*ಗೋಣಿಕೊಪ್ಪಲು, ಅ. ೨೨: ತಲಕಾವೇರಿ ತೀರ್ಥೋದ್ಭವದ ಬಳಿಕ ಮುಂದಿನ ಹತ್ತು ದಿನಗಳ ಕಾಲ ಇದಕ್ಕೆ ಕೊಡವ ಸಂಸ್ಕೃತಿಯಲ್ಲಿ ಹೆಚ್ಚಿನ ಮಹತ್ವವಿದ್ದು, ಇದನ್ನು ಚಂಗ್ರಾAದಿ ಪತ್ತಾಲೋದಿ ಎಂದು ಆಚರಿಸಲಾಗುತ್ತದೆ.
ಟಿ. ಶೆಟ್ಟಿಗೇರಿಯಲ್ಲಿರುವ ತಾವಳಗೇರಿ ಮೂಂದ್‌ನಾಡ್ ಕೊಡವ ಸಮಾಜದಲ್ಲಿ ೨೦೧೭ ರಿಂದ ಈ ಹತ್ತು ದಿನಗಳ ಕಾಲ ವಿವಿಧ ಕಾರ್ಯಕ್ರಮಗಳನ್ನು ಜಿಲ್ಲೆಯಲ್ಲಿಯೇ ಪ್ರಥಮ ಬಾರಿಗೆ ಆರಂಭಿಸಲಾಗಿದ್ದು, ಈ ವರ್ಷವೂ ವೈವಿಧ್ಯಮಯ ಕಾರ್ಯಕ್ರಮಗಳು ಜರುಗುತ್ತಿವೆ.
ಅಲ್ಲಿನ ಸಾರ್ವಜನಿಕ ಗೌರಿಗಣೇಶ ಸೇವಾ ಸಮಿತಿ, ಸಂಭ್ರಮ ಪೊಮ್ಮಕ್ಕಡ ಕೂಟ ಹಾಗೂ ಕೊಡವತಕ್ಕ್ ಎಳ್ತ್ಕಾರಡ ಕೂಟದ ಸಹಕಾರದಲ್ಲಿ ಜನೋತ್ಸವದ ರೀತಿಯಲ್ಲಿ ಚಂಗ್ರಾAದಿ ಪತ್ತಾಲೋದಿ ಎಂಬ ಕಾರ್ಯಕ್ರಮವನ್ನು ಆಚರಿಸಲಾಗುತ್ತಿದೆ.
ತಾ. ೧೮ ರಿಂದ ಕಾರ್ಯಕ್ರಮ ಆರಂಭಗೊAಡಿದ್ದು, ಅಂದು ತೀರ್ಥ ಪೂಜೆ ಹಾಗೂ ತೀರ್ಥ ವಿತರಣೆ ಬಳಿಕ ಸಂಜೆ ಪೊನ್ನಂಪೇಟೆ ಕೊಡವ ಸಮಾಜ ತಂಡದಿAದ ಜಾನಪದ ತಜ್ಞ ಕಾಳಿಮಾಡ ಮೋಟಯ್ಯ ನಿರ್ದೇಶನದಲ್ಲಿ ವಿವಿಧ ಸಾಂಸ್ಕೃತಿಕ ವೈಭವ ಜರುಗಿತು.
ತಾ. ೨೦ ರಂದು ಕೋಯಲ್ ಹಾಗೂ ಸಂಗಡಿಗರಿAದ ಸಾಂಸ್ಕೃತಿಕ ಪ್ರದರ್ಶನ, ತಾ. ೨೧ ರಂದು ಉಸಾರ್ ಕೊಡವ ಸಿನಿಮಾ, ತಾ. ೨೨ ರಂದು ಕೊಡವ ಭಾಷಾ ಕಿರುಚಿತ್ರಗಳ ಪ್ರದರ್ಶನ ನೆರವೇರಿತು. ತಾ. ೨೩ ರಂದು (ಇಂದು) ಶ್ರೀಮಂಗಲನಾಡ್ ಕೊಡವ ಸಮಾಜ ಪೊಮ್ಮಕ್ಕಡ ಕೂಟದಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ.
ಕಾರ್ಯಕ್ರಮದಲ್ಲಿ ಕೊಡವ ಸಮಾಜದ ಅಧ್ಯಕ್ಷ ಚೊಟ್ಟೆಯಂಡಮಾಡ ಬೋಸು ವಿಶ್ವನಾಥ್, ಕಾರ್ಯದರ್ಶಿ ಮನ್ನೆರ ರಮೇಶ್, ಸಾಂಸ್ಕೃತಿಕ ಸಮಿತಿ ಸಂಚಾಲಕ ಚೆಟ್ಟಂಗಡ ರವಿ ಸುಬ್ಬಯ್ಯ, ಕ್ರೀಡಾ - ಸಾಂಸ್ಕೃತಿಕ ಸಮಿತಿ ಅಧ್ಯಕ್ಷ ಕಟ್ಟೇರ ಈಶ್ವರ, ಸಂಭ್ರಮ ಪೊಮ್ಮಕ್ಕಡ ಕೂಟ, ಕೊಡವತಕ್ಕ್ ಎಳ್ತ್ಕಾರಡ ಕೂಟ, ಗೌರಿಗಣೇಶ ಸೇವಾ ಸಮಿತಿ ಪ್ರಮುಖರು, ಸ್ಥಳೀಯರು ಪಾಲ್ಗೊಂಡು ಯಶಸ್ಸುಗೊಳಿಸುತ್ತಿದ್ದಾರೆ.