ವೀರಾಜಪೇಟೆ, ಅ. ೨೦: ಗ್ರಾಮದ ಪ್ರಮುಖ ರಸ್ತೆಯು ಹೊಂಡಾಗುAಡಿ ಯಾಗಿದ್ದು, ಮೂಲಭೂತ ಸೌಕರ್ಯ ಒದಗಿಸುವಲ್ಲಿ ಸ್ಥಳೀಯ ಆಡಳಿತ ವಿಫಲವಾಗಿದೆ., ಪ್ರಮುಖ ರಸ್ತೆಗೆ ತೆರಳುವ ಸಂಪರ್ಕ ರಸ್ತೆಯಲ್ಲಿ ಸಂಚಾರಕ್ಕೆ ಯೋಗ್ಯವಲ್ಲದ ಸ್ಥಿತಿ ನಿರ್ಮಾಣವಾಗಿದೆ. ಜನಪತ್ರಿನಿಧಿಗಳು ಸೇರಿದಂತೆ ಇಲಾಖೆಯ ಅಧಿಕಾರಿಗಳ ನಿರ್ಲಕ್ಷö್ಯಕ್ಕೆ ರಸ್ತೆ ಬಲಿಯಾಗಿದೆ.
ವೀರಾಜಪೇಟೆ ತಾಲೂಕು ಬೇಟೋಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಲೋಕೋಪಯೋಗಿ ಪ್ರಮುಖ ರಸ್ತೆಯ ಸ್ಥಿತಿ ಶೋಚನಿಯವಾಗಿದೆ. ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೆಗ್ಗಳ ಬೂದಿಮಾಳ, ರಾಮನಗರ ರಸ್ತೆಗಾಗಿ ಪಾಲಂಗಾಲ ಕರಡ ಮಾರ್ಗವಾಗಿ ಭಾಗಮಂಡಲ ಸಂಪರ್ಕಿಸುವ ಪ್ರಮುಖ ರಸ್ತೆಯಾಗಿದೆ. ಬೂದಿಮಾಳ ಗ್ರಾಮವು ಕಸ್ತೂರಿ ರಂಗನ್ ವರದಿಯಲ್ಲಿ ಉಲ್ಲೇಖವಾದಂತೆ ಸೂಕ್ಷö್ಮ ವಲಯಕ್ಕೆ ಒಳಪಡುತ್ತದೆ. ಬೂದಿಮಾಳ ಜಂಕ್ಷನ್‌ನಲ್ಲಿ ಮಧ್ಯಭಾಗದಲ್ಲಿ ಹಾದುಹೋಗುವ ಸುಮಾರು ೨೦೦ ಮೀಟರ್ ರಸ್ತೆಯ ಅಲ್ಲಲ್ಲಿ ಬೃಹತ್ ಗುಂಡಿಗಳು ಕಾಣಸಿಗುತ್ತವೆ.
ಮಳೆಗಾಲದಲ್ಲಿ ಗುಂಡಿಗಳಲ್ಲಿ ನೀರು ತುಂಬಿಕೊAಡು ರಸ್ತೆಯಲ್ಲಿ ಸಾಗುವ ದಿನನಿತ್ಯದ ನೂರಾರು ವಾಹನ ಸವಾರರಿಗೆ ಕಿರಿಕಿರಿ ಅನುಭವವಾಗುತ್ತದೆ. ದಶಕಗಳಿಂದ ರಸ್ತೆ ದುರಸ್ತಿ ಮಾಡುವಂತೆ ಅರ್ಜಿ ಸಲ್ಲಿಸಿದರೂ ಇಲಾಖಾಧಿಕಾರಿಗಳು ಮೌನಕ್ಕೆ ಶರಣಾಗಿದ್ದಾರೆ. ಈ ಭಾಗದ ಗ್ರಾಮಸ್ಥರು ಜನಪ್ರತಿನಿಧಿಗಳಿಗೆ, ಇಲಾಖೆಯ ಅಧಿಕಾರಿಗಳಿಗೆ, ಗ್ರಾಮ ಪಂಚಾಯಿತಿ ಸೇರಿದಂತೆ ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿದರೂ ದಿವ್ಯ ನಿರ್ಲಕ್ಷö್ಯ ತೋರಿದ್ದಾರೆ ಎಂದು ಈ ಭಾಗದ ಗ್ರಾಮಸ್ಥರು ಆರೋಪಿಸುತ್ತಾರೆ.
