ಮಡಿಕೇರಿ, ಅ. ೨೦: ಹಾನಗಲ್ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಶ್ರೀನಿವಾಸ್ ಮಾನೆ ಅವರ ಪರವಾಗಿ ಕೊಡಗಿನ ಕಾಂಗ್ರೆಸ್ ಮುಖಂಡರುಗಳು ಪ್ರಚಾರ ನಡೆಸಿದರು. ವಿಧಾನ ಪರಿಷತ್ ಸದಸ್ಯೆ ವೀಣಾ ಅಚ್ಚಯ್ಯ, ಕೆಪಿಸಿಸಿ ಸಂಯೋಜಕ ಮಂಜುನಾಥ್ ಗುಂಡೂರಾವ್, ಮಾಹಿತಿ ಹಕ್ಕು ಘಟಕದ ಉಪಾಧ್ಯಕ್ಷೆ ಕಡೇಮಾಡ ಕುಸುಮಾ, ಮಾಜಿ ಸಚಿವರು ಹಾಲಿ ಶಾಸಕರಾದ ಕೃಷ್ಣಭೈರೇಗೌಡ, ಶಾಸಕ ಶಿವಣ್ಣ ಮತ್ತು ಸ್ಥಳೀಯ ಮುಖಂಡರುಗಳೊAದಿಗೆ ಸೇರಿ ಹಿರೂರು ಜಿಲ್ಲಾ ಪಂಚಾಯತ್ ಕ್ಷೇತ್ರ ವ್ಯಾಪ್ತಿಯ ಗ್ರಾಮಗಳಲ್ಲಿ ಪ್ರಚಾರ ಕಾರ್ಯ ನಡೆಸುತ್ತಿದ್ದಾರೆ.