ಮಡಿಕೇರಿ, ಅ. ೨೧: ವಿವಿಧ ಇಲಾಖೆಗಳ ಅಭಿವೃದ್ಧಿ ಕಾರ್ಯ ಸಂಬAಧಿಸಿದAತೆ ಭೂಮಿ ಒದಗಿಸಲು ಪ್ರಥಮ ಆದ್ಯತೆ ನೀಡುವಂತೆ ತಹಶೀಲ್ದಾರ್ ಅವರಿಗೆ ಜಿಲ್ಲಾಧಿಕಾರಿ ಡಾ. ಬಿ.ಸಿ. ಸತೀಶ ನಿರ್ದೇಶನ ನೀಡಿದ್ದಾರೆ.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಗುರುವಾರ ನಡೆದ ಕಂದಾಯಾಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಗೆ ಅಂಗನವಾಡಿ ನಿರ್ಮಾಣಕ್ಕೆ ಜಾಗ. ಹಾಗೆಯೇ ವಿವಿಧ ಇಲಾಖೆಗಳ ಸರ್ಕಾರಿ ಕಚೇರಿಗಳು, ಸಮುದಾಯ ಭವನ, ಹಾಸ್ಟೆಲ್‌ಗಳ ನಿರ್ಮಾಣ, ವಸತಿ ಯೋಜನೆಗಳು, ಸ್ಮಶಾನಕ್ಕೆ ಭೂಮಿ ಹೀಗೆ ವಿವಿಧ ಉದ್ದೇಶಗಳಿಗೆ ಜಾಗ ಬೇಕಿದ್ದು, ಈ ಸಂಬAಧ ತ್ವರಿತವಾಗಿ ಸರ್ಕಾರಿ ಭೂಮಿಯನ್ನು ಗುರುತಿಸಿ, ಸರ್ವೆ ಕಾರ್ಯ ಮಾಡಿ ಸಂಬAಧಪಟ್ಟ ಇಲಾಖೆಗಳಿಗೆ ಕಾಯ್ದಿರಿಸು ವಂತಾಗಬೇಕು.

ವಿವಿಧ ಇಲಾಖೆಗಳು ತಮ್ಮ ಇಲಾಖೆ ವ್ಯಾಪ್ತಿಗೆ ಅಭಿವೃದ್ಧಿ ಕಾರ್ಯಗಳಿಗೆ ಸಂಬAಧಿಸಿದAತೆ ಸರ್ಕಾರದಿಂದ ಬಂದಿರುವ ಪ್ರಸ್ತಾವನೆಯಂತೆ ಜಾಗ ಕಾಯ್ದಿರಿಸಲು ಮನವಿ ಸಲ್ಲಿಸಬೇಕು. ಈಗಾಗಲೇ ಪ್ರಸ್ತಾವನೆ ಸಲ್ಲಿಸಿರುವುದಕ್ಕೆ ತ್ವರಿತವಾಗಿ ಭೂಮಿ ಕಾಯ್ದಿರಿಸಿ ಸಂಬAಧಪಟ್ಟ ಇಲಾಖೆಗಳಿಗೆ ಆರ್‌ಟಿಸಿ ಒದಗಿಸು ವಂತೆ ತಹಶೀಲ್ದಾರರಿಗೆ ಸೂಚಿಸಿದರು.

ಹೆಚ್ಚುವರಿ ಜಿಲ್ಲಾಧಿಕಾರಿ ರಾಜು ಮೊಗವೀರ ಅವರು ವಿವಿಧ ಇಲಾಖೆಗಳ

(ಮೊದಲ ಪುಟದಿಂದ) ಅಭಿವೃದ್ಧಿ ಕಾರ್ಯಕ್ಕೆ ಸಂಬAಧಿಸಿ ಬೇಡಿಕೆಗೆ ತಕ್ಕಂತೆ ಜಾಗ ಕಾಯ್ದಿರಿಸುವಂತೆ ಸೂಚಿಸಿದರು. ಉಪ ವಿಭಾಗಾಧಿಕಾರಿ ಈಶ್ವರ ಕುಮಾರ್ ಖಂಡು, ಭೂ ದಾಖಲೆಗಳ ಉಪ ನಿರ್ದೇಶಕ ಪಿ. ಶ್ರೀನಿವಾಸ್, ತಹಶೀಲ್ದಾರರಾದ ಪಿ.ಎಸ್. ಮಹೇಶ್, ಗೋವಿಂದರಾಜು, ಯೋಗಾನಂದ, ಪ್ರಕಾಶ್, ಕೃಷಿ ಇಲಾಖೆಯ ಜಂಟಿ ನಿರ್ದೇಶಕಿ ಶಬನಾ ಎಂ. ಶೇಖ್, ಐಟಿಡಿಪಿ ಇಲಾಖೆ ಅಧಿಕಾರಿ ಶ್ರೀನಿವಾಸ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಿಡಿಪಿಒ ಅರುಂಧತಿ, ಪಶು ಪಾಲನಾ ಇಲಾಖೆಯ ಉಪ ನಿರ್ದೇಶಕ ಸುರೇಶ್ ಭಟ್, ತೋಟಗಾರಿಕೆ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಪ್ರಮೋದ್, ಕಂದಾಯ ಇಲಾಖೆಯ ವಿವಿಧ ಹಂತದ ಅಧಿಕಾರಿಗಳು ಇದ್ದರು.