ಶನಿವಾರಸಂತೆ, ಅ. ೨೦: ಸಮೀಪದ ಕೊಡ್ಲಿಪೇಟೆ ಹೋಬಳಿ ವ್ಯಾಪ್ತಿಯ ದೊಡ್ಡಕೊಡ್ಲಿ ಗ್ರಾಮದಲ್ಲಿ ‘ನಮ್ಮೂರು ಕಳಕಳಿ ವೇದಿಕೆ’ ವತಿಯಿಂದ ಹಿರಿಯ-ಕಿರಿಯ ವಿದ್ಯಾರ್ಥಿಗಳ ಸಮಾಗಮ ಕಾರ್ಯಕ್ರಮವನ್ನು ಆಯೋಜಿಸಿದ್ದು, ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಅಧಿಕ ಅಂಕ ಗಳಿಸಿದ ಸಾಧಕ ವಿದ್ಯಾರ್ಥಿಗಳಾದ ಡಿಶಿಲ್, ಸುಮಿತ್ರಾ ಹಾಗೂ ಗ್ರಾಮದ ಹಿರಿಯರನ್ನು ಸನ್ಮಾನಿಸಿ ಗೌರವಿಸಲಾಯಿತು.
ಮುಖ್ಯ ಅತಿಥಿ ಉಪ ವಲಯ ಅರಣ್ಯಾಧಿಕಾರಿ ಗೋವಿಂದರಾಜ್ ಮಾತನಾಡಿ, ವಿದ್ಯೆ ಮನುಷ್ಯನನ್ನು ಸಂಸ್ಕಾರವAತನನ್ನಾಗಿಸುತ್ತದೆ. ಪ್ರಸ್ತುತ ದೇಶದ ಗಂಭೀರ ಸಮಸ್ಯೆಗಳಾದ ಬಡತನ, ನಿರುದ್ಯೋಗವನ್ನು ಹೋಗ ಲಾಡಿಸಿ ವ್ಯಕ್ತಿಯನ್ನು ಸದೃಢರನ್ನಾಗಿ ಸಲು ಸಹಕಾರಿಯಾಗಿದೆ ಎಂದರು.
ಕೊಡ್ಲಿಪೇಟೆ ಕ್ಲಸ್ಟರ್ನ ಸಂಪನ್ಮೂಲ ವ್ಯಕ್ತಿ ಸುರೇಶ್ ಮಾತನಾಡಿ, ಗ್ರಾಮದ ಹಿರಿಯ-ಕಿರಿಯ ವಿದ್ಯಾರ್ಥಿಗಳನ್ನೆಲ್ಲಾ ಒಂದುಗೂಡಿಸಿದ ಈ ವಿದ್ಯಾರ್ಥಿಗಳ ಸಮಾಗಮ ಕಾರ್ಯ ವಿಶಿಷ್ಟ ಹಾಗೂ ವಿನೂತನ ಕಾರ್ಯಕ್ರಮವಾಗಿದೆ. ಒಂದನೇ ತರಗತಿಯಿಂದ ಉನ್ನತ ವ್ಯಾಸಂಗ ಮಾಡುತ್ತಿರುವ ಎಲ್ಲಾ ವಿದ್ಯಾರ್ಥಿಗಳನ್ನು ವೇದಿಕೆಯಲ್ಲಿ ಕರೆದು ನೆನಪಿನ ಕಾಣಿಕೆ ನೀಡಿರುವುದು ಹೆಮ್ಮೆಯ ವಿಚಾರ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಗ್ರಾಮದ ಹಳೇ ವಿದ್ಯಾರ್ಥಿ ಹಾಗೂ ಚೆನ್ನಪಟ್ಟಣ ಪಿಯು ಕಾಲೇಜಿನ ಪ್ರಾಂಶುಪಾಲ ಡಿ.ಸಿ. ಸುರೇಶ್ ಮಾತನಾಡಿ, ಗ್ರಾಮದ ಬಡ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸ ಲೆಂದೇ ಕಳಕಳಿಯ ವೇದಿಕೆ ರೂಪಿಸಲಾಗಿದೆ. ಕೋವಿಡ್, ಲಾಕ್ಡೌನ್ನಿಂದಾಗಿ ಶಾಲೆಯ ವಾತಾವರಣ ತಪ್ಪಿದ ವಿದ್ಯಾರ್ಥಿಗಳಲ್ಲಿ ಶಿಕ್ಷಣದ ಬಗ್ಗೆ ಆಸಕ್ತಿ, ಒಲವು ಮೂಡಿಸುವುದೇ ಗುರಿಯಾಗಿದೆ ಎಂದರು.
ಡಿ.ಸಿ. ನಿರ್ವಾಣಪ್ಪ ಕಾರ್ಯ ಕ್ರಮದ ಅಧ್ಯಕ್ಷತೆ ವಹಿಸಿದ್ದರು. ಹಳೇ ಹಾಗೂ ಹೊಸ ವಿದ್ಯಾರ್ಥಿಗಳು, ‘ನಮ್ಮೂರು ಕಳಕಳಿ ವೇದಿಕೆ’ ಅಧ್ಯಕ್ಷ ಡಿ.ಬಿ. ಸತೀಶ್ ಅರಸ್, ಆಟೋ ಚಾಲಕರ ಸಂಘದ ಅಧ್ಯಕ್ಷ ಸೋಮಣ್ಣ, ಪರಶುರಾಮ ಯುವಕ ಸಂಘದ ಅಧ್ಯಕ್ಷ ಕೇಶವ, ಕಲಾತಂಡದ ಅಧ್ಯಕ್ಷ ಜಗದೀಶ್, ಸದಸ್ಯ ವಸಂತ್, ಗ್ರಾಮ ಪಂಚಾಯಿತಿ ಮಾಜಿ ಸದಸ್ಯರಾದ ಹೊನ್ನಮ್ಮ, ಕೆಂಚೇಶ್ವರ್, ನವೀನ್, ಎಸ್.ಪಿ. ವಸಂತ್ ಹಾಜರಿದ್ದರು.