ಮಡಿಕೇರಿ, ಅ. ೨೧: ಪೊನ್ನಂಪೇಟೆ ಅಮ್ಮ ಕೊಡವ ಕಾವೇರಿ ಮಹಿಳಾ ಸಂಘದ ಮಹಾಸಭೆ ತಾ. ೨೩ ರಂದು ಬೆಳಿಗ್ಗೆ ೧೦:೩೦ಕ್ಕೆ ಗೋಣಿಕೊಪ್ಪ ಕಾವೇರಿ ಹಿಲ್ಸ್ ಬಡಾವಣೆಯ ಅಖಿಲ ಅಮ್ಮ ಕೊಡವ ಸಮಾಜದ ಕಟ್ಟಡದಲ್ಲಿ ನಡೆಯಲಿದೆ.
ಸಭೆಯ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷೆ ರೇವತಿ ಪರಮೇಶ್ವರ ಅವರು ವಹಿಸಲಿದ್ದಾರೆ. ಮುಖ್ಯ ಅತಿಥಿಯಾಗಿ ಚೋಟ್ಟೋಳಿಯಮ್ಮಂಡ ರಾಣಿ ಮೋಹನ್ ಭಾಗವಹಿಸಲಿದ್ದಾರೆ.