ಮಡಿಕೇರಿ, ಅ. ೨೧: ವೀರಾಜಪೇಟೆ ತಾಲೂಕು ಬೇಟೋಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪ್ರಮುಖ ರಸ್ತೆ ಅಭಿವೃದ್ಧಿ ಈಗಾಗಲೇ ಹಣ ಬಿಡುಗಡೆಯಾಗಿದೆ. ಆದರೆ ಮಳೆಯ ಕಾರಣದಿಂದ ಕಾಮಗಾರಿ ಆರಂಭ ವಿಳಂಬವಾಗಿದೆ ಎಂದು ಬೇಟೋಳಿ ಗ್ರಾ.ಪಂ. ಅಧ್ಯಕ್ಷೆ ಬಿ.ಜೆ. ಯಶೋಧ ತಿಳಿಸಿದ್ದಾರೆ. ಪತ್ರಿಕೆಯಲ್ಲಿ ಪ್ರಕಟಗೊಂಡ ‘ಪ್ರತಿನಿಧಿಗಳು- ಅಧಿಕಾರಿಗಳ ನಿರ್ಲಕ್ಷö್ಯಕ್ಕೆ ರಸ್ತೆ ಬಲಿ’ ಎಂಬ ವರದಿಗೆ ಸಂಬAಧಿಸಿದAತೆ ಪತ್ರಿಕಾ ಭವನದಲ್ಲಿ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಈ ರಸ್ತೆ ಅಭಿವೃದ್ಧಿಗೆ ಕೆಲ ತಿಂಗಳ ಹಿಂದೆಯೇ ಅನುದಾನ ಬಿಡುಗಡೆಯಾಗಿದ್ದು, ಕಾಮಗಾರಿ ಕೈಗೆತ್ತಿಕೊಳ್ಳಲು ಮುಂದಾಗಿದ್ದೆವು.

ಆದರೆ ಈ ಭಾಗದಲ್ಲಿ ಮಳೆ ಹೆಚ್ಚಿದ್ದ ಕಾರಣ ಅದು ಸಾಧ್ಯವಾಗಲಿಲ್ಲ. ಮಳೆ ಕಡಿಮೆಯಾದ ನಂತರದಲ್ಲಿ ಕಾಮಗಾರಿ ಆರಂಭಗೊಳ್ಳಲಿದೆ ಎಂದು ಸ್ಪಷ್ಟಪಡಿಸಿದರು. ಈ ವ್ಯಾಪ್ತಿಯಲ್ಲಿರುವ ಕ್ರಷರ್‌ನಿಂದ ಯಾವುದೇ ರೀತಿಯ ಸಮಸ್ಯೆಗಳಾಗುತ್ತಿಲ್ಲ; ಇದರಿಂದ ಯಾವುದೇ ಸಾವು - ನೋವುಗಳು ಸಂಭವಿಸಿಲ್ಲ ಆದರೂ ವಿನಾಕಾರಣ ಅಪವಾದ ಹೊರಿಸಲಾಗಿದೆ ಎಂದು ಯಶೋಧ ಹೇಳಿದರು.

ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಅಚ್ಚಪಂಡ ಮಹೇಶ್ ಗಣಪತಿ ಮಾತನಾಡಿ, ಗ್ರಾಮದ ಕೆಲವೇ ಕೆಲವು ಮಂದಿ ವಾಸ್ತವ ಅರಿಯದೆ ಪಂಚಾಯಿತಿ ಹಾಗೂ ಪ್ರತಿನಿಧಿಗಳ ವಿರುದ್ಧ ನಿರ್ಲಕ್ಷö್ಯದ ಆರೋಪ ಮಾಡಿದ್ದು, ಇದು ಸರಿಯಲ್ಲ ಎಂದು ತಿಳಿಸಿದರು.

ವೀರಾಜಪೇಟೆ ಲಾರಿ ಮಾಲೀಕರ ಸಂಘದ ಅಧ್ಯಕ್ಷ ಸುಮನ್ ಮಾತನಾಡಿ, ಬೂದಿಮಾಳದಲ್ಲಿರುವ ಕ್ರಷರ್‌ನಿಂದಾಗಿ ನೂರಾರು ಲಾರಿ ಚಾಲಕರ, ಸಿಬ್ಬಂದಿಯ ಕುಟುಂಬಗಳು ಜೀವನ ಸಾಗಿಸುತ್ತಿವೆ. ಕ್ರಷರ್‌ನಿಂದ ಭಾರೀ ತೊಂದರೆಯಾಗುತ್ತಿದೆ ಎಂದು ಮಾಡಿರುವ ಆರೋಪ ದುರುದ್ದೇಶ ಪೂರಿತ ಎಂದು ಹೇಳಿದರು. ಗೋಷ್ಠಿಯಲ್ಲಿ ಪಂಚಾಯಿತಿ ಸದಸ್ಯರಾದ ಸುಧೀಶ್, ರಂಜಿತ್, ಗ್ರಾಮಸ್ಥ ಪವನ್ ಉಪಸ್ಥಿತರಿದ್ದರು.