ಅಲ್ಲದೆ ಬೂದಿಮಾಳ ಗ್ರಾಮದ ಮತ್ತೊಂದು ಪ್ರಮುಖ ಸಮಸ್ಯೆ ಅಂದರೆ ಬೂದಿಮಾಳ ಪ್ರಮುಖ ರಸ್ತೆಯಿಂದ ಗ್ರಾಮ ಪಂಚಾಯಿತಿ ನಿರ್ಮಿಸಿರುವ ಕೀರ್ತಿಶ್ವರ ದೇವಾಲಯ ಮತ್ತು ಕೊಟ್ಟಚ್ಚಿ ಗ್ರಾಮಕ್ಕೆ ತೆರಳುವ ರಸ್ತೆ. ಒಮ್ಮೇ ಕಣ್ಣು ಹಾಯಿಸಬೇಕು..! ರಸ್ತೆ ಅಲ್ಲ ಕಾಲುದಾರಿಯಂತೆ ಡಾಂಬರ್ ಕಿತ್ತುಬಂದು ಜಲ್ಲಿಕಲ್ಲುಗಳ ದರ್ಶನವಾಗುತ್ತದೆ. ಈ ರಸ್ತೆಗೆ ಹೊಂದಿಕೊAಡಿರುವ ಖಾಸಗಿ ಒಡೆತನದ ಕ್ರಷರ್ ಕಂಪೆನಿಯಿAದ ದಿನನಿತ್ಯ ನೂರಕ್ಕೂ ಅಧಿಕ ಟಿಪ್ಪರ್ ಲಾರಿಗಳು ಕಲ್ಲು ತುಂಬಿಸಿಕೊAಡು ತೆರಳುತ್ತವೆ. ರಸ್ತೆಯ ಇಕ್ಕೆಲಗಳಲ್ಲಿ ಭೂಮಟ್ಟದಿಂದ ಸುಮಾರು ೬೦ ಅಡಿ ಎತ್ತರದಲ್ಲಿ ಕಾಣಸಿಗುವ ಕಲ್ಲಿನ ರಾಶಿಗಳು (ಅಂದರೆ ಕಲ್ಲಿನ ಬೆಟ್ಟವೇ ನಿರ್ಮಾಣ ವಾದಂತೆ) ಕ್ರಷರ್‌ನಿಂದ ಉತ್ಪಾದನೆಯಾಗುವ ಬೇಬಿ ಜಲ್ಲಿ, ಕಲ್ಲಿನ ಪುಡಿಗಳು ಸಣ್ಣ ಮಧ್ಯಮ ಮತ್ತು ದೊಡ್ಡ ಗಾತ್ರದ ಕಲ್ಲುಗಳನ್ನು ಶೇಖರಣೆ ಮಾಡಿದ್ದು ಇದೀಗ ಗ್ರಾಮಕ್ಕೆ ತೆರಳುವವರಿಗೆ ರಸ್ತೆಯ ಪರಿಚಯವಿಲ್ಲದಾಗಿದೆ.
