ಪ ಉದ್ಘಾಟಿಸಿದರು. ಬ್ಯಾಂಕ್‌ಗೆ ಸೇರಿದ ಒಟ್ಟು ಒಂಭತ್ತು ಮಳಿಗೆಗಳನ್ನು ಬಾಡಿಗೆಗೆ ನೀಡಲಾಗಿದೆ. ಬ್ಯಾಂಕಿನಲ್ಲಿ ಗ್ರಾಹಕರಿಗೆ ಭದ್ರತೆಯ ವ್ಯವಸ್ಥೆಯಿದೆ ಎಂದು ಇದೇ ಸಂದರ್ಭ ಅಧ್ಯಕ್ಷರು ಹೇಳಿದರು.
ಕಾರ್ಯಕ್ರಮದಲ್ಲಿ ಬ್ಯಾಂಕ್‌ನ ನಿರ್ದೇಶಕರುಗಳಾದ ಬಲ್ಲಚಂಡ ಕಾವೇರಪ್ಪ, ಕೊಂಗಿರAಡ ಗಣಪತಿ, ಕಾರೆರ ಗಣಪತಿ, ಬೆಪ್ಪುರನ ಮೇದಪ್ಪ, ಹೆಚ್.ಆರ್. ವಾಸಪ್ಪ, ಪಾಡಿಯಮ್ಮನ ಮನು ಮಹೇಶ್, ನಿಡ್ಯಮಲೆ ಭುವನೇಶ್ವರ, ಯಂ.ಸಿ. ಕರಿಯಪ್ಪ ನಾಯ್ಕ, ಅಮ್ಮಾಟಂಡ ಪೂಣಚ್ಚ, ಮಾತಂಡ ಪೊನ್ನಮ್ಮ, ಕೂರನ ಸುಶೀಲ, ಮಂಡೀರ ಹೇಮ, ಜಿಲ್ಲಾ ಕಾಸ್ಕರ‍್ಡ್ ಬ್ಯಾಂಕ್ ವ್ಯವಸ್ಥಾಪಕ ಎನ್. ಶ್ರೀಕಾಂತ್, ಪಿಎಲ್‌ಡಿ ಬ್ಯಾಂಕ್ ವ್ಯವಸ್ಥಾಪಕ ತೊತ್ತಿಯನ ಚಂದ್ರಶೇಖರ್, ಸದಸ್ಯರುಗಳು ಪಾಲ್ಗೊಂಡಿದ್ದರು. ಮಂಜುಳಾ ಪ್ರಾರ್ಥಿಸಿದರೆ, ಉಪಾಧ್ಯಕ್ಷ ಕುಂಡ್ಯೋಳAಡ ರಮೇಶ್ ಮುದ್ದಯ್ಯ ಸ್ವಾಗತಿಸಿದರು. ನಿರ್ದೇಶಕ ನಾಪಂಡ ರ‍್ಯಾಲಿ ಮಾದಯ್ಯ ವಂದಿಸಿದರು. ಮೃತಪಟ್ಟ ಸದಸ್ಯರುಗಳಿಗೆ ಸಂತಾಪ ಸೂಚಿಸಲಾಯಿತು.