ಮಡಿಕೇರಿ, ಅ. ೨೦: ಮೈಸೂರಿನ ಯುವಶಕ್ತಿ ಪ್ರಕಾಶನದ ೬ನೇ ಹೆಮ್ಮೆಯ ಪ್ರಕಟಣೆಗಾಗಿ ರಾಜ್ಯಾದ್ಯಂತ ಮತ್ತು ಹೊರ ರಾಜ್ಯದಲ್ಲಿರುವ ಪ್ರತಿಭಾವಂತ ಮಹಿಳೆಯರ ಸಾಧನೆಗಳ ಬಗ್ಗೆ `ಕನ್ನಡ ನಾಡಿನ ಹೆಮ್ಮೆಯ ಸಾಧಕಿಯರು ಸಂಪುಟ-೨' ಪುಸ್ತಕವನ್ನು ೨೦೨೨ರಲ್ಲಿ ಹೊರತರಲು ನಿರ್ಧರಿಸಲಾಗಿದೆ.

ಸಾಹಿತ್ಯ, ನೃತ್ಯ, ಸಂಗೀತ, ಶಿಕ್ಷಣ, ವೈದ್ಯಕೀಯ, ಚಿತ್ರಕಲೆ, ಕೃಷಿ, ಚಿತ್ರರಂಗ, ರಂಗಭೂಮಿ, ಕ್ರೀಡೆ, ಪತ್ರಿಕಾರಂಗ, ಸಮಾಜ ಸೇವೆ, ಸ್ವಂತ ಉದ್ದಿಮೆ ಇತ್ಯಾದಿ ಕ್ಷೇತ್ರಗಳ ಪ್ರತಿಭಾವಂತ ಸಾಧಕಿಯರು ತಮ್ಮ ಬಗ್ಗೆ ವಿವರವನ್ನು ಎ-೪ ಅಳತೆಯ ನಾಲ್ಕು ಪುಟಗಳಿಗೆ ಮೀರದಂತೆ ಡಿ.ಟಿ.ಪಿ. ಮಾಡಿಸಿ, ತಮ್ಮ ಒಂದು ಭಾವಚಿತ್ರದೊಂದಿಗೆ ಕೆಳಗಿನ ವಿಳಾಸಕ್ಕೆ ತಾ. ೩೦.೧೧.೨೦೨೧ರೊಳಗಾಗಿ ಕಳುಹಿಸಿಕೊಡಬೇಕಾಗಿ ಪ್ರಕಟಣೆ ತಿಳಿಸಿದೆ.

ವಿಳಾಸ: ಬಿ. ಬಸವರಾಜು, ಯುವಶಕ್ತಿ ಪ್ರಕಾಶನ, ಶ್ರೀ ಬೀರೇಶ್ವರ ನಿಲಯ, ನಂ. ೨೩೧೮/೧, ಕೆ-೨, ೭ನೇ ಕ್ರಾಸ್, ಬಸವೇಶ್ವರ ರಸ್ತೆ, ಅಗ್ರಹಾರ, ಮೈಸೂರು - ೫೭೦೦೦೪, ಮೊ. ೯೦೩೬೮ ೩೯೭೦೬. ಇmಚಿiಟ: bಚಿsvಚಿಡಿಚಿರಿub೪೦@gmಚಿiಟ.ಛಿom