ಕಾಯಿಲೆಗೆ ದಾರಿ: ಗ್ರಾಮ ಪಂಚಾಯಿತಿ ನಿರ್ಮಾಣದ ರಸ್ತೆಯನ್ನು ಕ್ರಷರ್ ನುಂಗಿತ್ತಾ? ಎಂಬ ಪ್ರಶ್ನೆ ಈ ಪ್ರದೇಶದ ಗ್ರಾಮಸ್ಥರ ಮನದಲ್ಲಿ ಉದ್ಭವವಾಗಿದೆ. ಖಾಸಗಿ ಕ್ರಷರ್ ಕಂಪೆನಿಯ ಬೃಹತ್ ಗಾತ್ರದ ಯಂತ್ರಗಳು ಹೊರಸೂಸುವ ದಟ್ಟವಾದ ದೂಳಿನಿಂದ ಮತ್ತು ಗಣಿಯಲ್ಲಿ ಬಳಸಲಾಗುವ ರಾಸಾಯನಿಕ ದ್ರವವು ನೀರಿನಲ್ಲಿ ಬೆರೆತು ಜಲಮೂಲಗಳು ವಿಷಕಾರಕವಾಗಿ ಪರಿಣಮಿಸಿದೆ. ಸುಮಾರು ಅರ್ಧ ಕಿಮೀ ವ್ಯಾಪ್ತಿ ಪ್ರದೇಶದಲ್ಲಿ ವಾಸ ಮಾಡುವ ಗ್ರಾಮಸ್ಥರಲ್ಲಿ ಕ್ಯಾನ್ಸರ್Àನಂತಹ ಕಾಯಿಲೆ ಕಾಡುತ್ತಿದೆ. ಅಲ್ಲದೆ ಈ ಪ್ರದೇಶದ ಕೆಲವು ಮಂದಿ ಕ್ಯಾನ್ಸರ್‌ನಿಂದ ಮರಣಹೊಂದಿದ್ದಾರೆ. ಇನ್ನೂ ಅನೇಕರು ವಾಯುಮಾಲಿನ್ಯದಿಂದಾಗಿ ವಿವಿಧ ರೋಗರುಜಿನಗಳಿಂದ ಬಳಲುತ್ತಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. ಗ್ರಾಮದ ಪ್ರಮುಖ ಸಮಸ್ಯೆಗಳಿಗೆ ಸ್ಪಂದನ ನೀಡದೆ ಜನಪ್ರತಿನಿಧಿಗಳು ಕಣ್ಣಿದ್ದು ಕುರುಡರಾಗಿದ್ದಾರೆ. ಗ್ರಾಮದ ಸಮಸ್ಯೆಗಳ ಬಗ್ಗೆ ಗ್ರಾಮಸ್ಥರು ಹಲವು ವರ್ಷಗಳಿಂದ ಹೋರಾಟ ಮಾಡುತ್ತಾ ಬಂದಿದ್ದು, ಪರಿಹಾರ ಮಾತ್ರ ಶೂನ್ಯವಾಗಿದೆ ಎಂದು ಹೇಳುತ್ತಾರೆ.
ವೀರಾಜಪೇಟೆ ತಾಲೂಕು ಬೇಟೋಳಿ ಪಂಚಾಯಿತಿ ವ್ಯಾಪ್ತಿಯ ಬೂದಿಮಾಳ ಗ್ರಾಮದ ಪಂಚಾಯಿತಿ ರಸ್ತೆ ಮತ್ತು ಲೋಕೋಪಯೋಗಿ ಇಲಾಖೆಗೆ ಸೇರಿದ ಪ್ರಮುಖ ರಸ್ತೆ ದುರಸ್ತಿಗೆ ಕ್ರಮಕೈಗೊಳ್ಳಬೇಕು. ಅಲ್ಲದೆ ಗ್ರಾಮದಲ್ಲಿ ನಡೆಯುತ್ತಿರುವ ಗಣಿಯಿಂದ ಹೊರಸೂಸುವ ರಾಸಾಯನಿಕ ದ್ರವವು ನೀರಿನೊಂದಿಗೆ ಬೆರೆತು ಜಲಮೂಲಗಳಿಗೆ ಧಕ್ಕೆಯಾಗಿದೆ. ಗಣಿಗಾರಿಕೆಯಿಂದ ಸಾವುನೋವುಗಳು ಸಂಭವಿಸಿದೆ. ಇಂತಹ ಗಂಭೀರವಾದ ಸಮಸ್ಯೆಗಳನ್ನು ಇಲಾಖೆಯು ಸೇರಿದಂತೆ ಜಿಲ್ಲಾಡಳಿತ ಹಾಗೂ ಸರ್ಕಾರವು ಸೂಕ್ತ ಕ್ರಮಕ್ಕೆ ಮುಂದಾಗಬೇಕು. ತಕ್ಷಣವೇ ಕಾರ್ಯಪ್ರವೃತ್ತರಾಗಿ ಗ್ರಾಮಸ್ಥರಿಗೆ ನ್ಯಾಯ ದೊರಕಿಸು ವಂತಾಗಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.
-ಕಿಶೋರ್ ಕುಮಾರ್ ಶೆಟ್ಟಿ